ಸ್ವಾಮೀಜಿ, ಶಾಸಕರ ವಿರುದ್ಧ ದೂರು ದಾಖಲು
ಕ.ಪ್ರ. ವಾರ್ತೆ ಕೆ.ಆರ್. ನಗರ ಜು. 17
ಸ್ವಾಮೀಜಿಗಳು, ಶಾಸಕರ ವಿರುದ್ಧವೇ ದೂರು ನೀಡಿದ ಸಾರ್ವಜನಿಕರು ಲೋಕಾಯುಕ್ತ ಅಧಿಕಾರಿಗಳು ಹುಬ್ಬೇರಿಸುವಂತೆ ಮಾಡಿದ ಪ್ರಸಂಗ ಬುಧುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಯಿತು.
ತಾಲೂಕಿನ ಚೌಕಹಳ್ಳಿ ಗ್ರಾಮದ ಮಂಜಯ್ಯ ಎಂಬ ಶತಾಯುಷಿ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ ಮತ್ತು ಚುಂಚನಕಟ್ಟೆ ಶಾಖಾ ಮಠದ ಶಿವಾನಂದ ಶ್ರೀಗಳ ವಿರುದ್ಧ ದೂರು ನೀಡಿ ಸರ್ವೆ ನಂಬರ್ 114ರ 0.20 ಗುಂಟೆ ಜಾಗವನ್ನು ನನಗೆ ಅಪಘಾತವಾಗಿ ಪ್ರಜ್ಞೆ ಇಲ್ಲದ ಸಮಯದಲ್ಲಿ ನನ್ನಿಂದ ಸಹಿ ಹಾಕಿಸಿಕೊಂಡು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ದೂರಿದರು.
ಕೂಡಲೇ ತಾವು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಮಂಜಯ್ಯ, ಇದು ಮುಜರಾಯಿ ಇಲಾಖೆಗೆ ಸೇರಿದ ಆಸ್ತಿಯಾಗಿದ್ದು, ಖಾತೆಯನ್ನು ಕೂಡಲೆ ರದ್ದುಪಡಿಸಿ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು.
ಬ್ಯಾಡರಹಳ್ಳಿ ಗ್ರಾಮದ ಹಿರಣ್ಯರಾಜೇಅರಸ್ ದೂರು ನೀಡಿ, ಕ್ಷೇತ್ರದ ಶಾಸಕರು, ತಾಲೂಕು ತಹಸೀಲ್ದಾರ್ರು ನಾನು ನ್ಯಾಯ ಕೇಳಲು ಹೋದರೆ ಗಲಾಟೆ ಮಾಡಿ ನನ್ನ ಮನೆ ಮತ್ತು ಖಾಲಿ ನಿವೇಶನಕ್ಕೆ ತೊಂದರೆ ನೀಡುತ್ತಿದ್ದು, ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದರು.
ಈ ದೂರುಗಳ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಲೋಕಾಯುಕ್ತ ಇನ್ಸ್ಪೆಕ್ಟರ್ ಗೋಪಾಲಕೃಷ್ಣ, ಯಾರೇ ದೂರು ನೀಡಿದರೂ ಅದನ್ನು ಸಂಬಂಧಿತ ಇಲಾಖೆಯ ಗಮನಕ್ಕೆ ತರಬೇಕಾದುದು ನಮ್ಮ ಕರ್ತವ್ಯ. ಹಾಗೆಯೇ ಈ ಪ್ರಕರಣದಲ್ಲಿಯೂ ಕ್ರಮಕ್ಕೆ ಶಿಫಾರಸು ಮಾಡುತ್ತೇನೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

