ಮೈಸೂರು

ಇಂದು ಕೊಪ್ಪದಲ್ಲಿ ಗ್ರಾಮಸಭೆ

Published On :

ಬೈಲುಕುಪ್ಪೆ: ಇಲ್ಲಿಗೆ ಸಮೀಪದ ಕೊಪ್ಪ ಗ್ರಾಪಂ ಆವರಣದಲ್ಲಿ ಜು.19 ರಂದು ಗ್ರಾಪಂ ಅಧ್ಯಕ್ಷೆ ಗಂಗಾಂಬಿಕೆ ಅವರ ಅಧ್ಯಕ್ಷತೆಯಲ್ಲಿ ಗ್ರಾಮಸಭೆ ನಡೆಯಲಿದೆ. ಗ್ರಾಮಸಭೆಗೆ ಜಿಪಂ ಸದಸ್ಯ ಕಾವೇರಿ ಶೇಖರ್, ತಾಪಂ ಅಧ್ಯಕ್ಷ ರವಿನಾಯಕ್, ತಾಪಂ ಸದಸ್ಯ ನವಿಲೂರು ಮಹದೇವ್, ನೋಡಲ್ ಅಧಿಕಾರಿ ಎಚ್.ಎನ್. ದೇವುಕುಮಾರ್, ಕೊಪ್ಪ ಗ್ರಾಪಂ ಚುನಾಯಿತ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿ, ರೈತರ ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಚರ್ಚಿಸುವರು. ಸಾರ್ವಜನಿಕರು ಭಾಗವಹಿಸುವಂತೆ ಕೊಪ್ಪ ಗ್ರಾಪಂ ಅಭಿವೃದ್ದಿ ಅಧಿಕಾರಿ
ಕೋರಿದ್ದಾರೆ.
ಶಂಕರ್ಗೆ ಟಿಕೆಟ್ ನೀಡಲು ಒತ್ತಾಯ
ಟಿ. ನರಸೀಪುರ: ಕಾಂಗ್ರೆಸ್ ಮುಖಂಡ ಎಸ್.ಶಂಕರ್ಗೆ ವಿಧಾನ ಪರಿಷತ್ ಟಿಕೆಟ್ ನೀಡುವಂತೆ ತಾಲೂಕಿನ ಡಾ. ಬಾಬು ಜಗಜೀವನ ರಾಮ್ ಯುವ ಹವ್ಯಾಸಿ ಕಲಾ ಸಂಘದ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ರಾಮಚಂದ್ರ ಹಾಗೂ ಸದಸ್ಯರಾದ ಸಿ.ಪ್ರವೀಣ್, ರಂಗನಾಥ್, ಶಂಕರ, ಎಸ್. ಕೃಷ್ಣ, ಕೆ. ಸ್ವಾಮಿ ಒತ್ತಾಯಿಸಿದ್ದಾರೆ.
ಅಂಗನವಾಡಿಗಳಿಗೆ ನೇಮಕಾತಿ
ಎಚ್.ಡಿ. ಕೋಟೆ: ತಾಲೂಕಿನಲ್ಲಿರುವ ಅಂಗವಾಡಿ ಕೇಂದ್ರಗಳಿಗೆ ನಾಲ್ಕು ಕಾರ್ಯಕರ್ತೆಯರು ಹಾಗೂ 18 ಸಹಾಯಕಿಯರ ಹುದ್ದೆ ಖಾಲಿ ಇದ್ದು, ಸ್ಥಳೀಯ ಗ್ರಾಮದವರು ತಮ್ಮ ಅರ್ಜಿ ಸಲ್ಲಿಸುವಂತೆ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ರಾಮಕೃಷ್ಣಯ್ಯ ಹೇಳಿದ್ದಾರೆ. ಅರ್ಜಿ ಸಲ್ಲಿಸಲು ಆ.5 ಕಡೆಯ ದಿನವಾಗಿದ್ದು, ಆಕಾಂಕ್ಷಿಗಳು ತಮ್ಮ ಪೂರ್ಣ ವಿವರಗಳೊಂದಿಗೆ ಸಲ್ಲಿಸಬಹುದು. ಅರ್ಜಿಗಳು ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿಗಳ ಕಚೇರಿಯಲ್ಲಿ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.