'ಐಟಿ ದಾಳಿಯಿಂದ ಧಾರ್ಮಿಕ ಭಾವನೆಗೆ ಧಕ್ಕೆ'
ಕ.ಪ್ರ.ವಾರ್ತೆ ನಂಜನಗೂಡು ಜು. 19
ಬೆಂಗಳೂರಿನ ಬಿಜಿಎಸ್ ಶಿಕ್ಷಣ ಸಂಸ್ಥೆ ಹಾಗೂ ಅದರ ಮಠಗಳ ಮೇಲೆ ದಾಳಿ ನಡೆಸಿರುವುದು, ಧಾರ್ಮಿಕ ಭಾವನೆಗೆ ಧಕ್ಕೆ ತರುವ ಷಡ್ಯಂತ್ರವಾಗಿದೆ ಎಂದು ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎನ್. ನರಸಿಂಹಸ್ವಾಮಿ ಹೇಳಿದರು.
ಇಲ್ಲಿನ ಹುಲ್ಲಹಳ್ಳಿ ವೃತ್ತದ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ರಸ್ತೆ ತಡೆ ನಡೆಸಿ, ಪ್ರತಿಭಟಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹಾಗೂ ಒಕ್ಕಲಿಗರ ವಿರೋಧಿ ನೀತಿ ಖಂಡಿಸಿ ಘೋಷಣೆ ಕೂಗಿದರು.
ಎನ್. ನರಸಿಂಹಸ್ವಾಮಿ ಮಾತನಾಡಿ, ಧಾರ್ಮಿಕ ಸಂಸ್ಥೆಗಳು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಅದರಲ್ಲೂ ಆದಿಚುಂಚನಗಿರಿ ಮಹಾಸಂಸ್ಥಾನ ರಾಜ್ಯಾದ್ಯಂತ 475ಕ್ಕೂ ಅಧಿಕ ವಿದ್ಯಾಸಂಸ್ಥೆ ಸ್ಥಾಪಿಸಿ ಗ್ರಾಮೀಣ ಬಡ ಜನತೆಯ ಆಶಾಕಿರಣವಾಗಿದೆ.
ಸರ್ಕಾರ ಮಾಡಲಾಗದ ಅನೇಕ ಬಡ ಜನರ ಸೇವೆಗಳನ್ನು ಮಠಗಳು ನಿರ್ವಹಿಸುತ್ತಿವೆ. ಧಾರ್ಮಿಕ ಸಂಸ್ಥೆಗಳ ಮೇಲೆ ಈ ದಾಳಿ ನಡೆಸುವುದರಿಂದ ಸಂಸ್ಥೆಯ ಆತ್ಮವಿಶ್ವಾಸ ಕುಗ್ಗಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಒಕ್ಕಲಿಗರ ಸಂಘದ ಮುಖಂಡರಾದ ಜಿ. ಕಿಟ್ಟಪ್ಪ, ಜಿ. ಗೋವಿಂದರಾಜು, ಪುರಸಭಾ ಸದಸ್ಯರಾದ ಎನ್.ಎಂ. ಮಂಜುನಾಥ್, ರಾಜೇಶ್, ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಗಂಗಾಧರಗೌಡ, ಮಾಜಿ ಪುರಸಭಾಧ್ಯಕ್ಷ ಎನ್. ಶ್ರೀನಿವಾಸ್, ವಿಚಾರ ವೇದಿಕೆ ಜಗದೀಶ್, ಒಕ್ಕಲಿಗ ಯುವ ಮುಖಂಡರಾದ ಜಯರಾಂ, ದಿನೇಶ್, ಜಯಕುಮಾರ್, ಉಮೇಶ್, ರವಿಕುಮಾರ್, ಗುತ್ತಿಗೆದಾರರು ನಾಗರಾಜಯ್ಯ, ಕೃಷ್ಣಮೂರ್ತಿ, ದೀಪು, ಸತೀಶ್ಗೌಡ, ಉದ್ಯಮಿ ಮಹದೇವು, ಬಿಜೆಪಿ ಮುಖಂಡರಾದ ಮಹದೇವು, ನಾಗರಾಜು, ಶಿವಕುಮಾರ್, ನಿವೃತ್ತ ಅಧಿಕಾರಿ ಶಿವನಂಜೇಗೌಡ, ನಂಜುಂಡಸ್ವಾಮಿ ಇದ್ದರು.
ರೈತ ಸಮಾವೇಶಕ್ಕೆ ರೈಲು ವ್ಯವಸ್ಥೆ
ಹುಣಸೂರು: ರೈತ ಹುತಾತ್ಮರ ದಿನಾಚರಣೆ ಅಂಗವಾಗಿ ಗದಗ ಜಿಲ್ಲೆ ಮುಂಡರಗಿ ತಾಲೂಕಿನಲ್ಲಿ ಜು. 21ರಂದು ನಡೆಯುವ ರೈತರ ಬೃಹತ್ ಸಮಾವೇಶದಲ್ಲಿ ಭಾಗವಹಿಸುವವರು ಜು. 20ರ ರಾತ್ರಿ 10ಕ್ಕೆ ಮೈಸೂರು ರೇಲ್ವೆ ನಿಲ್ದಾಣಕ್ಕೆ ಆಗಮಿಸಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

