ಸರ್ಕಾರಿ ಸೌಲತ್ತು ಅರ್ಹರಿಗೆ ತಲುಪಿಸಿ
ಕ.ಪ್ರ.ವಾರ್ತೆ ಭೇರ್ಯ ಜು. 19
ಸರ್ಕಾರದ ವಿವಿಧ ಇಲಾಖೆಯ ಸವಲತ್ತುಗಳನ್ನು ನೇರ ಬಡವರಿಗೆ ತಲುಪಿಸಿದಾಗ ಮಾತ್ರ ಗ್ರಾಮಸಭೆ ಯಶಸ್ವಿಯಾಗುತ್ತದೆ ಎಂದು ಗ್ರಾಪಂ ಅಧ್ಯಕ್ಷೆ ಅನಿತಾ ಅಮರ್ ಹೇಳಿದರು.
ಕೆ.ಆರ್. ನಗರ ತಾಲೂಕಿನ ಹೊಸ ಅಗ್ರಹಾರ ಹೋಬಳಿಯ ಮುಂಜನಹಳ್ಳಿ ಗ್ರಾಪಂ ಆವರಣದಲ್ಲಿ ಏರ್ಪಡಿಸಿದ್ದ ಗ್ರಾಮ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಭೆ ಕಳೆದ ಒಂದು ವಾರದ ಹಿಂದೆಯೆ ನಡೆಯಬೇಕಿತ್ತು. ಆದರೆ, ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಗ್ರಾಮ ಸಭೆಗೆ ಬರುವಂತೆ, ಆಹ್ವಾನ ಪತ್ರಿಕೆ ನೀಡಿದ್ದರೂ ಸಭೆಗೆ ಗೈರು ಹಾಜರಾದ ಕಾರಣ ಅಧ್ಯಕ್ಷರು ಮತ್ತು ಸದಸ್ಯರ ಒಪ್ಪಿಗೆ ಮೇರೆಗೆ ಅಧಿಕಾರಿಗಳೆ ಇಲ್ಲದೆ ಗ್ರಾಮಸಭೆ ಮಾಡಿ ಪ್ರಯೋಜನವಿಲ್ಲ ಎಂದು ಮುಂದೂಡಲಾಯಿತು.
ಇದರಿಂದ ಎಚ್ಚೆತ್ತಕೊಂಡ ಅಧಿಕಾರಿಗಳು, ನಂತರ ಮಾಡಿದ ಗ್ರಾಮ ಸಭೆಗೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ತಂಡವೇ ಆಗಮಿಸಿತು. ಸಾರ್ವಜನಿಕರು ಅವರವರ ಸಮಸ್ಯೆ ಆಯಾ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಂತೆ ಹೇಳಿ, ಸರ್ಕಾರದಿಂದ ಬರುವ ಸವಲತ್ತುಗಳು ಮಧ್ಯವರ್ತಿಗಳ ಹಾವಳಿಯಿಂದ ಬಡವರಿಗೆ ನೇರವಾಗಿ ತಲುಪುತ್ತಿಲ್ಲ, ದಯಮಾಡಿ ಸಂಬಂಧಪಟ್ಟ ಅಧಿಕಾರಿಗಳು ನೇರ ಬಡವರಿಗೆ ತಲುಪುವಂತೆ ಮಾಡಿ ಎಂದು ತಿಳಿಸಿದರು.
ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು. ಮೀನುಗಾರಿಕೆ, ರೇಷ್ಮೆ, ಮಹಿಳಾ ಮತ್ತು ಸಮಾಜ ಕಲ್ಯಾಣ, ಆರೋಗ್ಯ, ನೀರಾವರಿ ಇಲಾಖೆಗೆ ಸಂಬಂಧಪಟ್ಟ ಇನ್ನು ಹಲವಾರು ವಿಚಾರಗಳು ಸಭೆಯಲ್ಲಿ ಚರ್ಚೆಯಾದವು. ತಾಲೂಕು ನೋಡಲ್ ಅಧಿಕಾರಿ ದೊಡ್ಡೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಅನೀಫ್, ಆಹಾರ ಇಲಾಖೆ ಕೃಷ್ಣೇಗೌಡ, ಮೀನುಗಾರಿಕೆ ಇಲಾಖೆಯ ನಾಗರಾಜ್, ನೀರಾವರಿ ಎಂಜಿನಿಯರ್ ವೆಂಕಟೇಶ್, ಕೆಇಬಿ ಜೆಇ ಸುರೇಶ್, ಪಶು ವೈದ್ಯಾಧಿಕಾರಿ ಹರೀಶ್, ಸಾಕ್ಷರತಾ ಭಾರತ್ ಯೋಜನಾಧಿಕಾರಿ ಸುಬ್ಬೇಗೌಡ, ಪಿಡಿಒ ಭದ್ರಶೆಟ್ಟಿ, ಮುಖ್ಯ ಶಿಕ್ಷಕ ಜನಾರ್ದನ್, ಆರೋಗ್ಯ ಇಲಾಖೆಯ ಸವಿತಾ, ಹೇಮಲತಾ, ಬಿಲ್ ಕಲೆಕ್ಟರ್ ಶಿವಯ್ಯ ಎಲ್ಲಾ ಗ್ರಾಪಂ ಸದಸ್ಯರು ಹಾಗೂ ಅಂಗನವಾಡಿ ಕೇಂದ್ರ ಕಾರ್ಯಕರ್ತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

