ಮೈಸೂರು

ಆರೋಗ್ಯದ ಬಗ್ಗೆ ಎಚ್ಚರ ವಹಿಸಿ

Published On :

ಕ.ಪ್ರ.ವಾರ್ತೆ   ಪಿರಿಯಾಪಟ್ಟಣ   ಜು. 20
ತಂಬಾಕು ಉತ್ಪಾದನೆಯಲ್ಲಿ ತೊಡಗುವ ರೈತರು ತಮ್ಮ ಆರೋಗ್ಯದ ಮೇಲೆ ಹಾನಿ ಉಂಟಾಗದಂತೆ ಎಚ್ಚರ ವಹಿಸಬೇಕು ಎಂದು ಕಗ್ಗುಂಡಿ ತಂಬಾಕು ಹರಾಜು ಮಂಡಳಿಯ ಫ್ಲಾಟ್ ಫಾರಂ 5ರ ಹರಾಜು ಅಧೀಕ್ಷಕ ಎಸ್.ಎಸ್. ಪಾಟೀಲ್ ಹೇಳಿದರು.
ತಾಲೂಕಿನ ಸುಂಡವಾಳು ಗ್ರಾಮದಲ್ಲಿ ತಂಬಾಕು ಬೆಳೆಗಾರರಿಗೆ ಅಲಯನ್ಸ್ ಒನ್ ಕಂಪನಿ ವತಿಯಿಂದ ಏರ್ಪಡಿಸಿದ್ದ ಕ್ಷೇತ್ರ ರಕ್ಷಣೆ ಪ್ರಾಮುಖ್ಯತೆ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ತಂಬಾಕು ಬೆಳೆಗಾರರು ಅನೇಕ ರಾಸಾಯನಿಕ ಪದಾರ್ಥಗಳನ್ನು ಬೆಳೆಗಳಿಗೆ ಬಳಸುತ್ತಿದ್ದು, ಇವುಗಳಿಂದ ಆರೋಗ್ಯದ ಮೇಲೆ ಮತ್ತು ಮಣ್ಣಿನ ಫಲವತ್ತತೆಯ ಮೇಲೆ ಆಗುವ ಅಡ್ಡ ಪರಿಣಾಮಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ರಾಸಾಯನಿಕ ಪದಾರ್ಥಗಳನ್ನು ಉಪಯೋಗಿಸುವಾಗ ರಕ್ಷಣಾ ಕವಚಗಳನ್ನು ಧರಿಸಿ ಸೂಕ್ತ ನಿರ್ದೇಶನಗಳನ್ನು ಪಾಲಿಸುವುದರಿಂದ ರೈತರ ಆರೋಗ್ಯದ ಮೇಲೆ ಮತ್ತು ಮಣ್ಣಿನ ಫಲವತ್ತಗೆ ಉಂಟಾಗುವ ಹಾನಿಕಾರಕ ಅಂಶಗಳಿಂದ ದೂರವಿರಬಹುದು ಎಂದು ತಿಳಿಸಿದರು.
ಸಿಟಿಆರ್ಐ ವಿಜ್ಞಾನಿ ಡಾ.ಸಿ. ಮಹದೇವ್ ಮಾತನಾಡಿ, ತಂಬಾಕು ಬೆಳೆಯುವ ರೈತರ ಆರೋಗ್ಯದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತಿದ್ದು, ಇವುಗಳನ್ನು ತಡೆಗಟ್ಟಲು ರೈತರು ವೈಜ್ಞಾನಿಕ ಕ್ರಮಗಳನ್ನು ಮತ್ತು ರಾಸಾನಿಕಗಳ ಉಪಯೋಗದಲ್ಲಿ ರಕ್ಷಣಾ ಕ್ರಮ ಅನುಸರಿಸಬೇಕು. ಈ ಬಗ್ಗೆ ತಂಬಾಕು ಖರೀದಿದಾರ ಕಂಪನಿಗಳು ರೈತರಲ್ಲಿ ಅರಿವು ಮೂಡಿಸುತ್ತಿರುವುದನ್ನು ಶ್ಲಾಘಿಸಿದರು.
ಸಿಟಿಆರ್ಐ ಮುಖ್ಯಸ್ಥ ವಿಜ್ಞಾನಿ ಡಾ.ರಾಮಕೃಷ್ಣ ಭೂಮಿಯ ಫಲವತ್ತತೆ ಕಾಪಾಡಿಕೊಳ್ಳುವಲ್ಲಿ ರೈತರು ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಿದರು. ಅಲಯನ್ಸ್ ಒನ್ ಕಂಪನಿಯ ವ್ಯವಸ್ಥಾಪಕ ಟಿ. ಗುರುವಯ್ಯ ಮಾತನಾಡಿದರು. ರೈತರಿಗೆ ರಾಸಾನಿಕ ಸಿಂಪಡಣೆಯಲ್ಲಿ ಅನುಸರಿಸಬೇಕಾದ ರಕ್ಷಣಾ ಕ್ರಮಗಳ ಬಗ್ಗೆ ಮತ್ತು ಧರಿಸಬೇಕಾದ ವಸ್ತ್ರಗಳ, ಗ್ರೀನ್ ಟೊಬಾಕೊ ಸಿಕ್ನೆಸ್ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.
ಕಂಪನಿ ಕ್ಷೇತ್ರ ವ್ಯವಸ್ಥಾಪಕ ಎಂ.ಕೆ. ಬಸವರಾಜು, ರೈತ ಮುಖಂಡರಾದ ಚಂದ್ರೇಗೌಡ, ಸ್ವಾಮಿಗೌಡ, ಸಿದ್ದರಾಮು, ಕ್ಷೇತ್ರ ತಾಂತ್ರಿಕರಾದ ರಾಮೇಗೌಡ, ಅಶೋಕ್, ನಿತಿನ್, ಅಪ್ಪಾಜಿಗೌಡ, ಸುರೇಶ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.