ಸಮಾಜದ ಅಭಿವೃದ್ಧಿಗೆ ನಿರಂತರ ಸೇವೆ
ಕ.ಪ್ರ. ವಾರ್ತೆ ಭೇರ್ಯ ಜು.22
ಗ್ರಾಮಗಳ ಅಭಿವೃದ್ಧಿಗೆ ಪೂರಕವಾಗಿ ವಿವಿಧ ಯೋಜನೆಗಳ ಮುಖಾಂತರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಸಂಸ್ಥೆ ನಿರಂತರವಾಗಿ ಸೇವೆ ಮಾಡುತ್ತಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಅಶೋಕ್ ಹೇಳಿದರು.
ಭೇರ್ಯ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಹಾಲು ಶೀಥಲೀಕರಣ ಘಟಕದ ಕಾಮಗಾರಿಗೆ 30 ಸಾವಿರ ಸಹಾಯಧನದ ಚೆಕ್ ನೀಡಿ ಮಾತನಾಡಿ, ತಾಲೂಕಿನ 6 ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ತಲಾ 50 ಸಾವಿರದಂತೆ 3 ಲಕ್ಷ ಸಹಾಯಧನ ನೀಡಲಾಗಿದ್ದು, ಅದರಲ್ಲಿ ಭೇರ್ಯ ಗ್ರಾಮದ ಹಾಲು ಶೀಥಿಲೀಕರಣ ಘಟಕಕ್ಕೆ ಮೊದಲನೆ ಕಂತು 30 ಸಾವಿರ ನೀಡಲಾಗಿದೆ. ಎರಡನೇ ಕಂತಿನಲ್ಲಿ 20 ಸಾವಿರ ನೀಡುವುದಾಗಿ ತಿಳಿಸಿದರು.
ಶ್ರೀ ಪದ್ಧತಿ ಯೋಜನೆಯಲ್ಲಿ ತಾಲೂಕಿನ ಬತ್ತ ಬೆಳೆಗಾರರಿಗೆ ವಿನೂತನ ಮಾದರಿಯಲ್ಲಿ ಬೇಸಾಯ ಮಾಡುವ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದ್ದು ಆಸಕ್ತಿ ಇರುವ ರೈತರಿಗೆ ಈಗಾಗಲೇ ಸಸಿ ಮಡಿ ಮಾಡುವ ಕಾರ್ಯಕ್ಕೆ ಎಕರೆಗೆ 6 ಕೆ.ಜಿ. ಬತ್ತ ಬೆಳೆಸಿ ಸಿದ್ಧಪಡಿಸುವ ತರಬೇತಿ ನೀಡಲಾಗಿದೆ ಎಂದರು.
ಪಶುವೈದ್ಯಾಧಿಕಾರಿ ಡಾ.ಹರೀಶ್ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹೈನುಗಾರಿಕೆ ಯೋಜನೆಗೆ ಹೆಚ್ಚು ಒತ್ತು ಕೊಟ್ಟು ವಿವಿಧ ತರಬೇತಿಯನ್ನು ತಾಲೂಕಿನ ಜನತೆಗೆ ನೀಡುತ್ತಿರುವುದು ಶ್ಲಾಘನೀಯ. ಮಹಿಳೆಯರ ಸ್ವಾವಲಂಬಿ ಬದುಕಿಗೆ ಆರ್ಥಿಕವಾಗಿ ಸಹಾಯ ನೀಡುವುದರ ಜತೆಗೆ ವಿವಿಧ ಯೋಜನೆಗಳ ಬಗ್ಗೆ ತರಬೇತಿ ನೀಡುತ್ತಿರುವುದು ಎಲ್ಲರೂ ಮೆಚ್ಚುವಂತಹದ್ದು ಎಂದು ಹೇಳಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ತಿಮ್ಮಶೆಟ್ಟಿ, ಕಾರ್ಯದರ್ಶಿ ಬಿ.ಪಿ.ಲೋಕೇಶ್, ನಿರ್ದೇಶಕ ಚೆಲುವರಾಜ್, ಬೋರಪ್ಪನಾಯಕ, ಬಾಲಕೃಷ್ಣ, ಜಯರಾಮೇಗೌಡ, ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆ ಹೈನುಗಾರಿಕೆ ಅಧಿಕಾರಿ ಚಂದ್ರಪ್ಪ, ಸೇವಾಪ್ರತಿನಿಧಿ ಅನಿತಾ, ಶೋಭಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

