ಮೈಸೂರು

ಪೊದಾರ್ ಶಾಲೆ: ಪರಿವರ್ತನಾ ಸಪ್ತಾಹ ತೆರೆ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಜು. 23
ವಿಜಯನಗರದಲ್ಲಿರುವ ಪೊದಾರ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ಅಂತಾರಾಷ್ಟ್ರೀಯ ಜಲ ವರ್ಷಾಚರಣೆ ಅಂಗವಾಗಿ ಕಳೆದ ಒಂದು ವಾರದಿಂದ ಹಮ್ಮಿಕೊಂಡಿದ್ದ ಪರಿವರ್ತನಾ ಸಪ್ತಾಹವು ಮಂಗಳವಾರ ಮುಕ್ತಾಯವಾಯಿತು.
ಈ ಸಪ್ತಾಹದಲ್ಲಿ ಮಕ್ಕಳಿಗೆ ನೀರಿನ ಸಂರಕ್ಷಣೆ ಬಗೆಗೆ ಅರಿವು ಮೂಡಿಸಲಾಯಿತು. ಹಲವು ಚಟುವಟಿಕೆಗನ್ನು ಹಮ್ಮಿಕೊಂಡು ಮಕ್ಕಳಿಂದಲೇ ಪ್ರಾತ್ಯಕ್ಷಿಕೆ ನಡೆಸಲಾಯಿತು. ಚಿತ್ರಕಲೆ, ಉಪನ್ಯಾಸ, ಸಂಪನ್ಮೂಲ ವ್ಯಕ್ತಿಗಳಿಂದ ಪ್ರಾತ್ಯಕ್ಷಿಕೆ ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಂತಿಮ ದಿನವಾದ ಮಂಗಳವಾರ ಒಂಟಿಕೊಪ್ಪಲು ವೃತ್ತದಿಂದ ಪಂಚವಟಿವರೆಗೆ ಅರಿವು ಜಾಥಾ ನಡೆಸಿ ನೀರನ್ನು ಮಿತವಾಗಿ ಬಳಸುವುದು, ಸಂರಕ್ಷಿಸುವುದು, ಅಂತರ್ಜಲ ಉಳಿಸಿಕೊಳ್ಳುವ ವಿಚಾರದ ಬಗ್ಗೆ ಘೋಷಣೆ ಕೂಗಲಾಯಿತು.
ಇದಕ್ಕೂ ಮೊದಲು ಶಾಲೆಯಲ್ಲಿ ಮಕ್ಕಳು ಪ್ರಹಸನ ನಡೆಸಿಕೊಟ್ಟರು. ನಲ್ಲಿಯಲ್ಲಿ ನೀರು ಪೋಲಾಗುವುದು, ಕಾರು ತೊಳೆಯುವಾಗ ನೀರನ್ನು ಯಥೇಚ್ಛವಾಗಿ ಬಳಸುವುದು, ಪಾತ್ರೆ ತೊಳೆಯುವುದು ಇತ್ಯಾದಿ ಅಪವ್ಯಯ ಮಾಡಬಾರದು ಎಂಬ ಸಂದೇಶ ನೀಡಿದರು. ಒಟ್ಟು ವಿದ್ಯಾರ್ಥಿಗಳ ಪ್ರತಿನಿಧಿಗಳಾಗಿ ಏಳು ಮಂದಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಕ್ಕಳೆ ಉತ್ತರಿಸಿದ್ದು ವಿಶೇಷವಾಗಿತ್ತು. ಮಳೆಕೊಯ್ಲು ಕಡೆಗೆ ಹೆಚ್ಚಿನ ಗಮನ ನೀಡುವುದು, ಮನೆಯಿಂದಲೆ ನೀರನ್ನು ಮಿತವಾಗಿ ಬಳಸುವುದು, ಆಗಾಗ ಜನರಲ್ಲಿ ಅರಿವು ಮೂಡಿಸುವುದು, ಅಂತರ್ಜಲ ಮರುಪೂರಣಕ್ಕೆ ಕ್ರಮ ವಹಿಸುವ ಬಗೆಗೆ ಆಶ್ಚರ್ಯಕರ ರೀತಿಯಲ್ಲಿ ಉತ್ತರ ನೀಡಿದರು.
ಪೋಷಕರ ಪರವಾಗಿ ಮಾತನಾಡಿದ ಮೈಸೂರು ಇನ್‌ಸ್ಟಿಟ್ಯೂಟ್ ಮಹೇಶ್ ಪಿಯು ಕಾಲೇಜಿನ ಪ್ರಾಂಶುಪಾಲ ಎಚ್.ಎಸ್. ಗೋಪಿನಾಥ್, ಒಟ್ಟಾರೆ ಭೂಮಂಡಲದಲ್ಲಿ ಶೇ.97 ರಷ್ಟು ಸಮುದ್ರ ಇದ್ದು, ಶೇ. 2 ರಷ್ಟು ಹಿಮದಿಂದ ಆವೃತವಾಗಿದೆ. ಇನ್ನುಳಿದ ಶೇ.1 ರಷ್ಟು ನೀರನ್ನು ನಾವು ಬಳಸುತ್ತಿದ್ದೇವೆ. ಈ ನೀರನ್ನು ಸಂರಕ್ಷಿಸುವ ತುರ್ತು ಇದೆ ಎಂದು ಅಭಿಪ್ರಾಯ ಹಂಚಿಕೊಂಡರು.
ಪೊದಾರ್ ಅಂತಾರಾಷ್ಟ್ರೀಯ ಶಾಲೆಯ ಪ್ರಾಂಶುಪಾಲ ಕೃಷ್ಣ ಬಂಗೇರಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.