ಮೈಸೂರು

ಉಪ ಚುನಾವಣೆ: ನಾಮಪತ್ರ ಸಲ್ಲಿಕೆಯಾಗಿಲ್ಲ

Published On :

ಬೈಲುಕುಪ್ಪೆ: ಇಲ್ಲಿನ ಗ್ರಾಪಂನಲ್ಲಿ ತೆರವಾಗಿದ್ದ ಒಂದು ಮೀಸಲು ಮಹಿಳಾ ಸ್ಥಾನಕ್ಕೆ ಆ. 4 ರಂದು ನಡೆಯಬೇಕಿದ್ದ ಚುನಾವಣೆಗೆ ಯಾರು ನಾಮಪತ್ರ ಸಲ್ಲಿಸಿಲ್ಲ. ಜು. 17 ರಿಂದ 24 ರವರೆಗೆ ಪಂಚಾಯಿತಿಯಲ್ಲಿ ಅರ್ಜಿ ಪಡೆಯುವುದು, ಜು. 25ರಂದು ಬಂದ ಅರ್ಜಿ ಪರಿಶೀಲಿಸುವುದು. ಜು. 27 ರಂದು ಅಂತಿಮ ದಿನ ಗುರುತಿಸಿ, ಆ. 4 ರಂದು ಚುನಾವಣೆ ನಡೆಸಲಾಗುವುದು ಎಂದು ಚುನಾವಣಾಧಿಕಾರಿ ಘೋಷಿಸಿದ್ದರು. ಪಿರಿಯಾಪಟ್ಟಣದ ರೇಷ್ಮೆ ಇಲಾಖೆಯ ನಿರ್ದೇಶಕ ಎಂ.ಎಸ್. ಹೂಂಬಿ ಅವರನ್ನು ಗ್ರಾಪಂ ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಜು. 17 ರಿಂದ 24 ರವರೆಗೆ ಭಾನುವಾರ ಹೊರತುಪಡಿಸಿ ಪ್ರತಿದಿನ ಬೆಳಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಗ್ರಾಪಂಗೆ ಹಾಜರಾಗಿ ನಾಮಪತ್ರ ಸ್ವೀಕರಿಸಲು ಕಾಯುತ್ತಿದ್ದರು. ಆದರೆ, ಬುಧವಾರ 3 ರವರೆಗೆ ಅರ್ಜಿಗಳು ಬಾರದ ಕಾರಣ ಚುನಾವಣಾಧಿಕಾರಿಯವರು ಅರ್ಜಿಗಳು ಬಂದಿಲ್ಲವೆಂದು ಪಂಚಾಯಿತಿ ಬೋರ್ಡ್ ಮೇಲೆ ಅಂಟಿಸಿದ್ದಾರೆ.

ಧರ್ಮಸೇನಗೆ ಟಿಕೆಟ್ ನೀಡಲು ಮನವಿ
ಟಿ. ನರಸೀಪುರ:
ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಧರ್ಮಸೇನ ಅವರಿಗೆ ಅವಕಾಶ ನೀಡಬೇಕೆಂದು ಕಿರಗಸೂರು ಗ್ರಾಪಂ ಸದಸ್ಯ ಬಿಲಿಗೆರೆಹುಂಡಿ ಬಸವರಾಜು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.