ಬಿಗ್ಬಜಾರ್ನಲ್ಲಿ ಅನ್ನಸಂತರ್ಪಣೆ ಇಂದು
ಮೈಸೂರು: ಗೂಂಜ್ ಸಂಸ್ಥೆಯ ಚಟುವಟಿಕೆಗೆ ನೆರವಾಗಲು ಚಾಮರಾಜಪುರಂ ಬಿಗ್ ಬಜಾರ್ ಸೂಪರ್ ಸೆಂಟರ್ನಲ್ಲಿ ಜು. 26ರ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ.
ಬಿಗ್ ಬಜಾರ್ಗೆ ಬರುವ ಗ್ರಾಹಕರಿಗೆ ಅನ್ನಸಂತರ್ಪಣೆ ಮಾಡಲಾಗುವುದು. ಭೋಜನದ ನಂತರ ಗ್ರಾಹಕರು ಅಲ್ಲಿರುವ ಹುಂಡಿಯಲ್ಲಿ ತಮ್ಮ ಇಚ್ಛಾನುಸಾರ ಹಣ ಹಾಕಬಹುದು. ಹೀಗೆ ಸಂಗ್ರಹವಾದ ಹಣವನ್ನು ಗೂಂಜ್ ಸಂಸ್ಥೆಯ ಚಟುವಟಿಕೆಗಳಿಗೆ ನೀಡಲಾಗುವುದು ಎಂದು ಬಿಗ್ ಬಜಾರ್ ವ್ಯವಸ್ಥಾಪಕ ನವೀನ್ ಪ್ರಕಾಶ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗೂಂಜ್ ಕುರಿತು... ಅನ್ಷು ಎಂಬವರು ಗೂಂಜ್ ಸಂಸ್ಥೆಯನ್ನು 1998ರಲ್ಲಿ ಆರಂಭಿಸಿದರು. ನಗರದ ಪ್ರದೇಶದ ಅನುಪಯುಕ್ತ ವಸ್ತುಗಳನ್ನು ಪರಿಷ್ಕರಿಸಿ, ಉಡುಪು ತಯಾರಿಸಿ ಗ್ರಾಮೀಣ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ.
ಉತ್ತರಾಖಂಡ, ಹಿಮಾಚಲಪ್ರದೇಶದಲ್ಲಿ ಪ್ರವಾಹ ಸಂತ್ರಸ್ತರಿಗಾಗಿ ಗೂಂಜ್ ಸಂಸ್ಥೆಯು ರಹತ್ ಫ್ಲಡ್ಸ್ ಎಂಬ ಆಂದೋಲನ ಹಮ್ಮಿಕೊಂಡಿದೆ ಎಂದರು. ಗೂಂಜ್ ಸಂಸ್ಥೆಯು 250 ತಳಮಟ್ಟದ ಚಟುವಟಿಕೆಗಳಲ್ಲದೆ ದೇಶದ 21 ರಾಜ್ಯಗಳಲ್ಲಿ ತುರ್ತು ಕಾರ್ಯಚರಣೆ ಸಮರೋಪಾದಿಯಲ್ಲಿ ನಡೆಸುತ್ತಿದೆ. ಕಳೆದ 14 ವರ್ಷದಿಂದ ಈ ಸಂಸ್ಥೆಯು ಪರಿಹಾರ ಹಾಗೂ ಪುನರ್ವಸತಿಗಾಗಿ ಶ್ರಮಿಸುತ್ತಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

