ಮೈಸೂರು

ಭೀಷ್ಮ ಪ್ರತಿಜ್ಞೆಗೆ ತಲೆಯಾಡಿಸಿದ ಪ್ರೇಕ್ಷಕ

Published On :

ಕ.ಪ್ರ.ವಾರ್ತೆ ಮೈಸೂರು ಜು. 28
ಕಳೆದ ಐದು ದಿನಗಳಿಂದ ನಗರದ ಜಗನ್ಮೋಹನ ಅರಮನೆಯಲ್ಲಿ ಬೆಳ್ಳಿಪ್ಪಾಡಿ ಯಕ್ಷ ಸಾಂಸ್ಕೃತಿಕ ವೇದಿಕೆಯು ಆಯೋಜಿಸಿದ್ದ ಯಕ್ಷ ಪಂಚಮಿಗೆ ಶನಿವಾರ ತೆರೆ ಬಿದ್ದಿತು.
ಅಂತಿಮ ದಿನ ನಿಡ್ಲೆ ಮಹಾಗಣಪತಿ ಯಕ್ಷಗಾನ ಮಂಡಳಿ ಕಲಾವಿದರು ಭೀಷ್ಮ ಪ್ರತಿಜ್ಞೆ ಪ್ರಸಂಗ ಪ್ರದರ್ಶಿಸಿದರು. ಮಹಾಭಾರತದ ಕಥೆಯುಳ್ಳ ಭೀಷ್ಮ ಪ್ರತಿಜ್ಞೆ ಹಲವು ಉಪಕಥೆಗಳೊಂದಿಗೆ ಭಿತ್ತರಗೊಂಡಿತು.
ಹಸ್ತಿನಾವತಿ ದೇಶದ ರಾಜ ಶಂತನು ಮಹಾರಾಜನು ಬೇಟೆಗೆ ಹೋಗುತ್ತಾನೆ. ಅಲ್ಲಿ ಸುರನದಿ ಗಂಗೆಯನ್ನು ನೋಡಿ ಅವಳನ್ನು ವಿವಾಹವಾಗುತ್ತಾನೆ. ಅವಳಿಗೆ ದೇವವ್ರತ ಎಂಬ ಮಗ ಜನಿಸುತ್ತಾನೆ.
ನಂತರ ಗಂಗೆಯ ತಟದಲ್ಲಿ ದಶರಥನ ಮಗಳಾದ ಸತ್ಯವತಿಯನ್ನು ಕಂಡ ಶಂತನು ಅವಳನ್ನೂ ವಿವಾಹವಾಗಲು ಇಚ್ಛಿಸುತ್ತಾನೆ. ಇದಕ್ಕೆ ಅಡ್ಡಗಾಲು ಹಾಕುವ ದಶರಥ ತನ್ನ ಮಗಳನ್ನು ಮಾಡಿಕೊಳ್ಳಲು ಕೆಲವು ಷರತ್ತುಗಳನ್ನು ವಿಧಿಸುತ್ತಾನೆ. ಅದರಂತೆ ಸತ್ಯವತಿಯ ಮಕ್ಕಳಿಗೆ ರಾಜ್ಯದ ಪಟ್ಟ ಕಟ್ಟಬೇಕೆ ವಿನಃ ದೇವವ್ರತನಿಗೆ ರಾಜ್ಯ ನೀಡಬಾರದು ಎಂದು ಷರತ್ತು ಹಾಕುತ್ತಾನೆ. ಇದನ್ನು ಕೇಳಿದ ದೇವವ್ರತನು ತನ್ನ ತಂದೆಯ ಮದುವೆಗೆ ಯಾವ ಅಡಚಣೆಯೂ ಆಗದಂತೆ ಭಾವಿಸಿ ಪಟ್ಟಾಭಿಷೇಕ ನಿರಾಕರಿಸುತ್ತಾನೆ. ಆಗ ದೇವವ್ರತ ಪ್ರತಿಜ್ಞೆಯನ್ನು ದೇವಾದಿ ದೇವತೆಗಳು ಭೀಷಣ ಪ್ರತಿಜ್ಞೆ ಎಂದು ಹೆಸರಿಸುತ್ತಾರೆ. ಅಂದಿನಿಂದ ದೇವವ್ರತನಿಗೆ ಭೀಷ್ಮ ಎಂಬ ಹೆಸರು ನಾಮಕರಣವಾಗುತ್ತದೆ.
ಮುಕ್ತಾಯ ಸಮಾರಂಭದಲ್ಲಿ ಪತ್ರಿಕೋದ್ಯಮಿ ಕೆ.ಬಿ. ಗಣಪತಿ, ಕರ್ನಾಟಕ ಪೊಲೀಸ್ ಅಕಾಡೆಮಿ ಉಪನಿರ್ದೇಶಕಿ ಡಾ. ಧರಣಿದೇವಿ ಮಾಲಗತ್ತಿ, ಲೆಕ್ಕ ಸನ್ನದುಗಾರ ಅನಂತವರ್ಧನ, ವಿದ್ಯಾವಿಕಾಸ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಬಾಲಚಂದ್ರಗೌಡ, ಬೆಳ್ಳಿಪ್ಪಾಡಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಡಾ. ಸತೀಶ್ ರೈ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.