ಮೈಸೂರು

ಎನ್‌ಟಿಎಂ ಶಾಲೆ ಉಳಿವಿಗೆ 48 ಗಂಟೆ ಧರಣಿ ಆರಂಭ

Published On :

ಕ.ಪ್ರ.ವಾರ್ತೆ ಮೈಸೂರು ಜು. 29
ಮಹಾರಾಣಿ ಎನ್‌ಟಿಎಂ ಶಾಲೆಯ ಜಾಗವನ್ನು ಶ್ರೀರಾಮಕೃಷ್ಣ ಮಠಕ್ಕೆ ನೀಡಬಾರದು ಎಂದು ಒತ್ತಾಯಿಸಿ ಎಸ್‌ಎಫ್‌ಐ ಕಾರ್ಯಕರ್ತರು ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆ ಪ್ರಮುಖರ ಜತೆಗೂಡಿ ಸೋಮವಾರ ಶಾಲೆ ಎದುರು ಪ್ರತಿಭಟಿಸಿದರು.
ಶತಮಾನಗಳ ಇತಿಹಾಸ ಇರುವ ಮಹಾರಾಣಿ ಎನ್‌ಟಿಎಂ ಶಾಲೆಯನ್ನು ರಾಮಕೃಷ್ಣ ಮಠಕ್ಕೆ ನೀಡಬಾರದು. ಬಡವರು ಮತ್ತು ಅಲ್ಪಸಂಖ್ಯಾರ ಮಕ್ಕಳೆ ಹೆಚ್ಚು ವ್ಯಾಸಂಗ ಮಾಡುವ ಶಾಲೆಯನ್ನು ಉಳಿಸಬೇಕು. ವಿವೇಕಾನಂದರ ಸ್ಪೂರ್ತಿ ಕೇಂದ್ರಕ್ಕೆ ಪ್ರತ್ಯೇಕ ಸ್ಥಳ ನೀಡಲಿ. ಆದರೆ ಶಾಲೆಯನ್ನು ಮುಚ್ಚಬಾರದು ಎಂದು ಆಗ್ರಹಿಸಿ ಇಂದಿನಿಂದ 48 ಗಂಟೆಗಳ ಪ್ರತಿಭಟನೆ ಆರಂಭಿಸಿದರು.
ಈ ಹಿಂದಿನ ಬಿಜೆಪಿ ಸರ್ಕಾರ ಶ್ರೀರಾಮಕೃಷ್ಣ ಮಠಕ್ಕೆ ಎನ್‌ಟಿಎಂ ಶಾಲೆಯನ್ನು ಪರಭಾರೆ ಮಾಡಿಕೊಟ್ಟಿರುವುದು ಸರಿಯಲ್ಲ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಆ ಆದೇಶವನ್ನು ಹಿಂದಕ್ಕೆ ಪಡೆದು ಶಾಲೆಯನ್ನು ಉಳಿಸಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು ಶಾಲೆಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ ತೆರಳಿ ಕಚೇರಿ ಸಮೀಪ ಧರಣಿ ನಡೆಸಿದರು.
ಪ್ರತಿಭಟನೆಗೆ ಮಾಜಿ ಶಾಸಕ ಜಿ.ವಿ. ಶ್ರೀರಾಮರೆಡ್ಡಿ ಚಾಲನೆ ನೀಡಿದರು.
ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಚಿಂತಕ ಪ್ರೊ.ಪಿ.ವಿ. ನಂಜರಾಜ ಅರಸ್, ಕನ್ನಡ ಪರ ಹೋರಾಟಗಾರರಾದ ಸ.ರ. ಸುದರ್ಶನ್, ಎಂ.ಬಿ. ವಿಶ್ವನಾಥ್, ಬಿ.ಎ. ಶಿವಶಂಕರ್, ಅನಂತರಾಮು, ಎಸ್‌ಎಫ್‌ಐನ ಜಿಲ್ಲಾಧ್ಯಕ್ಷ ಜಗದೀಶ್ ಸೂರ್ಯ, ಜಿಲ್ಲಾ ಕಾರ್ಯದರ್ಶಿ ಮಹೇಶ್‌ಕುಮಾರ್ ಇದ್ದರು.
ಅಧ್ಯಯನ ವರದಿಗೆ ಸೂಚನೆ: ನಗರದ ಮಹಾರಾಣಿ ಎನ್‌ಟಿಎಂ ಶಾಲೆ ಮುಚ್ಚುತ್ತಿರುವ ಸಂಬಂಧ ಅಧ್ಯಯನ ವರದಿ ನೀಡುವಂತೆ ಬಾಲನ್ಯಾಯ ಮಂಡಳಿಯು ಸೂಚಿಸಿದೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆರ್. ಸೋಮಲತಾ ಮತ್ತು ಬಾಲನ್ಯಾಯ ಮಂಡಳಿ ಸದಸ್ಯ ಪಿ.ಪಿ. ಬಾಬುರಾಜ್ ಅವರನ್ನೊಳಗೊಂಡ ಸಮಿತಿ ರಚಿಸಿ, 15 ದಿನದಲ್ಲಿ ವರದಿ ನೀಡುವಂತೆ ಸೂಚಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.