ಮೈಸೂರು

ನೇಗಿಲಯೋಗಿಯಿಂದ ವೈದ್ಯರಿಗೆ ಪ್ರಶಸ್ತಿ

Published On :

ಕ.ಪ್ರ.ವಾರ್ತೆ ಮೈಸೂರು ಜು. 29
ವೈದ್ಯಕೀಯ ರಂಗದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿರುವ ಹಿರಿಯ ವೈದ್ಯರಿಗೆ ನೇಗಿಲಯೋಗಿ ಸಮಾಜ ಸೇವಾ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಿತು.
ಕುವೆಂಪುನಗರದ ಸಂಸ್ಥೆ ಸಭಾಂಗಣದಲ್ಲಿ ವೈದ್ಯರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಉತ್ತಮ ಸಲ್ಲಿಸಿರುವ ಡಾ.ಚಲುವೇಗೌಡ ಅವರಿಗೆ ನೇಗಿಲಯೋಗಿ ದಿವಂಗತ ಡಾ.ಎಂ.ಎಲ್. ಮರಿಸ್ವಾಮಿ ಪ್ರಶಸ್ತಿ, ಡಾ.ಎ. ಬಿ. ಪುಟ್ಟಸ್ವಾಮಿ ಅವರಿಗೆ ನೇಗಿಲಯೋಗಿ ಡಾ.ಜೆ.ಎನ್. ಜವರೇಗೌಡ ಪ್ರಶಸ್ತಿ ಹಾಗೂ ಡಾ.ಎಚ್.ಎಂ. ಲೋಕೇಶ್ ಅವರಿಗೆ ಡಾ.ಸಿ.ಎಂ. ಮಂಜುನಾಥ್ ಉದಯೋನ್ಮುಖ ವೈದ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಪ್ರಶಸ್ತಿ ವಿತರಿಸಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಕೆ.ಎಚ್. ಗೋಪಾಲಕೃಷ್ಣೇಗೌಡ, ಸ್ವಾರ್ಥ ಹೆಚ್ಚಾಗಿದ್ದರೆ ಆ ವ್ಯಕ್ತಿಯ ಜತೆಗೆ ಸಮಾಜಕ್ಕೂ ತೊಂದರೆ. ಪ್ರತಿಯೊಬ್ಬರು ಸಮಾಜದ ಋಣವನ್ನು ತೀರಿಸುವ ಪ್ರಯತ್ನ ಮಾಡಬೇಕು. ಈ ದಿಸೆಯಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಹಿರಿಯ ವೈದ್ಯರನ್ನು ಗೌರವಿಸಿರುವುದು ಅಭಿನಂದನೀಯ ಎಂದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಕೆ.ಎನ್. ಚಲುವೇಗೌಡ, ಹಳ್ಳಿಯಲ್ಲಿ ಸೇವೆ ಸಲ್ಲಿಸಿದಾಗ ಸಿಗುವ ತೃಪ್ತಿ ಪಟ್ಟಣ್ಣದಲ್ಲಿ ಸಿಗುವುದಿಲ್ಲ. ವೈದ್ಯರು ಗ್ರಾಮೀಣ ಸೇವೆ ಜತೆಗೆ ಕೃಷಿ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು ಎಂದರು. ಪ್ರಶಸ್ತಿ ಪ್ರಾಯೋಜಕ ಡಾ. ಸುಜಿ ಕುಮಾರ್, ಡಾ.ಕೆ.ಎನ್. ಚಂದ್ರಶೇಖರ್ ಇದ್ದರು. ಸಂಸ್ಥೆ ಅಧ್ಯಕ್ಷ ಡಾ.ಎಲ್. ದೇವೇಗೌಡ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಎಂ.ಪಿ. ಸುರೇಶ್ ನಿರೂಪಿಸಿದರು. ಸಲಹೆಗಾರ ಡಿ. ರವಿಕುಮಾರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.