'ಪ್ರೊ.ಎಚ್. ಗೋವಿಂದಯ್ಯಗೆ ಟಿಕೆಟ್ ನೀಡಿ'
ಕ.ಪ್ರ.ವಾರ್ತೆ ಮೈಸೂರು ಜು. 29
ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ಗೆ ನಡೆಯುವ ಉಪ ಚುನಾವಣೆಗೆ ಕಾಂಗ್ರೆಸ್ನಿಂದ ಸ್ಪರ್ಧಿಸಲು ಚಿಂತಕ ಪ್ರೊ.ಎಚ್. ಗೋವಿಂದಯ್ಯ ಅವರಿಗೆ ಟಿಕೆಟ್ ನೀಡಬೇಕು ಎಂದು ಪ್ರಗತಿ ಸೇವಾ ಟ್ರಸ್ಟ್ ಒತ್ತಾಯಿಸಿದೆ.
ದಲಿತ ಹೋರಾಟಗಾರರು, ಸಾಹಿತಿಗಳು, ಪ್ರಗತಿಪರ ಚಿಂತಕರು ಮತ್ತು ಸಮಾಜವಾದಿ ಚಿಂತಕರೂ ಆದ ಪ್ರೊ. ಎಚ್. ಗೋವಿಂದಯ್ಯ ಅವರಿಗೆ ವಿಧಾನ ಪರಿಷತ್ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ನಿಂದ ಟಿಕೆಟ್ ನೀಡಬೇಕು. ಕಳೆದ 40 ವರ್ಷಗಳಿಂದ ಸಾಮಾಜಿಕ ಸೇವಾಕ್ಷೇತ್ರ, ದಲಿತ ಹಾಗೂ ಪ್ರಗತಿಪರ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಗೋವಿಂದಯ್ಯ ಅವರು ಈ ಬಾರಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಆದ್ದರಿಂದ ಅವರಿಗೆ ಈ ಬಾರಿಯ ಪರಿಷತ್ ಉಪ ಚುನಾವಣೆಯಲ್ಲಿ ಅವಕಾಶ ನೀಡಬೇಕು ಎಂದು ಆಗ್ರಹಿಸಿದೆ.
2008 ಮತ್ತು 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಆಕಾಂಕ್ಷಿಯಾಗಿದ್ದ ಗೋವಿಂದಯ್ಯ ಅವರು ಸಮರ್ಥ ನಾಯಕತ್ವ, ಪ್ರಗತಿಪರ ಚಿಂತನೆ, ದಲಿತ ಚಳವಳಿ ಹಿನ್ನೆಲೆಯಿಂದ ಬಂದಿದ್ದಾರೆ.
ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಅವರು ಗೋವಿಂದಯ್ಯ ಅವರಿಗೆ ಟಿಕೆಟ್ ದೊರಕಿಸಿಕೊಡಬೇಕು ಎಂದು ಟ್ರಸ್ಟ್ನ ಕಾರ್ಯದರ್ಶಿ ಆರ್. ಲಕ್ಷ್ಮಣ್ ಮತ್ತು ಉಪಾಧ್ಯಕ್ಷ ಎನ್. ಲೋಕೇಶ್ ಮನವಿ ಮಾಡಿದ್ದಾರೆ.
ಸಹಾಯದಿಂದ ಸಮಾಜದ ಅಭಿವೃದ್ಧಿ ಸಾಧ್ಯ
ಕ.ಪ್ರ.ವಾರ್ತೆ ಮೈಸೂರು ಜು. 29
ಸಹಾಯ ಮನೋಭಾವದಿಂದ ಸಮಾಜದ ಅಭಿವೃದ್ಧಿ ಮತ್ತು ಮಾನವೀಯ ಸಂಬಂಧ ಬೆಳೆಯಲು ಸಾಧ್ಯ ಎಂದು ರೋಟರಿ ಕ್ಲಬ್ ಆಫ್ ಮೈಸೂರ್ನ ಎಸ್.ಎನ್. ಪಾರ್ಶ್ವನಾಥ್ ಹೇಳಿದರು.
ನಗರದ ಮಹಾಜನ ಪಬ್ಲಿಕ್ ಶಾಲೆಯಲ್ಲಿ ರೋಟರಿ ಇಂಟರ್ಯಾಕ್ಟ್ ಕ್ಲಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ವಿದ್ಯಾರ್ಥಿಗಳಿಗೆ ಕಲಿಯುವ ವೇಳೆ ಅವರಿಗೆ ಸಮಾಜದಲ್ಲಿ ಜವಾಬ್ದಾರಿಯುತವಾಗಿ, ಸಹಾಯ ಮನೋಭಾವದಿಂದ, ಸಾರ್ವಜನಿಕರ ಜತೆ ಹೇಗೆ ವರ್ತಿಸಬೇಕು ಮತ್ತು ಇತರರ ನೋವಿನಲ್ಲಿ ಹೇಗೆ ಭಾಗಿಯಾಗಬೇಕು ಎಂಬುದನ್ನು ಕಲಿಸಬೇಕು ಎಂದರು.
ಶಾಲೆಯ ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷರಾಗಿ ಐಸಿರಿ ಅರಸ್, ಉಪಾಧ್ಯಕ್ಷರಾಗಿ ರಾಶಿ ಶರ್ಮ, ಖಜಾಂಚಿಯಾಗಿ ಶಂಕರ್ ಎಸ್. ನಾಯಕ್, ಕಾರ್ಯದರ್ಶಿಯಾಗಿ ಶ್ರುತಿ ಎಸ್. ಶಾಸ್ತ್ರೀ, ಜಂಟಿ ಕಾರ್ಯದರ್ಶಿಯಾಗಿ ಎಚ್.ಪಿ. ಚಂದನ, ಸಂಚಾಲಕಿಯಾಗಿ ಎಂ. ಶೀಲಾವತಿ ಆಯ್ಕೆಯಾಗಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಆರ್. ವಾಸುದೇವಮೂರ್ತಿ, ಶಾಲೆಯ ಪ್ರಾಂಶುಪಾಲೆ ಸಿ.ಎಚ್. ನಾಗರತ್ನ, ಉಪ ಪ್ರಾಂಶುಪಾಲೆ ಬಿ.ಎಸ್. ಶ್ರೀಹರ್ಷ, ಇಂಟರ್ಯಾಕ್ಟ್ ಚೇರಮನ್ ಎಸ್. ನಾಗೇಂದ್ರಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

