ಸ್ಥಳೀಯ ಸಂಸ್ಥೆ ನೂತನ ಸದಸ್ಯರಿಗೂ ಮತದಾನ ಹಕ್ಕು
ಕ.ಪ್ರ.ವಾರ್ತೆ , ಮೈಸೂರು , ಜು. 30
ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ನಾಲ್ಕು ತಿಂಗಳಾಗುತ್ತಿದೆ. ಆದರೆ, ಮೇಯರ್, ಉಪ ಮೇಯರ್, ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಮೀಸಲಾತಿ ಪ್ರಕಟವಾಗದಿರುವುದರಿಂದ ಮೊದಲ ಸಭೆ ನಡೆಯದಿರುವುದು ಇದಕ್ಕೆ ಕಾರಣ. ಆದರೆ, ಈ ಎಲ್ಲಾ ನೂತನ ಸದಸ್ಯರಿಗೂ ಮೇಲ್ಮನೆ ಉಪ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕು ಸಿಕ್ಕಿದೆ.
ಬಿಜೆಪಿಯ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ ಅವರ ರಾಜಿನಾಮೆಯಿಂದ ತೆರವಾಗಿರುವ ಮೈಸೂರು- ಚಾಮರಾಜನಗರ ಜಿಲ್ಲಾ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಮೇಲ್ಮನೆಗೆ ಆ. 22ರಂದು ಉಪ ಚುನಾವಣೆ ನಡೆಯಲಿದೆ. ಈ ಸಂಬಂಧ ಜು. 29ರಂದು ಅದಿಸೂಚನೆಯೂ ಪ್ರಕಟವಾಗಿದೆ. ನಾಮಪತ್ರ ಸಲ್ಲಿಕೆಗೆ ಆ.5 ಕೊನೆಯ ದಿನ. ಆದರೆ, ಈವರೆಗೆ ಯಾರೂ ನಾಮಪತ್ರ ಸಲ್ಲಿಸಿಲ್ಲ.
ಆಡಳಿತರೂಢ ಕಾಂಗ್ರೆಸ್ನಲ್ಲಿ ಎರಡು ಡಜನ್ ಆಕಾಂಕ್ಷಿಗಳಿದ್ದಾರೆ. ಬಿಜೆಪಿಯಿಂದ ಮಾಜಿ ಶಾಸಕ ತೋಂಟದಾರ್ಯ, ಕೆಜೆಪಿಯಿಂದ ಪ್ರೊ. ಮಲ್ಲಿಕಾರ್ಜುನಪ್ಪ, ಕಾ.ಪು. ಸಿದ್ದಲಿಂಗಸ್ವಾಮಿ ಅವರ ಹೆಸರು ಕೇಳಿ ಬರುತ್ತಿದೆ. ಜೆಡಿಎಸ್ನಲ್ಲಿ ಇನ್ನೂ ಅಷ್ಟಾಗಿ ಚಟುವಟಿಕೆಗಳಿಲ್ಲ.
ಮೈಸೂರು, ಚಾಮರಾಜನಗರ ಪ್ರತಿನಿಧಿಸುವ ಇಬ್ಬರು ಸಂಸದರು, 15 ಮಂದಿ ವಿಧಾನಸಭಾ ಹಾಗೂ ಐವರು ವಿಧಾನಪರಿಷತ್ ಸದಸ್ಯರಿಗೆ, ಪಾಲಿಕೆಯ 65, ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರಸಭೆಯ ತಲಾ 31, ಕೆ.ಆರ್. ನಗರ ಪುರಸಭೆಯ 22, ನಂಜನಗೂಡು ಹಾಗೂ ಹುಣಸೂರು ಪುರಸಭೆಯ ತಲಾ 27, ಬನ್ನೂರು, ಗುಂಡ್ಲುಪೇಟೆ ಪುರಸಭೆಯ ತಲಾ 23, ಪಿರಿಯಾಪಟ್ಟಣ ಪಂಪನ 15, ಎಚ್.ಡಿ. ಕೋಟೆ ಪಪಂನ 24, ಟಿ. ನರಸೀಪುರ ಹಾಗೂ ಯಳಂದೂರು ಪಪಂನ ತಲಾ 11, ಹನೂರು ಪಪಂನ 13, ಮೈಸೂರು ಜಿಪಂನ 46, ಚಾಮರಾಜನಗರ ಜಿಪಂನ 21 ಸದಸ್ಯರಿಗೆ ಮತದಾನದ ಹಕ್ಕಿದೆ.
ಇದಲ್ಲದೆ ಉಭಯ ಜಿಲ್ಲೆಗಳ ಎಲ್ಲಾ ತಾಪಂ ಹಾಗೂ ಗ್ರಾಪಂ ಸದಸ್ಯರಿಗೂ ಮತದಾನದ ಹಕ್ಕಿದೆ. ಒಟ್ಟು ಮತದಾರರ ಸಂಖ್ಯೆ 7,010 ಎಂದು ಪಟ್ಟಿ ಪ್ರಕಟಿಸಲಾಗಿದೆ. ಆದರೆ, ಈ ಪೈಕಿ ಸಂಸದರು, ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಜಿಪಂ ಹೊರತುಪಡಿಸಿ, ಇತರೆಲ್ಲಾ ಸ್ಥಳೀಯ ಸಂಸ್ಥೆಗಳಲ್ಲೂ ಮತದಾನದ ಹಕ್ಕಿರುವುದಿರಂದ ಅವರು ಒಂದು ಕಡೆ ಮಾತ್ರ ಮತ ಚಲಾಯಿಸಬಹುದು. ಹೀಗಾಗಿ ವಾಸ್ತವ ಮತದಾರರ ಸಂಖ್ಯೆ ಕಡಿಮೆಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

