ಮೈಸೂರು

ಪಿಜಿ ಸಿಇಟಿ ಬರೆದರೂ ಅರ್ಜಿ ಸಲ್ಲಿಸದ ಅಭ್ಯರ್ಥಿಗಳು

Published On :

ಕ.ಪ್ರ.ವಾರ್ತೆ , ಮೈಸೂರು , ಜು. 31
ಮೈಸೂರು ವಿವಿಯು ಸ್ನಾತಕೋತ್ತರ ಪದವಿ ಓದಲು ಬಯಸುವ ಅಭ್ಯರ್ಥಿಗಳಿಗೆ ಪ್ರಪ್ರಥಮ ಬಾರಿಗೆ ಎಲ್ಲಾ ವಿಷಯಗಳಿಗೂ ಜಾರಿಗೆ ತಂದ ಪ್ರವೇಶ ಪರೀಕ್ಷೆಯಿಂದ ಅಭ್ಯರ್ಥಿಗಳು ಗೊಂದಲಕ್ಕೆ ಸಿಲುಕಿದ್ದು, ಸಿಇಟಿ ಬರೆದ ಅಭ್ಯರ್ಥಿಗಳಲ್ಲಿ ಬಹುತೇಕ ಮಂದಿ ಆಯಾ ವಿಭಾಗಗಳಲ್ಲಿ ಅರ್ಜಿ ಸಲ್ಲಿಸದೆ ಇರುವುದು ಪ್ರವೇಶಾತಿ ಸಂದರ್ಭದಲ್ಲಿ ಕಷ್ಟ ತಂದೊಡ್ಡುವ ಸಾಧ್ಯತೆ ಇದೆ.
ಈ ಹಿಂದೆ ಮೈಸೂರು ವಿವಿ ಕೆಲವು ಸ್ನಾತಕೋತ್ತರ ಪದವಿಗಳಿಗೆ ಪ್ರವೇಶ ಪರೀಕ್ಷೆ ಕಡ್ಡಾಯಗೊಳಿಸಿತ್ತು. ಆದರೆ, ಪ್ರಸಕ್ತ ಸಾಲಿನಿಂದ ಎಲ್ಲಾ ವಿಷಯಗಳಿಗೂ ಸಿಇಟಿ ಕಡ್ಡಾಯ ಮಾಡಿದೆ. ಅದರಂತೆ ಜು. 17 ರಿಂದ 23 ರವರೆಗೆ ಸಿಇಟಿ ಪರೀಕ್ಷೆ ನಡೆದಿದೆ. ಈ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಪ್ರವೇಶ ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಪ್ರವೇಶ ಬಯಸುವವರು ಸಿಇಟಿಗೆ ಅರ್ಜಿ ಸಲ್ಲಿಸುವುದರ ಜತೆಗೆ ಆಯಾ ವಿಭಾಗಗಳಿಗೂ ಪ್ರತ್ಯೇಕ ಅರ್ಜಿ ಸಲ್ಲಿಸಬೇಕೆಂದು ವಿವಿ ನಿಯಮ ರೂಪಿಸಿದೆ.
ಆ. 5 ಕೊನೆ ದಿನ: ಈಗಾಗಲೇ ಸಿಇಟಿ ಬರೆದಿರುವ ಅಭ್ಯರ್ಥಿಗಳು (ಎಂ.ಫಿಲ್ ಕೋರ್ಸಿಗೆ ಅನ್ವಯಿಸುವುದಿಲ್ಲ) ತಾವು ಅಧ್ಯಯನ ನಡೆಸಲು ಇಚ್ಛಿಸುವ ವಿಭಾಗಗಳಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಲು ಆ. 5 ಕೊನೆ ದಿನ. ಇದರ ಬಗ್ಗೆ ಸ್ಪಷ್ಟ ಮಾಹಿತಿ ಇರುವ ಕೆಲವೆ ಮಂದಿ ಮಾತ್ರ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಬಹುತೇಕ ಮಂದಿ ಸಿಇಟಿ ಕೇಂದ್ರಕ್ಕೆ ಸಲ್ಲಿಸಿರುವ ಅರ್ಜಿಯೇ ಅಂತಿಮ ಎಂದು ಭಾವಿಸಿ ಸಿಇಟಿಯ ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಮೈಸೂರು ವಿವಿ ಜು. 31 ರಂದು ಸಿಇಟಿ ಫಲಿತಾಂಶ (ಢಿಢಿಢಿ.್ಡಟ್ಝಿಟಣಡ್ಟ್ಠಜ.ಛ್ಛ.್ಝಟಿನಲ್ಲಿ) ಪ್ರಕಟಿಸಿದೆ. ಸಿಇಟಿ ಕೇಂದ್ರಕ್ಕೆ ಸಲ್ಲಿಸಿದ ಅರ್ಜಿಯೇ ಅಂತಿಮ ಎಂದು ಭಾವಿಸಿರುವ ಅಭ್ಯರ್ಥಿಗಳು ಒಂದು ವೇಳೆ ಆಯಾ ವಿಭಾಗಗಳಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸದಿದ್ದರೆ ಪ್ರವೇಶಾತಿ ನಿರಾಕರಣೆ ಆಗುವ ಸಾಧ್ಯತೆ ದಟ್ಟವಾಗಿದೆ.
ಈಗಲೂ ಕಾಲ ಮಿಂಚಿಲ್ಲ
ಸಿಇಟಿ ಅಭ್ಯರ್ಥಿಗಳಿಗೆ ಈಗಲೂ ಕಾಲ ಮಿಂಚಿಲ್ಲ. ಇನ್ನೂ ಐದು ದಿನಗಳು ಬಾಕಿ ಇರುವುದರಿಂದ ಕೂಡಲೇ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ 200 ಪಾವತಿಸಿ ಅರ್ಜಿ ಪಡೆದು (ಈಗಾಗಲೇ ಅರ್ಜಿ ಪಡೆದಿರುವವರೂ) ಸಿಇಟಿ ಫಲಿತಾಂಶದ ಅಂಕ ನಮೂದಿಸಿ, ಮೂಲ ದಾಖಲಾತಿಗಳ ಜೆರಾಕ್ಸ್ ಪ್ರತಿಗಳಿಗೆ ಅಟೆಸ್ಟ್ ಮಾಡಿಸಿ ಆಯಾ ವಿಭಾಗಗಳಿಗೆ ಅರ್ಜಿ ಸಲ್ಲಿಸಬೇಕು. ತಪ್ಪಿದ್ದಲ್ಲಿ ಸೀಟು ಕಳೆದುಕೊಳ್ಳಬೇಕಾಗುತ್ತದೆ.
ಅರ್ಜಿ ಸಲ್ಲಿಸುವವರ ಗಮನಕ್ಕೆ
ಆಡಳಿತಾಧಿಕಾರಿ ಕಚೇರಿ, ಮೈಸೂರು ವಿವಿ, ಮಾನಸಗಂಗೋತ್ರಿ, ಮೈಸೂರು- 570006. ದೂ. 0821- 2419357, 2419359, 2419359. ಹಾಸನ- 08172- 240578, ಮಂಡ್ಯ- 08232- 291112, ಚಾಮರಾಜನಗರ- 08226- 226025 ಸಂಪರ್ಕಿಸಬಹುದು.
ಪಿಜಿ ಕೋರ್ಸ್ ಸೇರಬಯಸುವ ಅಭ್ಯರ್ಥಿಗಳಿಗೆ ಸಿಇಟಿ ನಡೆಸಲಾಗಿದ್ದು, ಆಯಾ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಸಲ್ಲಿಸುವ ಅರ್ಜಿಗಳನ್ನು ಜು. 6 ರಿಂದ ವಿತರಿಸಲಾಗುತ್ತಿದೆ. ಇನ್ನೂ ಅರ್ಜಿ ಪಡೆಯದವರು ಕೂಡಲೇ ಸೆನೆಟ್ ಭವನದಲ್ಲಿ ಅರ್ಜಿ ಪಡೆದು, ಭರ್ತಿ ಮಾಡಿ ಆ. 5 ರೊಳಗೆ ಸಲ್ಲಿಸಬೇಕು.
- ಪ್ರೊ. ಸಿ. ಬಸವರಾಜು, ಕುಲಸಚಿವರು, ಮೈಸೂರು ವಿವಿ

-ಜೆ. ಮಹದೇವ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.