ಮೈಸೂರು

ಗಂಧನಹಳ್ಳಿಯಲ್ಲಿ ಸಂಭ್ರಮದ ಪಲ್ಲಕ್ಕಿ ಉತ್ಸವ

Published On :

ಕ.ಪ್ರ.ವಾರ್ತೆ    ಕೆ.ಆರ್. ನಗರ    ಜೂ. 1
ತಾಲೂಕಿನ ಗಂಧನಹಳ್ಳಿ ಗ್ರಾಮದಲ್ಲಿ ಯಡಳಮ್ಮ ತಾಯಿಯ ಪಲ್ಲಕ್ಕಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು.
ಗ್ರಾಮ ದೇವತೆ ಹುಣಸಮ್ಮನ ರಥೋತ್ಸವ ಮುಗಿದ ಏಳು ದಿನಗಳ ನಂತರ ನಡೆಯುವ ಈ ಉತ್ಸವದಲ್ಲಿ ಸಾವಿರಾರು ಭಕ್ತರು ಮತ್ತು ನವ ವಧು- ವರರು ಪಾಲ್ಗೊಂಡು, ತಂಬಿಟ್ಟು ಆರತಿಯೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
ನಂತರ ಯಡಳಮ್ಮನ ರಥಕ್ಕೆ ವಿಗ್ರಹವನ್ನಿಟ್ಟು ರಥವನ್ನು ಗ್ರಾಮದಿಂದ ಕಪ್ಪಡಿ ಕ್ಷೇತ್ರದ ಕಾವೇರಿ ದಡದಲ್ಲಿರುವ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತೆರಳಿ, ಮೂರು ಸುತ್ತು ಸುತ್ತಿ ನಂತರ ಮಹಿಳೆಯರು ಆರತಿಯೊಂದಿಗೆ ಇಷ್ಟಾರ್ಥ ನೆರವೇರಿಕೆಗೆ ಹರಕೆ ಹೊತ್ತುಕೊಂಡರು. ಬೆಂಕಿ ಕೊಂಡದ ಮೇಲೆ ನಡೆದ ಭಕ್ತಾದಿಗಳು ಗಮನ ಸೆಳೆದರು.  ಗ್ರಾಮದ ಯಾಜಮಾನರಾದ ಜಿ.ಎನ್. ರಘು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಜಿ.ಎನ್. ಮಲ್ಲೇಗೌಡ, ಭಾಗ್ಯಮ್ಮ, ಎಸ್. ರಾಮು, ಶಿವಸ್ವಾಮಿ, ಬೀರೇಗೌಡ, ತಾ. ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಜಿ.ಎಂ. ಹೇಮಂತ್, ಕನಕ ಸಂಘದ ಅಧ್ಯಕ್ಷ ಅರುಣ್, ಕಾರ್ಯದರ್ಶಿ ಕೆಂಪರಾಜ್, ಮುಖಂಡರಾದ ಜಿ.ಡಿ. ಕೃಷ್ಣೇಗೌಡ, ಜಿ.ಎನ್. ಮಂಜುನಾಥ್, ಸೋಮು, ಭಾಸ್ಕರ್, ಜೈರಾಜ್, ಶ್ರೀಧರ್, ಜಿ.ಎನ್. ರವಿ, ಮನು, ಮರೀಗೌಡ, ಲೋಕೇಶ್, ವೃಷಭೇಂದ್ರ ಮತ್ತು ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.