ಜೈವಿಕ ಗೊಬ್ಬರ ಬಗ್ಗೆ ರೈತರಿಗೆ ತಿಳಿವಳಿಕೆ
ಕ.ಪ್ರ.ವಾರ್ತೆ ಮೈಸೂರು ಜೂ. 3
ಜೈವಿಕ ಗೊಬ್ಬರ ಬಗ್ಗೆ ರೈತರಿಗೆ ತಿಳಿವಳಿಕೆ ನೀಡಲು ಹಾಗೂ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
ತೋಟಗಾರಿಕೆ ಇಲಾಖೆಯು ರೈತರಿಗೆ ವ್ಯಾಮ್, ಪಿಎಸ್ಬಿ, ಅಜೋಸ್ಪೈರಿಲಂ ಎಂಬ ಜೈವಿಕ ಗೊಬ್ಬರ ವಿತರಿಸಿತ್ತು. ಈ ಗೊಬ್ಬರದ ಮಾಹಿತಿ ಕೊರತೆಯಿಂದ ರೈತರು ಶನಿವಾರ ತೋಟಗಾರಿಕೆ ಉಪ ನಿರ್ದೇಶಕರ ಕಚೇರಿ ಎದುರು ಪ್ರತಿಭಟಿಸಿದ್ದರು.
ಈ ಹಿನ್ನೆಲೆಯಲ್ಲಿ ಮೈಸೂರು ತಾಲೂಕು ಇಲವಾಲ ಹೋಬಳಿ ಕಮರಹಳ್ಳಿ ಮತ್ತು ಶೆಟ್ಟಿನಾಯಕನಹಳ್ಳಿ ಗ್ರಾಮಗಳಿಗೆ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಕೃಷ್ಣಮೂರ್ತಿ, ಸಹಾಯಕ ತೋಟಗಾರಿಕೆ ನಿರ್ದೇಶಕ ನಂಜಯ್ಯ, ಸಹಾಯಕ ಅಧಿಕಾರಿಗಳಾದ ಚೇತನ್, ಮಂಜುನಾಥ್ ಅವರನ್ನೊಳಗೊಂಡ ತಾಂತ್ರಿಕ ತಂಡವು ರೈತರಿಗೆ ಜೈವಿಕ ಗೊಬ್ಬರದ ಬಗ್ಗೆ ತಾಂತ್ರಿಕ ಮಾಹಿತಿಯನ್ನು ಭಾನುವಾರ ವಿವರಿಸಿದ್ದಾರೆ.
ರೈತರನ್ನು ಖುದ್ದಾಗಿ ಭೇಟಿ ಮಾಡಿದ ಅಧಿಕಾರಿಗಳು, ಜೈವಿಕ ಗೊಬ್ಬರಗಳನ್ನು ಉತ್ಪಾದಿಸುವ ವಿಧಾನ, ಗೊಬ್ಬರದಲ್ಲಿರುವ ಸೂಕ್ಷ್ಮಜೀವಿಗಳ ಬಗ್ಗೆ, ಉಪಯೋಗಿಸುವ ವಿಧಾನ ಹಾಗೂ ಈ ಗೊಬ್ಬರದಿಂದ ಮುಂದೆ ಆಗುವ ಪ್ರಯೋಜನಗಳ ಬಗ್ಗೆ ಮನವರಿಕೆ ಮಾಡಿ ಕೊಟ್ಟಿದ್ದಾರೆ.
ಪ್ರಸ್ತುತ ರಾಸಾಯನಿಕ ಗೊಬ್ಬರಕ್ಕೆ ಹೆಚ್ಚಿನ ಬೆಲೆಯಿದ್ದು, ಸರಿಯಾದ ಸಮಯಕ್ಕೆ ರೈತರಿಗೆ ದೊರಕುತ್ತಿಲ್ಲ. ಇಂತಹ ಸಂದರ್ಭಗಳಲ್ಲಿ ಜೈವಿಕ ಗೊಬ್ಬರ ಬಳಕೆಯ ನೂತನ ತಂತ್ರಜ್ಞಾನ ಬಗ್ಗೆ ಅರಿವು ಮೂಡಿಸಲಾಯಿತು. ಜೈವಿಕ ಗೊಬ್ಬರದ ಬಗ್ಗೆ ತಾಂತ್ರಿಕ ಮಾಹಿತಿ ಇರುವ ಕೈಪಿಡಿಗಳನ್ನು ತಾಪಂ ಸದಸ್ಯ ಗೋವಿಂದಸ್ವಾಮಿ ಸಮ್ಮುಖದಲ್ಲಿ ರೈತರಿಗೆ ವಿತರಿಸಲಾಯಿತು.
ಇತ್ತೀಚಿನ ದಿನಗಳಲ್ಲಿ ಸರ್ಕಾರ ಸಾವಯವ ಪದ್ಧತಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ರಸಗೊಬ್ಬರಗಳ ಅಭಾವ ಮತ್ತು ಹೆಚ್ಚಿನ ಮಾರುಕಟ್ಟೆ ದರದ ಸಂದರ್ಭದಲ್ಲಿ ರೈತರಿಗೆ ಜೈವಿಕ ಗೊಬ್ಬರಗಳ ಬಗ್ಗೆ ಅರಿವು ಮೂಡಿಸಲು ಕ್ರಮ ಕೈಗೊಳ್ಳುತ್ತಿದೆ. ಪ್ರಾಥಮಿಕ ಹಂತದಲ್ಲಿ ರಸಗೊಬ್ಬರಗಳಿಗೆ ಪರ್ಯಾಯವಾಗಿ ಸ್ವಲ್ಪ ಪ್ರಮಾಣದ ಜೈವಿಕ ಗೊಬ್ಬರಗಳು ಉಪಯೋಗಿಸುವ ಸಂದರ್ಭದಲ್ಲಿ ಗೊಂದಲಗಳಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

