ನಗರದ ಎಲ್ಲಾ ವಾರ್ಡ್ಲ್ಲೂ ಗ್ರಂಥಾಲಯ
ಡಿ.ಎನ್. ಮಹೇಂದ್ರ
ಕ.ಪ್ರ.ವಾರ್ತೆ ಮೈಸೂರು ಜೂ. 4
ನಗರದ ಎಲ್ಲಾ ವಾರ್ಡ್ಗಳಲ್ಲಿಯೂ ಗ್ರಂಥಾಲಯ ತೆರೆಯುವ ಇಂಗಿತವನ್ನು ನಗರ ಗ್ರಂಥಾಲಯ ಪ್ರಾಧಿಕಾರ ವ್ಯಕ್ತಪಡಿಸಿದೆ.
ನಗರದಲ್ಲಿ ಈಗ 25 ಗ್ರಂಥಾಲಯಗಳಿವೆ. ಈ ಪೈಕಿ ಹಲವು ಗ್ರಂಥಾಲಯಗಳು ಸುಸ್ಥಿತಿಯಲ್ಲಿದ್ದರೆ, ಕೆಲವು ಗ್ರಂಥಾಲಯಗಳು ದುಸ್ಥಿತಿ ತಲುಪಿವೆ. ಈ ನಡುವೆ ಪಾಲಿಕೆ ಸೂಕ್ತ ಸ್ಥಳ ಮತ್ತು ಕಟ್ಟಡ ಕಲ್ಪಿಸಿಕೊಡುವುದಾದರೆ ಗ್ರಂಥಾಲಯ ಪ್ರಾಧಿಕಾರದ ಉದ್ದೇಶ ಈಡೇರುತ್ತದೆ.
ನಗರದಲ್ಲಿ ವಿದ್ಯಾರಣ್ಯಪುರಂ, ಜೆ.ಪಿ. ನಗರ, ಸಿದ್ಧಾರ್ಥನಗರ, ವಿವೇಕಾನಂದನಗರ, ಉದಯಗಿರಿ ಸೇರಿದಂತೆ ಹಲವು ಕಡೆಯಲ್ಲಿನ ನಗರ ಗ್ರಂಥಾಲಯ ಶಾಖೆ ಸುಸ್ಥಿತಿಯಲ್ಲಿದೆ. ಆದರೆ, ಸರಸ್ವತಿಪುರಂ ಸೇರಿದಂತೆ ಹಲವು ಕಡೆಯಲ್ಲಿನ ಗ್ರಂಥಾಲಯದ ಸ್ಥಿತಿ ಹೇಳ ತೀರದಂತಾಗಿದೆ. ಆದರೆ, ನಗರ ಪಾಲಿಕೆ ಸದಸ್ಯರು ಸುಸ್ಥಿತಿಯಲ್ಲಿರುವ ಗ್ರಂಥಾಲಯ ಕಂಡು ತಮ್ಮ ವಾರ್ಡ್ನಲ್ಲಿ ಉತ್ತಮ ಗ್ರಂಥಾಲಯ ಬೇಕು ಎಂದು ಆಗ್ರಹಿಸುತ್ತಿದ್ದಾರೆ.
ನಗರ ಗ್ರಂಥಾಲಯ ಪ್ರಾಧಿಕಾರವು ನಗರ ಪಾಲಿಕೆಯ ಮೇಯರ್ ಚುನಾವಣೆಯ ಬಳಿಕ ಪ್ರಾಧಿಕಾರದ ಬಜೆಟ್ ಸಭೆಯಲ್ಲಿ ಈ ವಿಷಯದ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲು ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ಬಿ. ಮಂಜುನಾಥ್ ಉದ್ದೇಶಿಸಿದ್ದಾರೆ.
40 ಕಟ್ಟಡ ಅವಶ್ಯಕತೆ: ನಗರ ಪಾಲಿಕೆಯ ಎಲ್ಲಾ ಸದಸ್ಯರು ಒಪ್ಪಿ ಗ್ರಂಥಾಲಯಕ್ಕೆ ಅಗತ್ಯವಿರುವ ಸ್ಥಳ ಮತ್ತು ಕಟ್ಟಡ ಒದಗಿಸುವುದಾದರೆ ಖಂಡಿತವಾಗಿಯೂ ಉದ್ದೇಶ ಫಲಕೊಡಲಿದೆ. ಈಗಾಗಲೇ ನಗರದ 25 ಕಡೆಗಳಲ್ಲಿ ಗ್ರಂಥಾಲಯ ಇರುವುದರಿಂದ ಉಳಿದ 40 ಕಡೆ ಮಾತ್ರ ಕಟ್ಟಡದ ಅಗತ್ಯ ಬೀಳಲಿದೆ. ಗ್ರಂಥಾಲಯ ನಿರ್ವಹಣೆಗೆ ಚಿಕ್ಕದಾದ ಕೊಠಡಿಯಾದರು ಸಾಕು ಎಂಬುದು ಮಂಜುನಾಥ್ ಅವರ ಅಭಿಪ್ರಾಯ.
ತಾತ್ಕಾಲಿಕ ಸಿಬ್ಬಂದಿ: ಹೀಗೆ ತೆರೆಯಲಾಗುವ ಗ್ರಂಥಾಲಯ ನಿರ್ವಹಣೆಗೆ ಅಗತ್ಯವಿರುವ ಸಿಬ್ಬಂದಿಯನ್ನು ಗೌರವಧನದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಸಹ ತೀರ್ಮಾನಿಸಲಾಗಿದೆ. ತಾತ್ಕಾಲಿಕವಾಗಿ ಈ ಸಿಬ್ಬಂದಿ ನೇಮಕ ಮಾಡಿಕೊಂಡು ಬಳಿಕ ಸರ್ಕಾರದಿಂದ ನೇಮಕಾತಿ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.
ಈ ಉದ್ದೇಶ ಈಡೇರುವುದಾದರೆ ನಗರದ ಎಲ್ಲಾ ವಾರ್ಡ್ಗಳಲ್ಲಿಯೂ ಗ್ರಂಥಾಲಯ ಸೇವೆ ದೊರಕಿದಂತೆ ಆಗುತ್ತದೆ.
ನಗರ ಗ್ರಂಥಾಲಯ ಪ್ರಾಧಿಕಾರಕ್ಕೆ ನಗರ ಪಾಲಿಕೆ ಮೇಯರ್ ಅಧ್ಯಕ್ಷರಾಗಿರುತ್ತಾರೆ. ಗ್ರಂಥಾಲಯ ಇಲಾಖೆ ಉಪ ನಿರ್ದೇಶಕರು ಕಾರ್ಯದರ್ಶಿ ಆಗಿ ಕೆಲಸ ಮಾಡುತ್ತಾರೆ. ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು ಉಪಾಧ್ಯಕ್ಷರಾಗಿ, ಉಳಿದಂತೆ ಪಾಲಿಕೆಯ ಇಬ್ಬರು ಸದಸ್ಯರು, ಸರ್ಕಾರ ನಾಮ ನಿರ್ದೇಶಿತ ವ್ಯಕ್ತಿ, ಬಿಇಒ ಮುಂತಾದವರು ಸದಸ್ಯರಾಗಿರುತ್ತಾರೆ. ನಗರ ಪಾಲಿಕೆ ಆಡಳಿತದ ಚುಕ್ಕಾಣಿ ಹಿಡಿದ ಮೇಯರ್ ಅವರೆ ಪ್ರಾಧಿಕಾರದ ಅಧ್ಯಕ್ಷರಾಗಿ ಕೆಲಸ ಮಾಡುವುದರಿಂದ ನಗರ ಪಾಲಿಕೆಯ ಎಲ್ಲಾ ವಾರ್ಡ್ಗಳಲ್ಲಿ ಗ್ರಂಥಾಲಯ ಸ್ಥಾಪನೆಗೆ ಯಾವುದೆ ಅಡ್ಡಿ ಆಗುವುದಿಲ್ಲ ಎಂಬ ವಿಶ್ವಾಸ ಹಲವರಲ್ಲಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

