ಸಿಎಂ ವಿಶೇಷಾಧಿಕಾರಿ ಕಚೇರಿಗಾಗಿ ಸ್ಥಳ ಪರಿಶೀಲನೆ
ಕ.ಪ್ರ.ವಾರ್ತೆ ಮೈಸೂರು ಜೂ. 4
ಮೈಸೂರಿನಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷಾಧಿಕಾರಿ ಕಚೇರಿ ತೆರೆಯಲಾಗುತ್ತಿದೆ. ವಿಶೇಷಾಧಿಕಾರಿಯಾಗಿ ಎಂ.ರಾಮಯ್ಯ ಅವರನ್ನು ನೇಮಿಸಲಾಗಿದೆ.
ಇದು ವರುಣ ಕ್ಷೇತ್ರದ ಹಾಗೂ ಜಿಲ್ಲೆಯ ಜನರ ಸಂಪರ್ಕ ಕಚೇರಿ ಆಗಲಿದೆ. ಈವರೆಗೆ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಆಗಿದ್ದ ಕಾಡಾ ಸಂಕೀರ್ಣದಲ್ಲೆ ಮುಖ್ಯಮಂತ್ರಿ ಕಚೇರಿ ತೆರೆಯುವ ಸಂಬಂಧ ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಏನೇನು ವ್ಯವಸ್ಥೆ?: ಎರಡು, ಮೂರು ಕಟ್ಟಡಗಳನ್ನು ಕಚೇರಿಗಾಗಿ ಗುರುತಿಸಲಾಗಿದ್ದು, ಇದರಲ್ಲಿ ಕಾಡಾ ಕಚೇರಿಯೇ ವರುಣ ಕ್ಷೇತ್ರದ ಮತದಾರರಿಗೆ ಸಂಪರ್ಕಕ್ಕೆ ಉತ್ತಮವಾಗಿದೆ. ಟಿ. ನರಸೀಪುರ, ನಂಜನಗೂಡು ಹಾಗೂ ಮೈಸೂರು ತಾಲೂಕಿನಿಂದ ಆಗಮಿಸುವವರಿಗೆ ಕಾಡಾ ಕಚೇರಿಯೆ ಸಮೀಪ. ಇದರಿಂದ ಇಲ್ಲಿಯೆ ಕಚೇರಿ ಆರಂಭಿಸುವ ಲೆಕ್ಕಾಚಾರವಿದೆ.
ಇಲ್ಲಿ ಒಬ್ಬ ಸ್ಥಳೀಯ ಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿ ಇರಲಿದ್ದಾರೆ. ಅವರಿಗೆ ನೇರವಾಗಿ ತಮ್ಮ ಅಹವಾಲನ್ನು ಸಾರ್ವಜನಿಕರು ಸಲ್ಲಿಸಬಹುದು.
ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಕಗೊಂಡಿರುವ ದೇವರಾಜ ಅರಸು ಹಿಂದುಳಿದ ಅಭಿವೃದ್ಧಿ ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಎಂ. ರಾಮಯ್ಯ ಅವರು ವಾರದಲ್ಲಿ ಎರಡು ದಿನ ಇಲ್ಲಿನ ಕಚೇರಿ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ತೀರ್ಮಾನವಾಗಿಲ್ಲ: ಜಿಲ್ಲಾ ಉಸ್ತುವಾರಿ ಸಚಿವರಾಗಿ ವಿ. ಶ್ರೀನಿವಾಸಪ್ರಸಾದ್ ಅವರ ಕಚೇರಿ ಇನ್ನೂ ಅಂತಿಮಗೊಂಡಿಲ್ಲ. ಉಸ್ತುವಾರಿ ಸಚಿವರ ಹೆಸರು ಅಂತಿಮಗೊಳ್ಳುವ ಹೊತ್ತಿಗೆ ವಿಧಾನಸಭಾ ಅಧಿವೇಶನ ಆರಂಭಗೊಂಡಿದ್ದರಿಂದ ಅವರು ಮೈಸೂರಿಗೆ ಬಂದಿಲ್ಲ. ಅಧಿವೇಶನ ಮುಗಿದ ಬಳಿಕವೆ ಕಚೇರಿ ಎಲ್ಲಿ ಎನ್ನುವುದು ನಿಗದಿಯಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

