ಮೈಸೂರು

ಜ್ಞಾನಕ್ಕಿಂತ ವಿವೇಕ ಮಿಗಿಲು: ಡಾ. ಧರಣಿದೇವಿ

Published On :

ಕ.ಪ್ರ.ವಾರ್ತೆ  ಮೈಸೂರು  ಜೂ. 9
ಜ್ಞಾನಕ್ಕಿಂತ ವಿವೇಕ ಮಿಗಿಲಾದುದು ಎಂದು ಕರ್ನಾಟಕ ಪೊಲೀಸ್ ಅಕಾಡೆಮಿ ಉಪ ನಿರ್ದೇಶಕಿ ಹಾಗೂ ಸಾಹಿತಿ ಡಾ. ಧರಣಿದೇವಿ ಮಾಲಗತ್ತಿ ಹೇಳಿದರು.
ಲಯನ್ಸ್ ಮೈಸೂರು ದಕ್ಷಿಣ ಸಂಸ್ಥೆಯು ಶಾರದಾ ವಿಲಾಸ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭಾನುವಾರ ಸಂಜೆ ಏರ್ಪಡಿಸಿದ್ದ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚಿನ ಅಂಕ ಪಡೆದರಿಗೆ ನೀಡಲಾಗುವ 2012- 13 ನೇ ಸಾಲಿನ ದಕ್ಷಿಣ ಕೇಸರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ವಿವೇಕ ಇಲ್ಲದ ಜ್ಞಾನವು ಪ್ರಯೋಜನವಾಗಲಾರದು ಹಾಗೂ ಅನೇಕ ಜ್ಞಾನವಂತರು ವಿವೇಕಿಗಳಾಗಿರುವುದಿಲ್ಲ ಎಂಬುದನ್ನು ಗಮನಿಸಬಹುದು. ಶೇ.100 ಜ್ಞಾನ ಹೊಂದಿರುವುದಕ್ಕಿಂತ ಶೇ.100 ವಿವೇಕ ಸಂಪಾದಿಸುವುದು ಉತ್ತಮ. ಜ್ಞಾನ ಹಾಗೂ ವಿವೇಕ ಇದ್ದಾಗ ಮಾತ್ರ ವ್ಯಕ್ತಿ ಪರಿಪೂರ್ಣನಾಗಿ ಉನ್ನತಿ ಗಳಿಸಲು ಸಾಧ್ಯವಾಗಲಿದೆ ಎಂದರು.
ಅಂಕ ಗಳಿಸುವುದೇ ಜೀವನದ ಯಶಸ್ಸಲ್ಲ. ಅದಕ್ಕಿಂತಲೂ ಮುಖ್ಯವಾಗಿ ಜೀವನದ ಕೌಶಲ ಸಂಪಾದಿಸುವಲ್ಲಿ ಮುಂದಾಗಬೇಕು. ಕಡಿಮೆ ಅಂಕ ಬಂದಿತೆಂದು ಬದುಕು ದುರಂತ ಮಾಡಿಕೊಳ್ಳುವ ವಿದ್ಯಾರ್ಥಿಗಳಿದ್ದಾರೆ. ಅಂಕ ಕಡಿಮೆ ಬಂದರೂ ಅಧೀರರಾಗದೆ ಆತ್ಮವಿಶ್ವಾಸದಿಂದ ಮುಂದಿನ ಜೀವನ ರೂಪಿಸಿಕೊಳ್ಳುವಲ್ಲಿ ಮಾರ್ಗದರ್ಶನ ಮಾಡುವ ಅಗತ್ಯವಿದೆ. ಸೇವಾ ಸಂಸ್ಥೆಗಳು ಆ ದಿಕ್ಕಿನಲ್ಲಿ ಚಿಂತಿಸಿ ಶಾಲಾ ಕಾಲೇಜುಗಳಲ್ಲಿ ಸಮಾಲೋಚನಾ ಕಾರ್ಯಕ್ರಮ ನಡೆಸುವ ಅಗತ್ಯವಿದೆ ಎಂದು ತಿಳಿಸಿದರು.
ಇಂದಿನ ಆಕರ್ಷಣೆಯ ನಡುವೆಯೂ ನಗರ ವಿದ್ಯಾರ್ಥಿಗಳು ಶೇ. 90ಕ್ಕಿಂತಲೂ ಹೆಚ್ಚಿನ ಅಂಕ ಪಡೆದು ಸಾಧನೆ ಮಾಡಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
2012- 13ನೇ ಸಾಲಿನ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚಿನ ಅಂಕ ಪಡೆದ ವಿವಿಧ ಶಾಲೆಗಳ 55 ಮಂದಿ ವಿದ್ಯಾರ್ಥಿಗಳಿಗೆ ದಕ್ಷಿಣ ಕೇಸರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಕೆಲವು ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೆಕೊಂಡರು. ಸಂಸ್ಥೆ ಅಧ್ಯಕ್ಷ ಆರ್.ವೈ. ಅರುಣ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಇ.ವಿ. ರಾಮಪ್ರಸಾದ್, ಸದಸ್ಯರಾದ ನಜೀರ್ ಅಹಮ್ಮದ್, ಪ್ರೊ. ಕೆ.ಪಿ ಕುಮಾರ್ ಇದ್ದರು. ಕಪಿ. ರಾಜನ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.