ಮೈಸೂರು

ರಾಸಾಯನಿಕ ಮುಕ್ತ ಆಹಾರ ಆರೋಗ್ಯಕರ

Published On :

ಕ.ಪ್ರ.ವಾರ್ತೆ  ಮೈಸೂರು  ಜೂ. 9
ನಾವು ಸೇವಿಸುವ ಆಹಾರ ರಾಸಾಯನಿಕ ಮುಕ್ತವಾದರೆ ಮಾತ್ರ ಆರೋಗ್ಯಕರ ಎಂದು ಬೀಜ ಸಂರಕ್ಷಕ ಹಾಗೂ ಪ್ರಗತಿಪರ ರೈತ ರೇಚಯ್ಯ ಹೇಳಿದರು.
ಸಹಜ ಸಮೃದ್ಧಿ ಸಂಸ್ಥೆಯು ಸಾವಯವ ಕೃಷಿಕರ ಬಳಗದ ಸಹಯೋಗದಲ್ಲಿ ದೇವರಾಜ ಮೊಹಲ್ಲಾದ ದಿವಾನ್ಸ್ ರಸ್ತೆಯಲ್ಲಿ ಭಾನುವಾರ ಆರಂಭಿಸಿರುವ ನೇಚರ್ ಸ್ಟೋರ್ ದೇಸಿಯ ಆಹಾರ ಮಳಿಗೆ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ದೇಸಿ ತಳಿಗಳನ್ನು ಕಡಿಮೆ ನೀರಿನಲ್ಲಿ ರಾಸಾಯನಿಕವಿಲ್ಲದೆ ಬೆಳೆಯಬಹುದಾಗಿದೆ. ಇದರಿಂದಾಗಿ ರೈತರಿಗೆ ಆಗುವ ಖರ್ಚು ಸಹ ಕಡಿಮೆ ಹಾಗೂ ಅಂತಹ ಉತ್ಪನ್ನ ಕೊಳ್ಳುವ ಗ್ರಾಹಕರ ಅರೋಗ್ಯಕ್ಕೂ ಸಹಕಾರಿ. ಹೀಗಾಗಿ ವಿಷಮುಕ್ತ ಆಹಾರ ಬಳಸುವಲ್ಲಿ  ಗ್ರಾಹಕರು ಜಾಗೃತಿ ವಹಿಸಬೇಕು ಎಂದು ತಿಳಿಸಿದರು.
ಈವರೆಗೆ 12 ದೇಸಿಯ ಬತ್ತದ ತಳಿಗಳನ್ನು ಸಂರಕ್ಷಿಸಿದ್ದೇನೆ. ನಾವು ಬೆಳೆದ ಫಸಲನ್ನು ಇಲ್ಲಿಗೆ ಸರಬರಾಜು ಮಾಡುತ್ತೇವೆ. ಇದನ್ನು ಉಪಯೋಗಿಸುವುದರಿಂದ ವಿವಿಧ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿದ್ದು, ಯಾವುದೇ ಪ್ರದೇಶಗಳಗಿ ಒಗ್ಗುವ ಈ ತಳಿಗಳನ್ನು ಬೆಳೆಯುವಲ್ಲಿ ರೈತರು ಮುಂದಾಗಿ ಸಮಾಜ ಹಾಗೂ ಪರಿಸರಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದರು.
ಮಳಿಗೆ ಉದ್ಘಾಟಿಸಿ ಮಾತನಾಡಿದ ನಿಮಿಷಾಂಬ ನೃತ್ಯಶಾಲೆಯ ಸಂಸ್ಥಾಪಕ ವಿದ್ವಾನ್ ಶ್ರೀಧರ್ ಜೈನ್, ನೂರಾರು ಮೈಲುಗಳ ದೂರದಲ್ಲಿನ ರಾಜ್ಯಗಳಲ್ಲಿ ಬೆಳೆಯುವ ಅಕ್ಕಿ, ಗೋದಿ ಬಳಸುವ ಬದಲಿಗೆ ನಮ್ಮ ನಾಡಿನ ರೈತರು ಬೆಳೆಯುತ್ತಿರುವ ದೇಸಿ ತಳಿಗಳಾದ ಕೆಂಪಕ್ಕಿ, ಧ್ಯಾನಗಳು, ಬೆಳೆಕಾಳು, ತರಕಾರಿಗೆ ಹೆಚ್ಚಿನ ಉತ್ತೇಜನ ನೀಡಬೇಕು ಎಂದು ತಿಳಿಸಿದರು.
ರಾಸಾಯನಿಕಗಳನ್ನು ಬಳಸಿ ಉತ್ಪಾದಿಸುವ ಆಹಾರದಿಂದ ಜನರ ಆರೋಗ್ಯ ಹದಗೆಡುತ್ತದೆ. ಇದರ ಬದಲಿಗೆ ಆರೋಗ್ಯಕ್ಕೆ ಪೂರಕವಾದ ಹಾಗೂ ನಿಸರ್ಗಸ್ನೇಹಿ ಸಾವಯವ ಉತ್ಪನ್ನ ಬಳಸುವಲ್ಲಿ ಜನರು ಮುಂದಾಗಬೇಕು ಎಂದು ತಿಳಿಸಿದರು.
ಸಾವಯವ ರೈತ ಆಲೂರು ಮೂರ್ತಿ, ವಿದುಷಿ ಸೌಮ್ಯ ಜೈನ್, ಸಹಜ ಸಮೃದ್ಧಿ ಸಂಚಾಲಕ ಕೃಷ್ಣಪ್ರಸಾದ್ ಹಾಗೂ ಮಹದೇವ ಪ್ರಸಾದ್ ಇದ್ದರು.  
ಈ ಮಳಿಗೆಯಲ್ಲಿ ವಿವಿಧ ಬಗೆಯ ಅಕ್ಕಿಗಳು, ನವಣೆ, ಧಾನ್ಯಗಳು, ಹಿಟ್ಟುಗಳು, ಸೋಪು ಮತ್ತಿತರ ವಸ್ತುಗಳನ್ನು ಮಾರಾಟಕ್ಕಿಡಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.