ಮೈಸೂರು

ಅಂಬೇಡ್ಕರ್ ಭವನ ಮಹತ್ವ ಅಳಿಸುವ ಸಂಚು: ಆರೋಪ

Published On :

ಮೈಸೂರು: ನಗರದ ಅಂಬೇಡ್ಕರ್ ಭವನದ ಆಸುಪಾಸಿನಲ್ಲಿ ವಿವೇಕಾನಂದ ಸ್ಫೂರ್ತಿ ಕೇಂದ್ರ ನಿರ್ಮಿಸುತ್ತಿರುವುದರ ಹಿಂದೆ ಅಂಬೇಡ್ಕರ್ ಭವನದ ಮಹತ್ವ ಅಳಿಸುವ ಸಂಚಿದೆ ಎಂದು ಅಶೋಕಪುರಂ ಅಭಿಮಾನಿಗಳ ಬಳಗ ಆರೋಪಿಸಿದೆ. ಪಾರಂಪರಿಕ ಎನ್‌ಟಿಎಂಎಸ್ ಶಾಲೆಯನ್ನು ರಾಮಕೃಷ್ಣ ಮಠಕ್ಕೆ ನೀಡಿ, ಅಲ್ಲಿ ವಿವೇಕಾನಂದರ ಸ್ಫೂರ್ತಿ ಕೇಂದ್ರ ನಿರ್ಮಿಸಲು ಹೊರಟಿರುವುದರ ಹಿಂದೆ ಸಂಘ ಪರಿವಾರದ ಕೈವಾಡ ಇದೆ. ಬಡಮಕ್ಕಳಿಗೆ ಆಶ್ರಯವಾಗಿದ್ದ ಸರ್ಕಾರಿ ಶಾಲೆ ಕಬಳಿಸಿ ಅಲ್ಲಿ ವಿವೇಕಾನಂದರ ಸ್ಫೂರ್ತಿ ಕೇಂದ್ರ ನಿರ್ಮಿಸುವುದು ದಲಿತರು, ಬಡವರನ್ನು ದರಿದ್ರ ದೇವೋಭವ ಎಂದು ಕರೆದ ವಿವೇಕಾನಂದರ ಆದರ್ಶಕ್ಕೆ ಮಾಡಿದ ಅವಮಾನ. ಅಲ್ಲಿ ನಿರ್ಮಿಸುತ್ತಿರುವುದು ಕೇಸರಿಕರಣದ ಕೇಂದ್ರವೆ ಹೊರತು ವಿವೇಕಾನಂದ ಕೇಂದ್ರವಲ್ಲ ಎಂದು ಬಳಗದ ಸಂಚಾಲಕ ಸಿದ್ದಸ್ವಾಮಿ ಆರೋಪಿಸಿದ್ದಾರೆ. ಅಂಬೇಡ್ಕರ್ ಭವನದ ಪಕ್ಕದಲ್ಲಿ ಸ್ಫೂರ್ತಿ ಕೇಂದ್ರ ನಿರ್ಮಾಣ ಸಲ್ಲದು. ಪ್ರಗತಿಪರರು, ದಲಿತ ಸಂಘಟನೆಗಳು ಮತ್ತು ಸಾರ್ವಜನಿಕರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು ಎಂದು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.