ಎನ್ಟಿಎಂಎಸ್ ಶಾಲೆ ದತ್ತು ತೆಗೆದುಕೊಳ್ಳಲಿ'
ಕ.ಪ್ರ.ವಾರ್ತೆ ಮೈಸೂರು ಜೂ. 14
ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಎನ್ಟಿಎಂಎಸ್ ಕನ್ನಡ ಶಾಲೆ ಜಾಗದಲ್ಲಿ ಸ್ವಾಮಿ ವಿವೇಕಾನಂದ ಸ್ಫೂರ್ತಿ ಕೇಂದ್ರ ನಿರ್ಮಿಸದಂತೆ ಒತ್ತಾಯಿಸಿ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಶುಕ್ರವಾರ ಶಾಲಾ ಮುಂಭಾಗದಲ್ಲಿ ಪ್ರತಿಭಟಿಸಲಾಯಿತು.
ಪತ್ರಿಕೋದ್ಯಮಮಿ ರಾಜಶೇಖರ ಕೋಟಿ ಮಾತನಾಡಿ, ರಾಮಕೃಷ್ಣ ಆಶ್ರಮವು ಕನ್ನಡ ಶಾಲೆ ಒಡೆದು ವಿವೇಕಾನಂದ ಸ್ಮಾರಕ ನಿರ್ಮಿಸುವ ಬದಲು ಈ ಶಾಲೆಯನ್ನೇ ದತ್ತು ತೆಗೆದುಕೊಳ್ಳಲಿ. ತಪ್ಪಿದ್ದಲ್ಲಿ ಎಷ್ಟೇ ಖರ್ಚಾದರೂ ಪರವಾಗಿಲ್ಲ, ನಾವೇ ದತ್ತು ತೆಗೆದುಕೊಂಡು ಶಾಲೆಯನ್ನು ಮುಂದುವರಿಸುತ್ತೇವೆ. ಕನ್ನಡ ಶಾಲೆಯ ಕೆಡವಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ರಾಮಕೃಷ್ಣ ಆಶ್ರಮಕ್ಕೆ ನಿಜವಾಗಿಯೂ ವಿವೇಕ ಇದ್ದರೆ ಕೇಂದ್ರ ನಿರ್ಮಿಸಬಾರದು. ಧರ್ಮ ಪ್ರಚಾರಕ್ಕೆ ಮೀಸಲಾದ ಸಂಸ್ಥೆಯ ಅಧರ್ಮದಂತಹ ಕೆಲಸಕ್ಕೆ ಮುಂದಾಗಿರುವುದು ಖಂಡನೀಯ. ಉಳ್ಳವರಿಂದ ದುಡ್ಡು ಪಡೆದು ಶಿಕ್ಷಣ ನೀಡುವ ಈ ಸಂಸ್ಥೆ ಬಡವರಿಗೆ ಏನು ಮಾಡುತ್ತಿದೆ ಎಂಬುದು ಪ್ರಶ್ನಾರ್ಹ ಎಂದರು.
ಪ್ರತಿಭಟನಾ ವೇಳೆ ಆಗಮಿಸಿದ್ದ ಸುಮಾರು 80 ವರ್ಷದ ಎಂ. ಶಾಜದ್ ಎಂಬವರು ಸರ್ಕಾರದ ನಿರ್ಧಾರ ಖಂಡಿಸಿದರು. ನಮ್ಮಂತಹ ಬಡವರ ಮಕ್ಕಳು ಈ ಶಾಲೆಯಲ್ಲಿ ಓದುತ್ತಾರೆ. ಆದರೆ, ಆಶ್ರಮದಂತಹ ಸಂಸ್ಥೆಗಳು ಕನ್ನಡ ಶಾಲೆ ಒಡೆಯಲು ಹುನ್ನಾರ ನಡೆಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಇದೇ ವೇಳೆ ಈ ಸಾಲಿನಲ್ಲಿ ಒಟ್ಟು 23 ಮಕ್ಕಳು ದಾಖಲಾಗಿದ್ದು, ಅವರಿಗೆಲ್ಲ ತಾತಯ್ಯ ವಿಚಾರ ವೇದಿಕೆಯಿಂದ ತಾತಯ್ಯನವರ ಹಸ್ತಾಕ್ಷರವುಳ್ಳ ಪುಸ್ತಕ ವಿತರಿಸಲಾಯಿತು.
ಕನ್ನಡ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಸ.ರ ಸುದರ್ಶನ, ಸಂಸ್ಕೃತಿ ಸುಬ್ರಹ್ಮಣ್ಯ, ಎಂ.ಬಿ. ವಿಶ್ವನಾಥ್, ಪ್ರೊ. ಪಂಡಿತರಾಧ್ಯ, ಕೊ.ಸು. ನರಸಿಂಹರಮೂರ್ತಿ, ಬ್ಯಾಂಕ್ ಪುಟ್ಟಸ್ವಾಮಿ, ಬಿ.ಎ. ಶಿವಶಂಕರ, ಮೂಗೂರು ನಂಜುಂಡಸ್ವಾಮಿ, ಪ್ರೊ. ಪಿ.ವಿ. ನಂಜರಾಜ ಅರಸ್, ಕೆ. ಮುದ್ದುಕೃಷ್ಣ, ಬಸವರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

