'ಕಾನೂನು ಅರಿವಿದ್ದರೆ ದೌರ್ಜನ್ಯ ತಡೆಯಲು ಸಾಧ್ಯ'
ಕ.ಪ್ರ.ವಾರ್ತೆ ಭೇರ್ಯ ಜೂ. 15
ಮಹಿಳೆಯರು ಕಾನೂನಿನ ಪ್ರಕಾರ ಹಕ್ಕುಗಳನ್ನು ತಿಳಿದುಕೊಂಡಿದ್ದರೆ ದೌರ್ಜನ್ಯ ತಡೆಗಟ್ಟಬಹುದು ಎಂದು ಕೆ.ಆರ್. ನಗರದ ಕಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಧೀಶೆ ನೂರುನ್ನೀಸಾ ಹೇಳಿದರು.
ಇಲ್ಲಿನ ಗ್ರಾಪಂ ಆವರಣದಲ್ಲಿ ತಾಲೂಕು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಕೀಲರ ಸಂಘದವರು ಹಮ್ಮಿಕೊಂಡಿದ್ದ ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005ರ ಬಗ್ಗೆ ಮಹಿಳಾ ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ವಿವಾಹವಾಗಿ ಕೇವಲ ಮೂರು ಅಥವಾ ಆರು ತಿಂಗಳಲ್ಲಿ ಕ್ಷುಲಕ್ಕ ಕಾರಣಕ್ಕೆ ವಿವಾಹ ವಿಚ್ಚೇದನಕ್ಕೆ ಅರ್ಜಿ ಹಾಕುತ್ತಾರೆ. ಮತ್ತೆ ಕೆಲವರು ಕಲಹ ಅಥವಾ ಕಿರುಕುಳದ ಆರೋಪ ಮಾಡಿ ಪೊಲೀಸ್ ಠಾಣೆ ಮತ್ತು ನ್ಯಾಯಾಲದ ಮೆಟ್ಟಿಲೇರಿ ತಮ್ಮ ಅಮೂಲ್ಯ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಿಂದೆ ನಮ್ಮ ಹಿರಿಯರು 60 ವರ್ಷಗಳ ಕಾಲ ತಮ್ಮ ಕುಟುಂಬಗಳ ಜತೆ ಜೀವನ ಮಾಡಲಿಲ್ವ ಎಂದು ಅವರು ಪ್ರಶ್ನಿಸಿದರು.
ಅಂದು ಕೂಡ ದೌರ್ಜನ್ಯಗಳು ಮತ್ತು ಕೌಟುಂಬಿಕ ಕಲಹ, ಕಿರುಕುಳದ ಆರೋಪಗಳು ಇದ್ದವು. ಆದರೆ ಪೊಲೀಸ್ ಠಾಣೆ, ನ್ಯಾಯಾಲಯ ಎಲ್ಲವೂ ಇತ್ತು. ಆದರೆ ಹಿರಿಯರ ಸಮ್ಮುಖದಲ್ಲಿ ರಾಜಿ ಸಂಧಾನ ನಡೆಸಿ ಅಲ್ಲೆ ಬಗೆಹರಿಸಿಕೊಳ್ಳತ್ತಿದ್ದರು ಎಂದು ತಿಳಿಸಿದರು.
ನೆಮ್ಮದಿ ಕೊಡಲು ಸಾಧ್ಯವೆ?: ನ್ಯಾಯಾಲಯ ಕಾನೂನಿನಡಿಯಲ್ಲಿ ಅತ್ತೆ, ಮಾವ, ಗಂಡನಿಗೆ ಶಿಕ್ಷೆ ಕೊಟ್ಟು ಜೀವನಾಂಶವನ್ನು ಕೊಡಿಸಬಹುದು. ಆದರೆ ಮಹಿಳೆಯರ ಮನಸ್ಸಿಗೆ ನೆಮ್ಮದಿ ಕೊಡಲು ಸಾಧ್ಯವಿಲ್ಲ. ಸಮಸ್ಯೆಗಳು, ಕೌಟುಂಬಿಕ ಕಲಹಗಳು ಇದ್ದರೆ ಆದಷ್ಟು ಗ್ರಾಮದಲ್ಲಿ ಸಂಧಾನ ಮೂಲಕ ಬಗೆಹರಿಸಲು ಪ್ರಯತ್ನಿಸಿ, ಬಗೆಹರಿಯದಿದ್ದಲ್ಲಿ ಪೊಲೀಸ್ ಠಾಣೆ ಮತ್ತು ನ್ಯಾಯಾಲಯದ ಮೊರೆ ಹೋಗಬಹದು ಎಂದು ಹೇಳಿದರು.
ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ 2005ರ ಬಗ್ಗೆ ವಕೀಲೆ ಪೂರ್ಣಿಮಾ ಹಾಗೂ ಮಹಿಳಾ ಆಸ್ತಿ ಹಕ್ಕು ಬಗ್ಗೆ ವಕೀಲೆ ಪದ್ದಶ್ರೀ ಉಪನ್ಯಾಸ ನೀಡಿದರು. ಗ್ರಾಪಂ ಅಧ್ಯಕ್ಷೆ ಜಯಮಾಲ, ತಾಲೂಕು ವಕೀಲರ ಸಂಘದ ಅಧ್ಯಕ್ಷ ದುರ್ಗೆಶ್, ವೈದ್ಯಾಧಿಕಾರಿ ಡಾ. ಷಾಹೀನ್ ತಾಜ್, ಕೌಟುಂಬಿಕ ದೌರ್ಜನ್ಯದ ಮಹಿಳಾ ಸಂರಕ್ಷಣಾಧಿಕಾರಿ ಲಕ್ಷ್ಮೀ, ವಕೀಲರಾದ ಡಿ.ಆರ್. ರಮೇಶ್, ಮಹದೇವ್, ಮಂಜುನಾಥ್, ಕೊಡಿಯಾಲ ಸತೀಶ್, ಆರೋಗ್ಯ ಇಲಾಖೆ ತಾ. ಶಿಕ್ಷಣಾಧಿಕಾರಿ ಲೋಕನಾಥ್, ಆರೋಗ್ಯ ಸಹಾಯಕಿಯರಾದ ಡಿಸೋಜ, ಜ್ಯೋತಿಲಕ್ಷ್ಮೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಅಕ್ಕಮಹಾದೇವಿ, ತಾ. ಸ್ತ್ರೀಶಕ್ತಿ ಸಂಘಗಳ ಒಕ್ಕೂಟ ಸದಸ್ಯೆ ಶಿವಮ್ಮ, ಪಿಡಿಒ ಶಿವನಂಜು, ಭೇರ್ಯ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರು, ಸ್ತ್ರೀಶಕ್ತಿ ಸಂಘದ ಸದಸ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

