ಪಡಿತರ 'ಹೆಬ್ಬೆಟ್ಟು' ಇಂಟರ್ನೆಟ್ ಎಡವಟ್ಟು
ಕ.ಪ್ರ.ವಾರ್ತೆ ಹುಣಸೂರು ಜೂ.19
ತಾಲೂಕಿನಾದ್ಯಂತ ಗ್ರಾಪಂ ಹಾಗೂ ಖಾಸಗಿ ಸೇವಾ ಕೇಂದ್ರಗಳಲ್ಲಿ ಪಡಿತರ ಚೀಟಿಗೆ ಹೆಸರು ನೋಂದಾಯಿಸಲು ಒಂದಡೆ ಇಂಟರ್ನೆಟ್ ಸೇವಾ ಕೊರತೆಯಾದರೆ, ಮತ್ತೊಂದೆಡೆ ಜೂ. 30 ಕಡೆ ದಿನವಾಗಿದ್ದರಿಂದ ಸಾರ್ವಜನಿಕರು ನೂಕುನುಗ್ಗಲಿನಲ್ಲಿ ಪರದಾಡುವ ಸ್ಥಿತಿ ಬಂದಿದೆ.
ಪಡಿತರ ಚೀಟಿಗೆ ಹೆಸರು ನೋಂದಾಯಿಸಿ ಹೆಬ್ಬೆಟ್ಟು ಗುರುತು ನೀಡಲು ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಇನ್ನೊಂದೆಡೆ ಇಂಟರ್ನೆಟ್ ಸೇವೆ ಕೊರತೆಯಿಂದ ಗ್ರಾಪಂ ಹಾಗೂ ಖಾಸಗಿ ಸೇವಾ ಕೇಂದ್ರಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಪರದಾಡುವ ಪರಿಸ್ಥಿತಿ ತಾಲೂಕಿನ 30 ಗ್ರಾಪಂಗಳಲ್ಲಿಯೂ ಸಹಜವಾಗಿದೆ. ದೂರವಾಣಿ ಕೇಂದ್ರದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಕಳೆದ 3 ತಿಂಗಳಿಂದ ದೂರವಾಣಿ ಮತ್ತು ಇಂಟರ್ನೆಟ್ ಸಂಪರ್ಕ ಇಲ್ಲದೆ ಕಚೇರಿ ಕೆಲಸಕ್ಕೆ ತೊಡಕಾಗಿದೆ.
ಸಾರ್ವಜನಿಕರು ಪಡಿತರ ಚೀಟಿಗೆ ಹೆಸರು ನೋಂದಾಯಿಸಲು ಸಮಯದ ಅಭಾವದಿಂದ ಪರದಾಡುತ್ತಿದ್ದು, ದೂರವಾಣಿ ಸಂಪರ್ಕ ಕೇಂದ್ರದವರು ಗ್ರಾಪಂ ಕಚೇರಿಗೆ ವ್ಯವಸ್ಥಿತ ಸೌಲಭ್ಯ ಕಲ್ಪಿಸುವರೆ ಕಾದು ನೋಡಬೇಕಿದೆ.
ನೇರಳಕುಪ್ಪೆ ಗ್ರಾಪಂ ಮತ್ತು ಹನಗೋಡು ಗ್ರಾಪಂನ ಪಿಡಿಒ ಬಿ. ಮಣಿ ಒಬ್ಬರೆ ಎರಡೂ ಕಡೆ ಕಾರ್ಯ ನಿರ್ವಹಿಸುತ್ತಿದ್ದಾರೆ. ನೇರಳಕುಪ್ಪೆ ಗ್ರಾಪಂನ ಕಂಪ್ಯೂಟರನ್ನು ಹನಗೋಡಿನ ಕಚೇರಿಯಲ್ಲಿರಿಸಿ ಪಡಿತರ ಚೀಟಿ ನೋಂದಣಿಯನ್ನು ಹನಗೋಡಿನ ಇ-ಮಹಿಳೆ ಸಮಗ್ರ ಮಾಹಿತಿ ಹಾಗೂ ಸೇವಾ ಕೇಂದ್ರದವರ ಸಹಾಯದಿಂದ ಅನುಕೂಲ ಕಲ್ಪಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರವಹಿಸಿದ್ದಾರೆ ಎಂದು ಗ್ರಾಪಂ ಮಾಜಿ ಉಪಾಧ್ಯಕ್ಷೆ ಸುಂದರಮ್ಮ ಮಹದೇವ್ ಪ್ರಶಂಸಿದ್ದಾರೆ.
ಪಡಿತರ ಕಾರ್ಡ್ ಪಡೆಯಲು ಹೆಬ್ಬೆಟ್ಟಿನ ಗುರುತು ನೀಡಲು ಗ್ರಾಪಂ ಕಚೇರಿ ಮುಂದೆ ದಿನವಿಡಿ ಕಾದು ಸಾಕಾಗಿ ನೋಂದಾಯಿಸಲು ಆಗದೆ ಸಾಕಾಗಿದ್ದೇವೆ. ಆತ್ತ ಕೂಲಿ ಕೆಲಸವು ಇಲ್ಲದೆ, ಮನೆಗೆ ಹೋಗಿದ್ದೇವೆ. ಗ್ರಾ.ಪಂ ಮಟ್ಟದಲ್ಲಿ ಅಧಿಕಾರಿಗಳನ್ನು ಕೇಳಿದರೆ ಇಂಟರ್ನೆಟ್ ಸಮಸ್ಯೆ ಇದೆ ಎನ್ನುತ್ತಾರೆ.
ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೆ ಕ್ರಮಕೈಗೊಳ್ಳಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬಿಜೆಪಿ ಸರ್ಕಾರ ಪಡಿತರ ವ್ಯವಸ್ಥೆ ಪರಿಪೂರ್ಣ ಮಾಡಲು ವಿಫಲವಾಗಿದೆ. ಕಾಂಗ್ರೆಸ್ ಪಕ್ಷದ ಮೇಲೆ ಜನತೆ ವಿಶ್ವಾಸವಿಟ್ಟು ಮತ ನೀಡಿ ಪಕ್ಷ ಅಧಿಕಾರಕ್ಕೆ ಬಂದರೂ ಜನತೆಗೆ ನೆಮ್ಮದಿ ಇಲ್ಲ. ಒಟ್ಟಾರೆ ಅಧಿಕಾರಕ್ಕೆ ಬರುವ ತನಕ ಸುಳ್ಳು ಭರವಸೆಗಳನ್ನು ನೀಡುತ್ತಾರೆ ವಿನಹ ನಂತರ ಯಾವುದೆ ಜನಪರ ಕಾರ್ಯಕ್ರಮ ಜಾರಿಗೆ ತರುವಲ್ಲಿ ವಿಫಲರಾಗಿದ್ದಾರೆ ಎಂದು ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಕಿಡಿಕಾರಿದ್ದಾರೆ.
ಶೀಘ್ರವೇ ಕ್ರಮ: ಸರ್ಕಾರದ ನಿಯಮದಂತೆ ಅಕ್ರಮ, ಪಡಿತರ ಚೀಟಿ ತಡೆಗಟ್ಟಲು, ಹೊಸದಾಗಿ ಮತ್ತು ನವೀಕರಣ ಮಾಡಲು ಕಡ್ಡಾಯವಾಗಿ ಕಂಪ್ಯೂಟರ್ನಲ್ಲಿ ಹೆಬ್ಬೆಟ್ಟು ಗುರುತು ಮುದ್ರಿಸುವಂತೆ ಸೂಚಿಸಿದ್ದಾರೆ.
ಲೋಪದೋಷವಿದ್ದರೆ ಅಥಾವ ಸಮಸ್ಯೆ ಇದ್ದರೆ ಕೂಡಲೆ ಸಂಬಂಧಿಸಿದ ಅಧಿಕಾರಿಗಳ ಜತೆ ಚರ್ಚಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಅನುಕೂಲ ಕಲ್ಪಿಸಲಾಗುವುದು. ಆದರೆ ಗ್ರಾಪಂ ಕೇಂದ್ರಗಳಲ್ಲಿ ಇಂಟರ್ನೆಟ್ ಸೌಲಭ್ಯದ ಬಗ್ಗೆ ತಾಪಂ ಇಒ ಗಮನ ನೀಡಬೇಕಿದೆ ಎಂದು ತಹಸೀಲ್ದಾರ್ ಶಿವಾನಂದಮೂರ್ತಿ ಕನ್ನಡಪ್ರಭಕ್ಕೆ ಮಾಹಿತಿ ನೀಡಿದರು.
ಧರ್ಮಾಪುರ ನಾರಾಯಣ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

