ಮೈಸೂರು

ಸಭೆಯಲ್ಲಿ ತೀರ್ಮಾನಿಸಿ ಸವಲತ್ತು ವಿತರಿಸಲು ಆಗ್ರಹ

Published On :

ಕಿತ್ತೂರು: ಬಡವರಿಗೆ ಆಶ್ರಯ ಮನೆಯಾಗಲಿ ಬರುವ ಸರ್ಕಾರಿ ಸವಲತ್ತನ್ನು ಗ್ರಾಮಸಭೆಯಲ್ಲಿ ತೀರ್ಮಾನ ಮಾಡಿ ಅವರಿಗೆ ಕೊಡಬೇಕೆಂದು ನಾಗರಾಜು ಒತ್ತಾಯಿಸಿದರು.
ಇಲ್ಲಿನ ಗ್ರಾಪಂ ಆವರಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ, ಗ್ರಾಪಂ ಅಧ್ಯಕ್ಷೆ ಮಂಜುಳಾ ಅವರು ಗ್ರಾಮದಲ್ಲಿ ಎನ್‌ಆರ್‌ಐಜಿ 2013-14ನೇ ಸಾಲಿನ ಹಣ ಬಿಡುಗಡೆ 26.84 ಲಕ್ಷ ಆಯವ್ಯಯ 19,000 ಖರ್ಚಿನ ಬಗ್ಗೆ ಗ್ರಾಮದ ಮುಖಂಡ ಕೆ.ಎಂ. ನಾಗರಾಜು ಅವರ ಸಮ್ಮುಖದಲ್ಲಿ ಸದಸ್ಯರು ಹಾಗೂ ಗ್ರಾಮದ ಮುಖಂಡರಿಗೆ ಮಾತಿನ ಚಕಮಕಿ ನಡೆಯಿತು.
ಜಿಪಂ ಹಾಗೂ ತಾಪಂ ಸದಸ್ಯರು ಗೈರು ಹಾಜರಿದ್ದರು. ರೇಷ್ಮೆ ಇಲಾಖೆಯಿಂದ ಹಿಪ್ಪುನೇರಳೆ ಬೆಳೆಯಲು ಎಸ್ಸಿ, ಎಸ್ಟಿಗೆ 10 ಸಾವಿರ ಸಬ್ಸಿಡಿ ದರವನ್ನು ರೈತರಿಗೆ ಒದಗಿಸಲು ತಿಳಿಸಿದರು. ಬಾಕಿ ಇರುವ ಮನೆ ಮತ್ತು ನೀರಿನ ಕಂದಾಯವನ್ನು ಗ್ರಾಮದಲ್ಲಿ ಕಟ್ಟುನಿಟ್ಟಾಗಿ ವಸೂಲಿ ಮಾಡಬೇಕೆಂದು ಆದೇಶಿಸಿದರು.
ಅರಣ್ಯ ಇಲಾಖೆಯಿಂದ ಭಾಸ್ಕರ್ ಹಾಗೂ ಗ್ರಾಪಂ ಸದಸ್ಯರಾದ ಕೆ.ಪಿ. ಜಗದೀಶ, ಜಮೀರ್‌ಪಾಷ, ಪುಟ್ಟರಾಜು, ಹುಷಮಾಬಾನು, ಪಿಡಿಒ ಕೆ.ಎಸ್. ಲಿಂಗರಾಜು, ಮಾಜಿ ತಾಪಂ ಸದಸ್ಯ ಕೆ.ಟಿ. ಪ್ರಕಾಶ, ಕೃಷ್ಣೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.