ಕೊರಳಿನ ಎಲುಬು ಶಸ್ತ್ರಚಿಕಿತ್ಸೆ ಯಶಸ್ವಿ
ಮೈಸೂರು: ಅಪಘಾತದಲ್ಲಿ ಎಲುಬಿನ ಮುರಿತ ಹಾಗೂ ಉಸಿರಾಟದ ತೊಂದರೆಗೆ ಒಳಗಾಗಿದ್ದ ವ್ಯಕ್ತಿಗೆ ಕೊರಳ ಎಲುಬು ಶಸ್ತ್ರಚಿಕಿತ್ಸೆ ಮಾಡುವಲ್ಲಿ ಸಿದ್ದಾರ್ಥನಗರದಲ್ಲಿರುವ ಮಹದೇಶ್ವರ ನರ್ಸಿಂಗ್ ಹೋಮ್ ವೈದ್ಯರು ಯಶಸ್ವಿಯಾಗಿದ್ದಾರೆ. ಎಲುಬಿನ ಶಸ್ತ್ರಚಿಕಿತ್ಸೆ ಭಾರದಲ್ಲಿದ್ದು, ನೂತನ ತಂತ್ರಗಾರಿಕೆ ಬಳಸಿಕೊಂಡು ಅರಿವಳಿಕೆ ಚುಚ್ಚುಮದ್ದನ್ನು ನೀಡಿ ಪ್ರಪಂಚದಲ್ಲೇ ಮೊದಲ ಬಾರಿಗೆ ಕೊರಳ ಎಲುಬಿನ ಶಸ್ತ್ರಚಿಕಿತ್ಸೆ ಪೂರೈಸಲಾಗಿದೆ. ಟಿ. ನರಸೀಪುರದ ಒಕ್ಕಲಗೇರಿಯ ನಿವಾಸಿಯೊಬ್ಬರು ಬೈಸಿಕಲ್‌ನಿಂದ ಕೆಳಗೆ ಬಿದ್ದು, ಅವರ ಎಡಗೈ ಸಂಪೂರ್ಣ ಮುರಿದು, ಉಸಿರಾಟದ ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡ ವೈದ್ಯರು ನರಬ್ಲಾಕ್ ಮಾಡದೆ ರೋಗಿಯ ಎಲುಬಿನ ಜೋಡಣೆ ಮಾಡಲಾಗಿದೆ ಎಂದು ಶಸ್ತ್ರ ಚಿಕಿತ್ಸಕ ಡಾ.ಕೆ.ಎನ್. ಯೋಗೇಶ್‌ಗೌಡ ಪಾಟೀಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶಸ್ತ್ರ ಚಿಕಿತ್ಸೆ ಮೂಲಕ ಮೂಳೆ ಜೋಡಣೆಗೆ ಅಳವಡಿಸಲಾಗಿದ್ದ ರಾಡ್ ತೆಗೆಸಲಾಗಿದ್ದು, ಅವರು ಮೊದಲಿದ್ದ ಪರಿಸ್ಥಿತಿಗೆ ಮರಳಿದ್ದಾರೆ. ಪ್ರಪಂಚದ ಕೆಲವೇ ಭಾಗಗಳಲ್ಲಿ ಸರ್ವಿಕಲ್ ಎಪಿಡುರಲ್ ಅನೆಸ್ತೀಶಿಯಾ ತಂತ್ರಗಾರಿಕೆ ಬಳಸಿ ಕೊರಳ ಎಲುಬು ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದರು. ಡಾ.ಮಹದೇವ್, ಡಾ.ಕಲಾವತಿ, ಮಂಜು ಭಾರ್ಗವ್ ರೆಡ್ಡಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

