ವಿವೇಕ ಸ್ಮಾರಕ ವಿರೋಧ ಸಲ್ಲ: ದೇಜಗೌ
ಮೈಸೂರು: ನಗರದ ನಾರಾಯಣ ಶಾಸ್ತ್ರಿ ರಸ್ತೆಯ ಎನ್ಟಿಎಂಎಸ್ ಆವರಣದಲ್ಲಿ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಸ್ವಾಮಿ ವಿವೇಕಾನಂದರ ಸ್ಮಾರಕಕ್ಕೆ ವಿರೋಧಿಸುವುದು ಸಲ್ಲದು ಎಂದು ಹಿರಿಯ ಸಾಹಿತಿ ಪ್ರೊ. ದೇಜಗೌ ಹೇಳಿದರು.
ವಿವೇಕಾನಂದ ಸ್ಮಾರಕ ಸಮಿತಿಯು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಗರ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ವಿವೇಕಾನಂದ ಸ್ಮಾರಕ ಆರಂಭಕ್ಕೆ ಮನವಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವೇಕಾನಂದರ ಸ್ಮಾರಕಕ್ಕೆ ವಿರೋಧಿಸಿ ಹೋರಾಟ ಮಾಡುವುದು ಕನ್ನಡದ ಕೆಲಸವಲ್ಲ. ಅವರು ನಿಜವಾದ ಕನ್ನಡಿಗರಾಗಿದ್ದರೆ, ಕನ್ನಡದ ಮಾಧ್ಯಮದಲ್ಲಿ ಕಲಿತವರಿಗೆ ಉದ್ಯೋಗ ಮೀಸಲಾತಿಗೆ ಹೋರಾಡ ಮಾಡಲಿ. ಐಎಎಸ್, ಕೆಎಎಸ್ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸಿರುವಾಗ ಉದ್ಯೋಗ ನೇಮಕಾತಿಯಲ್ಲಿ ಕನ್ನಡ ಮಾಧ್ಯಮದವರಿಗೆ ಆದ್ಯತೆ ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ ಅವರು, ಇಂತಹ ಹೋರಾಟ ಮಾಡಲು ಅವರಿಗೆ ಧೈರ್ಯವಿಲ್ಲ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಸಾಹಿತಿ ಡಾ. ಸಿಪಿಕೆ, ಮನುಕುಲದ ಚರಿತ್ರೆಯಲ್ಲಿ ಅತ್ಯುತ್ತಮ ಮಹಾಪ್ರವಾದಿಯಾಗಿರುವ ಸ್ವಾಮಿ ವಿವೇಕಾನಂದರ ಸ್ಮಾರಕ ಅನಿವಾರ್ಯ. ಅದರೆ ಇದಕ್ಕೆ ಶಾಲೆಯನ್ನು ಅಡ್ಡಿಯಾಗಿ ಒಡ್ಡುವ ಕೆಲಸ ನಡೆದಿವೆ. ದೇಶಕ್ಕಾಗಿ ಒಂದು ಗ್ರಾಮವನ್ನು ತ್ಯಜಿಸಬೇಕು ಎಂಬಂತೆ, ವಿವೇಕಾನಂದರ ಸ್ಮಾರಕಕ್ಕಾಗಿ ಎನ್ಟಿಎಂಎಸ್ ಶಾಲೆ ತ್ಯಜಿಸಬೇಕು ಎಂದರು.
ಸಾಹಿತಿ ಡಾ. ಪ್ರಭುಶಂಕರ, ವಿದ್ವಾಂಸ ಡಾ. ಮಳಲಿ ವಸಂತಕುಮಾರ್, ವಿಧಾನಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ, ನಗರ ಪಾಲಿಕೆ ಮಾಜಿ ಸದಸ್ಯ ಡಿ. ನಾಗಭೂಷಣ್, ಮಹಾಜನ ವಿದ್ಯಾ ಸಂಸ್ಥೆ ಅಧ್ಯಕ್ಷ ಆರ್. ವಾಸುದೇವಮೂರ್ತಿ, ಡಾ. ಲೀಲಾ ಪ್ರಕಾಶ್ ಮಾತನಾಡಿದರು.
ಸಾಹಿತಿ ಪ್ರೊ. ಭೈರವಮೂರ್ತಿ, ಡಾ. ಎಚ್. ಬಿ. ರಾಜಶೇಖರ್, ಪ್ರೊ. ಮಲ್ಲಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಚಂದ್ರಶೇಖರ್, ಮಡ್ಡೀಕೆರೆ ಗೋಪಾಲ್, ಮಾನಸ, ಗೌರವ ಕಾರ್ಯದರ್ಶಿ ಡಾ. ವೈ. ಡಿ. ರಾಜಣ್ಣ, ಕರ್ನಾಟಕ ರಾಜ್ಯ ಮುಕ್ತ ವಿವಿ ಪ್ರಸಾರಾಂಗದ ಗೌರವ ನಿರ್ದೇಶಕ ಡಾ. ಡಿ.ಕೆ. ರಾಜೇಂದ್ರ ಮತ್ತಿತರರಿದ್ದರು.
ರಾಜಶೇಖರ ಕದಂಬ ಸ್ವಾಗತಿಸಿದರು. ಡಾ. ಟಿ.ಕೆ. ಕೆಂಪೇಗೌಡ ನಿರೂಪಿಸಿದರು. ಕೆ.ಆರ್. ಪ್ರೇಮಲೀಲಾ ವಂದಿಸಿದರು. ನಂತರ ಸಮಿತಿ ಮುಖಂಡರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

