ಸುಭಾಷ್ಗೆ ಬುದ್ಧಿಭ್ರಮಣೆ: ಮಧುವನ ಚಂದ್ರು ಕಿಡಿ
ಮೈಸೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ನಾಯಕ ಜನಾಂಗದವರೆ ಇಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಕಾಂಗ್ರೆಸ್ ಮುಖಂಡ ಸುಭಾಷ್ ಅವರಿಗೆ ಬುದ್ಧಿಭ್ರಮಣೆಯಾಗಿದೆ ಎಂದು ಮೈಸೂರು ಜಿಲ್ಲಾ ನಾಯಕರ ಯುವ ವೇದಿಕೆ ಅಧ್ಯಕ್ಷ ಮಧುವನ ಚಂದ್ರು ಕಿಡಿಕಾರಿದರು. ಯಾರು ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೋ ಅವರ ವಿರುದ್ಧ ಕಾನೂನು ಸಮರ ಸಾರಲಿ. ಅದು ಬಿಟ್ಟು ಅಮಾಯಕ ಜನಾಂಗದವ ತೇಜೋವಧೆ ಮಾಡುತ್ತಿರುವ ಸುಭಾಷ್ ಕೂಡಲೇ ತಮ್ಮ ವರ್ತನೆ ನಿಲ್ಲಿಸಿ, ಜನಾಂಗದವರ ಕ್ಷಮೆ ಯಾಚಿಸಬೇಕು. ಇಲ್ಲದಿದ್ದಲ್ಲಿ ಈ ಎರಡೂ ಜಿಲ್ಲೆಗಳ ನಾಯಕ ಜನಾಂಗದವರು ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಅವರು ಶುಕ್ರವಾರ ಎಚ್ಚರಿಸಿದರು.
1950ನೇ ಸಾಲಿನಲ್ಲಿಯೇ ಮೈಸೂರು ಜಿಲ್ಲೆಯಲ್ಲಿ ನಾಯಕ ಜನಾಂಗದವರು ಇದ್ದರು ಎನ್ನುವುದಕ್ಕೆ ಸರ್ಕಾರಿ ದಾಖಲೆಗಳೇ ಸಾಕ್ಷಿ ಹೇಳುತ್ತಿವೆ. 1991ನೇ ಸಾಲಿನಲ್ಲಿ ಸರ್ಕಾರ ನಾಯಕ ಜನಾಂಗದವರನ್ನು ಪ.ಪಂಗಡಕ್ಕೆ ಸೇರಿಸಿರುವುದನ್ನು ಸುಭಾಷ್ ಮನಗಾಣಬೇಕು. ಸುಭಾಷ್ ಹೇಳಿಕೆಯ ಹಿಂದೆ ಕಾಂಗ್ರೆಸ್ ಕೈವಾಡವಿದೆ. ಸುಭಾಷ್ ಅವರಿಗೆ ಕಾಂಗ್ರೆಸ್ ಜವಾಬ್ದಾರಿಯುತ ಸ್ಥಾನ ನೀಡಿ ಅವರಿಂದ ತೇಜೋವಧೆ ಮಾಡಿಸುತ್ತಿದೆ. ಈ ಕೃತ್ಯ ನಡೆಸುತ್ತಿರುವ ಕಾಂಗ್ರೆಸ್ಗೆ ನಾಯಕ ಜನಾಂಗದವರು ಮತ ನೀಡಬಾರದು ಎಂದು ಮನವಿ ಮಾಡಿದರು.
ಒಂದು ವೇಳೆ ಈ ವಿವಾದಾತ್ಮಕ ಹೇಳಿಕೆಯಲ್ಲಿ ಕಾಂಗ್ರೆಸ್ ಪಾತ್ರವಿಲ್ಲದಿದ್ದರೆ ಕೂಡಲೇ ಸುಭಾಷ್ ಅವರನ್ನು ಪಕ್ಷದಿಂದ ಉಚ್ಚಾಟಿಸಿ ಅವರಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಲಿ. ಅಲ್ಲದೆ, ಸುಭಾಷ್ ಅವರು ಹೂಡಿರುವ ಸುಳ್ಳು ಮೊಕದ್ದಮೆಗಳನ್ನು ವಾಪಸ್ಸು ಪಡೆದು ಜನಾಂಗದವರಲ್ಲಿ ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ರಾಮನಾಯಕ, ಸಾಹುಕಾರ ಹುಂಡಿ ಮಹದೇವ, ಮಹದೇವ್, ಸೋಮಣ್ಣ, ಮರಿಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

