ಮೈಸೂರು

ಕ್ಯಾನ್ಸರ್ ಗೆದ್ದರೂ ಭಾವುಕರಾದ ವಟ್ಟಂ...

Published On :

ಮೈಸೂರು: 23 ವರ್ಷಗಳ ಹಿಂದೆ ಕ್ಯಾನ್ಸರ್‌ಗೆ ತುತ್ತಾಗಿ ಕಿಮೋಥೆರಪಿ ಪಡೆಯುವುದರ ಜೊತೆಗೆ ಆತ್ಮಸ್ಥೈರ್ಯ ಬೆಳೆಸಿಕೊಂಡು ಕ್ಯಾನ್ಸರ್ ಗೆದ್ದ ಸಂತಸದಲ್ಲಿದ್ದ ಹಿರಿಯ ಪತ್ರಕರ್ತ ಕೃಷ್ಣವಟ್ಟಂ ಅವರು ಕ್ಷಣ ಕಾಲ ಭಾವುಕರಾದರು..
ಭಾನುವಾರ ನಗರದ ಜಗನ್ಮೋಹನ ಅರಮನೆಯಲ್ಲಿ ನಡೆದ ತಾವೇ ರಚಿಸಿರುವ ಕ್ಯಾನ್ಸರ್ ಗೆದ್ದ ಸಂತಸ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅನುಭವ ಹಂಚಿಕೊಂಡ ಅವರು, ನಾನು ವರದಿಗಾರನಾಗಿದ್ದಾಗ ಕ್ಯಾನ್ಸರ್ ಉಚಿತ ತಪಾಸಣೆ ಕಾರ್ಯಕ್ರಮವನ್ನು ವರದಿ ಮಾಡಲು ತೆರಳಿದ್ದೆ. ಅಲ್ಲಿ ರೋಗದ ಲಕ್ಷಣಗಳುಳ್ಳ ಭಿತ್ತಿಪತ್ರ ಓದಿ ತಪಾಸಣೆಗೆ ಒಳಾಗದೆ.
ನನಗೆ ಬಿಎಂಎಚ್‌ನ ಡಾ.ಸಿ.ಬಿ. ಮೂರ್ತಿ ಅವರು ಚಿಕಿತ್ಸೆ ನೀಡಿ, ಜತೆಗೆ ಆರ್ಥಿಕವಾಗಿಯೂ ಸಹಾಯ ಮಾಡುವುದಾಗಿ ಭರವಸೆ ನೀಡಿ ನನ್ನನ್ನು ಭಯದಿಂದ ಮುಕ್ತಗೊಳಿಸಿದರು ಎಂದು ಸ್ಮರಿಸಿದರು.
ಭಾರತ್ ಆಸ್ಪತ್ರೆ ಮತ್ತು ಗಂಥಿ ಸಂಸ್ಥೆಯ ಮುಖ್ಯಸ್ಥ ಡಾ.ಬಿ.ಎಸ್. ಅಜಯ್‌ಕುಮಾರ್ ಮಾತನಾಡಿ, ಕ್ಯಾನ್ಸರ್ ಬಗೆಗೆ ಇರುವ ತಪ್ಪು ಕಲ್ಪನೆ, ಭಯವನ್ನು ನಾವು ತ್ಯಜಿಸಬೇಕು. ಅದಕ್ಕಿಂತಲೂ ಕ್ಯಾನ್ಸರ್ ಎಂಬ ಪದ ಬಳಸುವ ಬಗೆ ಬದಲಾಯಿಸಿಕೊಳ್ಳಬೇಕು. ಆಧುನಿಕ ವೈದ್ಯಕೀಯ ಪದ್ಧತಿಯಿಂದ ಕ್ಯಾನ್ಸರ್ ಗುಣಪಡಿಸಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ಸಕಾರಾತ್ಮಕ ಧೋರಣೆ ಬೆಳೆಸಿಕೊಂಡರೆ ಅದುವೇ ದೊಡ್ಡ ಔಷಧ ಎಂದು ತಿಳಿಸಿದರು.
ಕೃಷ್ಣವಟ್ಟಂ ರಚಿಸಿರುವ ಕ್ಯಾನ್ಸರ್ ಗೆದ್ದ ಸಂತಸ ಕೃತಿಯನ್ನು ಪತ್ರಕರ್ತ ರವೀಂದ್ರ ಭಟ್ಟ ಐನಕೈ ಬಿಡುಗಡೆಗೊಳಿಸಿದರು. ಮೂಲ ಕೃತಿಯನ್ನು ಕನ್ನಡ ಅನುವಾದಿಸಿದ ಡಾ. ಅನಿಲ್ ಸಾಂಗ್ಲಿ, ಶ್ರೀಪಾದ್ ಸಾಂಗ್ಲಿ, ಬಿಎಂಎಚ್‌ನ ಡಾ. ಶೇಷಗಿರಿರಾವ್, ಸಂವಹನ ಪ್ರಕಾಶನದ ಡಿ.ಎನ್. ಲೋಕಪ್ಪ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.