ಮೃಗಾಲಯದಲ್ಲಿ ಬೇಸಿಗೆ ಶಿಬಿರ
ಮೈಸೂರು: ಇಲ್ಲಿನ ಚಾಮರಾಜೇಂದ್ರ ಮೃಗಾಲಯವು ಏ.15 ರಿಂದ ಮೇ 19 ರವರೆಗೆ ಆಸಕ್ತಿಯುಳ್ಳ ವಿದ್ಯಾರ್ಥಿಗಳಿಗಾಗಿ 4 ತಂಡಗಳಲ್ಲಿ ತಲಾ 1 ವಾರದ ಅವಧಿಯ ಬೇಸಿಗೆ ಶಿಬಿರ ಹಮ್ಮಿಕೊಂಡಿದೆ. 1ನೇ ತಂಡ ಬೇಸಿಗೆ ಶಿಬಿರವನ್ನು ಮಾಧ್ಯಮಿಕ ಶಾಲೆ (6 ಮತ್ತು 7ನೇ ತರಗತಿ) ವಿದ್ಯಾರ್ಥಿಗಳಿಗಾಗಿ ಏ.15 ರಿಂದ 21 ರವರೆಗೆ ನಡೆಯಲಿದ್ದು, 30 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. 2ನೇ ತಂಡದಲ್ಲಿ ಪ್ರೌಢಶಾಲೆ 30 ವಿದ್ಯಾರ್ಥಿಗಳಿಗೆ ಏ. 25 ರಿಂದ ಮೇ 1 ರವರೆಗೆ, 3ನೇ ತಂಡದಲ್ಲಿ ಪ್ರೌಢಶಾಲೆ ಮತ್ತು ಪಿಯುಸಿಯ 30 ವಿದ್ಯಾರ್ಥಿಗಳಿಗೆ ಮೇ 4 ರಿಂದ 10 ರವರೆಗೆ ಮೃಗಾಲಯ ಆವರಣದಲ್ಲಿ ಬೆಳಗ್ಗೆ 9.30 ರಿಂದ ಸಂಜೆ 4.30 ರವರೆಗೆ ಶಿಬಿರ ಆಯೋಜಿಸಲಾಗಿದೆ. 4ನೇ ತಂಡದಲ್ಲಿ ಪ್ರೌಢಶಾಲೆ ಮತ್ತು ಪಿಯುಸಿ 30 ವಿದ್ಯಾರ್ಥಿಗಳಿಗೆ ಮೇ 13 ರಿಂದ 19 ರವರೆಗೆ ಕಾರಂಜಿಕೆರೆ ಪ್ರಕೃತಿ ಉದ್ಯಾನವನದಲ್ಲಿ ಶಿಬಿರ ಏರ್ಪಡಿಸಲಾಗಿದೆ. ಮೊದಲು ಬಂದವರಿಗೆ ಆದ್ಯತೆ ಮೇರೆಗೆ ನೋಂದಣಿ ಮಾಡಲಾಗುವುದು. ಶಿಬಿರದ ಸದಸ್ಯತ್ವ ಪಡೆಯಲು ಮಾ.16 ರಿಂದ ಅರ್ಜಿಗಳನ್ನು ವಿತರಿಸಲಾಗುವುದು ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ತಿಳಿಸಿದ್ದಾರೆ. ಈ ಶಿಬಿರದಲ್ಲಿ ಪ್ರಕೃತಿ ಮತ್ತು ವನ್ಯಪ್ರಾಣಿ ಸಂಕುಲಗಳ ಸಂರಕ್ಷಣೆ, ಜೈವಿಕ ವೈವಿಧ್ಯತೆಗಳು ಮುಖ್ಯ ಅಂಶಗಳಾಗಿವೆ. ಹೆಚ್ಚಿನ ಆಕರ್ಷಣೆ ಆಗಿರುತ್ತದೆ ಎಂದು ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂ. 0821- 2523020, 2440752 ಸಂಪರ್ಕಿಸಬಹುದು.
ಸಂಶೋಧನಾ ವೇತನಕ್ಕೆ ಅರ್ಜಿ
ಮೈಸೂರು: ಕೆನಡಾದ ಮ್ಯಾಕ್ಮಾಸ್ಟರ್ ವಿವಿ ಮತ್ತು ಮೈಸೂರು ವಿವಿ ಸಹಯೋಗದಲ್ಲಿ ಕೈಗೊಂಡಿರುವ ಫಾಸ್ಟ್, ಅಫೋರ್ಡಬಲ್, ಈಜಿ ಟು ಯೂಸ್ ಟಿಬಿ ಆ್ಯಂಡ್ ಎಂಡಿಆರ್ಬಿಟಿ ಹ್ಯಾಂಡಲ್ಡ್ ಟೆಸ್ಸರ್ ಫಾರ್ ಯೂಸ್ ಇನ್ ಪೂರ್ ರೀಸೋರ್ಸ್ ಸೆಟ್ಟಿಂಗ್ಸ್ ಯೋಜನೆಯಲ್ಲಿ ಕಾರ್ಯ ನಿರ್ವಹಿಸಲು 1 ಪೂರ್ಣಾವಧಿ ಶಿಷ್ಯವೇತನ ಮತ್ತು 1 ಅಲ್ಪಾವಧಿ ತಾಂತ್ರಿಕ ಸಹಾಯಕರು ಬೇಕಾಗಿದ್ದಾರೆ. ಸಂಶೋಧನಾ ಅಭ್ಯರ್ಥಿಯು ಎಂಎಸ್ಸಿ ತಳಿಶಾಸ್ತ್ರ ಅಥವಾ ಪ್ರಾಣಿಶಾಸ್ತ್ರದಲ್ಲಿ ಪ್ರಥಮ ಅಥವಾ ದ್ವಿತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿರಬೇಕು. ತಾಂತ್ರಿಕ ಸಹಾಯಕ ಹುದ್ದೆಗೆ ಅಭ್ಯರ್ಥಿಯೂ ಡಿಪ್ಲೊಮಾ ಇನ್ ಮೆಡಿಕಲ್ ಲ್ಯಾಬೋರೆಟರಿ ಟ್ರೈನಿಂಗ್ ಪಡೆದು ಮೂರು ವರ್ಷ ಟೂಬರ್ಕ್ಯೂಲೊಸಿಸ್ ಬ್ಯಾಸಿಲೈ ಕೃಷಿಯಲ್ಲಿ ಪರಿಣತಿ ಪಡೆದಿರಬೇಕು. ಸಂಶೋಧನಾ ಅಭ್ಯರ್ಥಿಗೆ 16,000 ಶಿಷ್ಯವೇತನ ಹಾಗೂ ತಾಂತ್ರಿಕ ಸಹಾಯಕನಿಗೆ 6000 ವೇತನ ನೀಡಲಾಗುವುದು.ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಲು ಏಳು ದಿನದೊಳಗೆ ಸಂಬಂಧಿಸಿದ ದಾಖಲಾತಿಗಳೊಂದಿಗೆ ಪ್ರೊ. ನ.ಬ. ರಾಮಚಂದ್ರ, ಪ್ರಧಾನ ಸಂಶೋಧಕರು ಮತ್ತು ತಳಿಶಾಸ್ತ್ರ ಸಂಯೋಜಕರು, ಪ್ರಾಣಿಶಾಸ್ತ್ರ ಅಧ್ಯಯನ ವಿಭಾಗ, ಮೈಸೂರು ವಿವಿ, ಮೈಸೂರು- ಇವರಿಗೆ ಅರ್ಜಿ ಸಲ್ಲಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

