ರಂಗೋಲಿಯಲ್ಲಿ ಅರಳಿದ ಶಿವಲಿಂಗ
ಮೈಸೂರು: ಮಹಿಳೆಯರು ಹಾಗೂ ಪುರುಷರು ರಂಗೋಲಿ ಮೂಲಕ ವಿವಿಧ ಬಗೆಯ ಶಿವಲಿಂಗದ ಚಿತ್ತಾರ ಬಿಡಿಸುವ ಮೂಲಕ ಆ ಕಲೆಯ ಅನಾವರಣದಲ್ಲಿ ಭಾಗವಹಿಸಿದ್ದು ಭಾನುವಾರ ಕಂಡುಬಂತು.
ಮನ್ವಂತರ ಸಮೂಹ ಬಳಗವು ಕೃಷ್ಣಮೂರ್ತಿಪುರಂ ಭಗಿನಿ ಸೇವಾ ಸಮಾಜ ಶಾಲಾ ಆವರಣದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಏರ್ಪಡಿಸಿದ್ದ ರಂಗೋಲಿ ಸ್ಪರ್ಧೆಯನ್ನು ಆಶಾಕಿರಣ ಆಸ್ಪತ್ರೆಯ ತಜ್ಞ ಡಾ. ಗುರುರಾಜ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಇಂದು ಆಧುನಿಕತೆ ಜನರಲ್ಲಿ ಹೆಚ್ಚಾಗುತ್ತಿದಂತೆ ಪ್ರಾಚೀನ ರಂಗೋಲಿ ಕಲೆಯು ಕ್ಷೀಣಿಸುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಯರ ಬಹುಮುಖ್ಯ ಕಲೆಗಳಲ್ಲಿ ಒಂದಾದ ರಂಗೋಲಿ ಬಿಡಿಸುವರರ ಸಂಖ್ಯೆ ಹೆಚ್ಚಾಗಬೇಕು. ಇದರಿಂದ ಮನಸ್ಸಿಗೆ ಉಲ್ಲಾಸ ದೊರಕುವುದರ ಜತೆಗೆ ಸೃಜನಶೀಲತೆ ಲಭ್ಯವಾಗಲಿದೆ ಎಂದರು.
ಕೆ. ರಘುರಾಮ್ ಅಧ್ಯಕ್ಷತೆ ವಹಿಸಿಸಿದ್ದರು. ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ವೈ.ಎಸ್. ಸುಬ್ರಮಣ್ಯಂ, ಕ್ರೆಡಿಟ್ ಐ ಸೇವಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ.ಪಿ. ಹರ್ಷ ಮುಖ್ಯ ಅತಿಥಿಗಳಾಗಿದ್ದರು.
ಬಳಗದ ಅಧ್ಯಕ್ಷ ವೆಂಕಟರಾಂ ಕಶ್ಯಪ್ ನಿರೂಪಿಸಿದರು. ತೀರ್ಪುಗಾರರಾದ ಚಿಕ್ಕಮ್ಮ ಬಸವರಾಜ್, ಬಿ. ವಿ. ಲಲಿತಮ್ಮ, ಸರಸ್ವತಿ, ರಾಜ್ಯಲಕ್ಷ್ಮಿ ಮತ್ತಿತರರಿದ್ದರು.
ಬಹುಮಾನ: ರಂಗೋಲಿ ಸ್ಪರ್ಧೆಯಲ್ಲಿ ಬೆಂಗಳೂರಿನ ದೀಪನ್ ಕುಮಾರ್ ಪ್ರಥಮ, ದೇವರಾಜ ಮೊಹಲ್ಲಾದ ಹನುಮಂತು ದ್ವಿತೀಯ, ಎನ್. ರಶ್ಮಿ ತೃತೀಯ ಹಾಗೂ ಅಗ್ರಹಾರದ ಎಂ.ಜೆ. ಛಾಯ ಅವರು ನಾಲ್ಕನೇ ಬಹುಮಾನ ಪಡೆದರು. ವಿವಿಧ ಭಾಗಗಳಿಂದ ಸುಮಾರು 20 ಮಂದಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

