ವ್ಯಾನಿಗನ್ ಆಸ್ತಿ ಸರ್ಕಾರದ ವಶಕ್ಕೆ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮಾ.19
ಹಾಲೆಂಡ್ ಮೂಲದ ಸ್ಟಫಿಂಗ್ ಕಲಾವಿದ ಎಡ್ವಿನ್ ಜೋಬರ್ಟ್ ವ್ಯಾನಿಗನ್ ಅವರಿಗೆ ಸೇರಿದ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಸರ್ಕಾರದ ವಶಕ್ಕೆ ಒಪ್ಪಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ವ್ಯಾನಿಗನ್ ಆಸ್ತಿಯನ್ನು ಮೈಕಲ್ ಈಶ್ವರ್ ಎಂಬಾತ ಕಬಳಿಸಲು ಯತ್ನಿಸಿದ್ದ. ಅಲ್ಲದೆ, ವ್ಯಾನಿಗನ್ ಅವರನ್ನು ಹೆದರಿಸಿ ತನ್ನ ಹೆಸರಿಗೆ ಆಸ್ತಿ ಬರೆಯಿಸಿಕೊಂಡಿದ್ದ. ಈ ಬಗ್ಗೆ ಈಶ್ವರ್ ವಿರುದ್ಧ ನಜರ್ಬಾದ್ ಠಾಣೆ ಪೊಲೀಸರಿಗೆ ವ್ಯಾನಿಗನ್ ದೂರು ನೀಡಿದ್ದರು. ದೂರು ನೀಡಿದ ಮಾರನೆ ದಿನವೇ ವ್ಯಾನಿಗನ್ ನಿಧನರಾದರು.
ನಂಜನಗೂಡು ಮೂಲದ ಈಶ್ವರ್ ಎಂಬಾತ ತನ್ನ ಹೆಸರಿನ ಮುಂದೆ ಮೈಕಲ್ ಸೇರಿಸಿಕೊಂಡು ವ್ಯಾನಿಗನ್ ಅವರ ದತ್ತು ಪುತ್ರ ಎಂದು ಹೇಳಿಕೊಂಡಿದ್ದ. ಈತ ವ್ಯಾನಿಗನ್ ಅವರನ್ನು ಹೆದರಿಸಿ, ಬೆದರಿಸಿ, ಅಕ್ರಮ ಬಂಧನದಲ್ಲಿಟ್ಟು ಆಸ್ತಿಯನ್ನು ತನ್ನ ಹೆಸರಿಗೆ ಬರೆಸಿಕೊಂಡಿದ್ದಾನೆ.
ಆತನನ್ನು ಬಂಧಿಸಲು ಪೊಲೀಸರ ತಂಡ ರಚಿಸಲಾಗಿದೆ ಎಂದು ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಬಸವರಾಜ ವೈ. ಮಾಲಗತ್ತಿ ತಿಳಿಸಿದರು. ವ್ಯಾನಿಗನ್ಗೆ ಸೇರಿದ ನಜರ್ಬಾದ್ನಲ್ಲಿರುವ ಬಂಗಲೆಯನ್ನು ಮಂಗಳವಾರ ಪರಿಶೀಲಿಸಿದ್ದೇನೆ. ಅಲ್ಲಿ ಬೆಲೆ ಬಾಳುವ ವಸ್ತುಗಳಿವೆ.
ವ್ಯಾನಿಗನ್ ಅವರಿಗೆ ಪತ್ನಿ, ಮಕ್ಕಳು ಹಾಗೂ ಹತ್ತಿರದ ಸಂಬಂಧಿಕರು ಯಾರೂ ಇಲ್ಲ. ಹೀಗಾಗಿ ಅವರ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಹಾಗೂ ಈ ಆಸ್ತಿಗೆ ಆಡಳಿತಾಧಿಕಾರಿ ನೇಮಿಸುವ ಸಂಬಂಧ ಜಿಲ್ಲಾಧಿಕಾರಿಯವರಿಗೆ ವರದಿ ಸಲ್ಲಿಸಲಾಗುವುದು. ಅಲ್ಲದೆ, ವ್ಯಾನಿಗನ್ ಬಂಗಲೆ ಸುತ್ತ ನಿರ್ಬಂಧ ವಿಧಿಸಲಾಗಿದೆ ಎಂದರು.
ವ್ಯಾನಿಗನ್ ಎಂಬ ಕಲಾವಿದ: ಹಾಲೆಂಡ್ ಮೂಲದ ವ್ಯಾನಿಗನ್ ಸತ್ತ ಪ್ರಾಣಿಗಳ ಚರ್ಮವನ್ನು ಸಂಸ್ಕರಿಸಿ ತದ್ರೂಪಿ ಕಲಾಕೃತಿಗಳನ್ನು ರಚಿಸುತ್ತಿದ್ದರು. ಇವರು ಮಹಾರಾಜರ ಕಾಲದಿಂದಲೇ ಮೈಸೂರಿನ ನಜರ್ಬಾದ್ನಲ್ಲಿರುವ ಬಿಸ್ಸಾಲ್ ಮುಂಟಿ ಬಂಗಲೆಯಲ್ಲಿ ಬಂದು ನೆಲೆಸಿದ್ದರು. ಶತಾಯುಷಿಯಾದ ವ್ಯಾನಿಗನ್ ಮಾ.12 ರಂದು ನಿಧನರಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

