ಮೈಸೂರು

'ಶಿಕ್ಷಣದಿಂದ ಮಹಿಳೆ ಪರಿವರ್ತನೆ ಸಾಧ್ಯ'

Published On :

ಕ.ಪ್ರ.ವಾರ್ತೆ ್ಣ ಹುಣಸೂರು ್ಣ ಮಾ.19
ಮಹಿಳಾ ಶಿಕ್ಷಣವೊಂದರಿಂದ ಮಾತ್ರ ಮನೆ ಮತ್ತು ಸಮಾಜದ ಸಕಾರಾತ್ಮಕ ಪರಿವರ್ತನೆ ಹೊಂದಲು ಸಾಧ್ಯ ಎಂದು ಜಿಪಂ ಸದಸ್ಯೆ ಡಾ.ಪುಷ್ಪಾವತಿ ಅಮರನಾಥ್ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ವತಿಯಿಂದ ಆರ್ಯವೈಶ್ಯ ಕಲ್ಯಾಣಮಂಟಪದಲ್ಲಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಮಹಿಳಾ ವಿರೋಧಿ ನೀತಿ ಮೆಟ್ಟಿನಿಲ್ಲಲು ಪ್ರತಿಯೊಬ್ಬ ಮಹಿಳೆಯೂ ಶಿಕ್ಷಣ ಪಡೆಯಬೇಕು. ಸಮಾನತೆ ಹಾಗೂ ಸ್ವಾತಂತ್ರ್ಯಕ್ಕಾಗಿ 103 ವರ್ಷಗಳಿಂದ ಪ್ರಪಂಚದಾದ್ಯಂತ ಹೋರಾಟ ನಡೆಸಿದ್ದರೂ ಇಂದಿಗೂ ಅದು ಗಗನ ಕುಸುಮವಾಗಿದೆ. ಭಾರತದಲ್ಲಿ ಹೆಣ್ಣಿಗೆ ದೇವತೆ ಸ್ಥಾನ ನೀಡಿದ್ದರೂ ಇಂದಿಗೂ ನವದೆಹಲಿಯ ನಿರ್ಭಯಾಳಂತಹ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ ಎಂದು ವಿಷಾದಿಸಿದರು.
ಲಿಂಗ ಸಮಾನತೆ ಪರಿಕಲ್ಪನೆಯನ್ನು ಹೆತ್ತ ತಾಯಿ ತನ್ನ ಮನೆಯಿಂದಲೇ ಆರಂಭಿಸಿದಾಗ ಮಾತ್ರ ಹೆಣ್ಣಿನ ಶೋಷಣೆ ನಿಲ್ಲತ್ತದೆ ಎಂದರು. ಮಹಿಳಾ ಸಂರಕ್ಷಣಾಧಿಕಾರಿ ರಂಗಮಣಿ, ಪ್ರಾಂಶುಪಾಲೆ ಎಂ.ಆರ್. ಸೌಭಾಗ್ಯ ಮಾತನಾಡಿದರು. ಸಿಡಿಸಿ ಸದಸ್ಯರಾದ ಗೋವಿಂದರಾಜಗುಪ್ತ, ಹರೀಶ್ಬಾಬು, ಡಿ. ತಿಮ್ಮನಾಯಕ, ಸಾಂಸ್ಕೃತಿಕ ವಿಭಾಗದ ಕಾರ್ಯದರ್ಶಿ ಪುಟ್ಟಶೆಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.