ಮೈಸೂರು

ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿಗೆ ಚಾಲನೆ

Published On :

ಕ.ಪ್ರ.ವಾರ್ತೆ ಮೈಸೂರು ಮಾ.19
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬಹು ವರ್ಷಗಳಿಂದ ನೆನೆಗುದಿಗೆ ಬಿದಿದ್ದ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗೆ ಸೋಮವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ. ರಾಮದಾಸ್ ಅವರು 3.16 ಕೋಟಿ ಮೊತ್ತದ 8 ಲೈನ್‌ಗಳ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು. ಕ್ರೀಡಾಂಗಣದ ಆವರಣದಲ್ಲಿ ಗರಡಿ ಮನೆ ನಿರ್ಮಾಣಕ್ಕೆ 50 ಲಕ್ಷ, ಕ್ರೀಡಾನಿಲಯಕ್ಕೆ 1.41 ಕೋಟಿ, ಈಜುಗೊಳಕ್ಕೆ 3.62 ಲಕ್ಷ ಬಿಡುಗಡೆಯಾಗಿದ್ದು ಈಗಾಗಲೇ ಕಾಮಗಾರಿ ಆರಂಭವಾಗಿದೆ. ಒಳಾಂಗಣ ಕ್ರೀಡಾಂಗಣದಲ್ಲಿ ಮರದ ನೆಲಹಾಸು ನಿರ್ಮಾಣಕ್ಕೆ 1 ಕೋಟಿ ಮತ್ತು ಹಾಕಿ ಟರ್ಫ್‌ಗೆ 2.85 ಲಕ್ಷ ನಿಗದಿ ಪಡಿಸಲಾಗಿದೆ. ಒಟ್ಟಾರೆ 12.53 ಕೋಟಿಗಳಿಗೆ ಸರ್ಕಾರ ಮಂಜೂರಾತಿ ನೀಡಿದೆ.
ಗುದ್ದಲಿ ಪೂಜೆ ನೆರವೇರಿಸಿದ ಬಳಿಕ ಸಚಿವರನ್ನು ಭೇಟಿ ಮಾಡಿದ ಕ್ರೀಡಾಪಟುಗಳು, ತಮಗೆ ವಾಹನ ಸೌಲಭ್ಯ ನೀಡಲಾಗುವುದು ಎಂದು ಹೇಳಿ ಬಹಳ ದಿನವೇ ಕಳೆದರೂ ಯಾವುದೇ ವಾಹನದ ವ್ಯವಸ್ಥೆ ಆಗಿಲ್ಲ ಎಂದು ದೂರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಇಲಾಖೆ ಸಹಾಯಕ ನಿರ್ದೇಶಕ ತೆ. ಸುರೇಶ್, ಒಂದು ವಾರದಲ್ಲಿ ವಾಹನ ಬರುತ್ತದೆ. ಸದ್ಯಕ್ಕೆ ಬೇರೆ ಇಲಾಖೆಯಿಂದ ವಾಹನ ನಿಯೋಜಿಸಲಾಗುತ್ತದೆ. ಏಪ್ರಿಲ್ ಬಳಿಕ ಇಲಾಖೆಗೆ ಪ್ರತ್ಯೇಕವಾದ ಹೊಸ ವಾಹನ ಬರಲಿದೆ ಎಂದರು. ಬಳಿಕ ಕ್ರೀಡಾಪಟುಗಳು ಒಳಾಂಗಣ ಕ್ರೀಡಾಂಗಣದ ಮೇಲ್ಛಾವಣಿಯನ್ನು ಸಾಕಷ್ಟು ಬಾರಿ ದುರಸ್ತಿಗೊಳಿಸಿದ್ದರೂ ಮಳೆ ಬಂದಾಗ ಸೋರುತ್ತದೆ. ಆದ್ದರಿಂದ ಮರದ ನೆಲಹಾಸು ಹಾಕಿಸಿದರೆ ಪ್ರಯೋಜನವಿಲ್ಲ. ಆದ್ದರಿಂದ ಮೊದಲು ಛಾವಣಿ ದುರಸ್ತಿ ಪಡಿಸುವಂತೆ ಮನವಿ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.