ಮೈಸೂರು

ಹಂಪಾಪುರದಲ್ಲಿ ದುರ್ಗಾ ಪರಮೇಶ್ವರಿ ರಥೋತ್ಸವ

Published On :

ಕ.ಪ್ರ.ವಾರ್ತೆ ್ಣ ಕೆ.ಆರ್.ನಗರ ್ಣ ಮಾ.19
ತಾಲೂಕಿನ ಹಂಪಾಪುರ ಗ್ರಾಮದ ಪ್ರಸಿದ್ಧ ದುರ್ಗಾಪರಮೇಶ್ವರಿ ದೇವಿಯ ರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
ಉತ್ಸವ ಮೂರ್ತಿಗಳನ್ನು ಅಲಂಕೃತಗೊಂಡ ರಥದಲ್ಲಿ ಕುಳ್ಳಿರಿಸಿ ಮಂಗಳವಾದ್ಯ, ಅರ್ಚಕರಿಂದ ವೇದಘೋಷ ಹಾಗೂ ಭಕ್ತರ ಹಷೋದ್ಘಾರಗಳೊಂದಿಗೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ನೆರೆದಿದ್ದ ಸಾವಿರಾರು ಭಕ್ತರು ರಥಕ್ಕೆ ಹಣ್ಣು-ದವನಗಳನ್ನು ಅರ್ಪಿಸಿ ತಮ್ಮ ಹರಕೆ ತೀರಿಸಿದರು. ಬೆಳಗ್ಗೆಯಿಂದ ಭಕ್ತರು ದೇವಾಲಯದಲ್ಲಿ ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.
ಶಾಸಕ ಸಾ.ರಾ. ಮಹೇಶ್, ತಾಪಂ ಸದಸ್ಯ ನಾಗಣ್ಣ, ಗ್ರಾಪಂ ಅಧ್ಯಕ್ಷ ಚಲುವೇಗೌಡ, ಸದಸ್ಯ ನಾಗರಾಜು, ನವನಗರ ಅರ್ಬನ್ ಬ್ಯಾಂಕ್ನ ಅಧ್ಯಕ್ಷ ಕೆ.ಎನ್. ಬಸಂತ್, ಕಾಂಗ್ರೆಸ್ ಮುಖಂಡರಾದ ದೊಡ್ಡಸ್ವಾಮಿಗೌಡ, ಜಿಪಂ ಮಾಜಿ ಸದಸ್ಯ ಡಿ.ರವಿಶಂಕರ್, ಹಿಂದುಳಿದ ವರ್ಗಗಳ ಒಕ್ಕೂಟದ ತಾ. ಅಧ್ಯಕ್ಷ ಜಿ.ಎಂ. ಹೇಮಂತ್, ಅರುಣ್ಕುಮಾರ್ ಮತ್ತು ಕೆಂಪರಾಜು, ಎಚ್.ಸಿ. ಕುಮಾರ್, ಪ್ರಭಾಕರ್ ಜೈನ್, ಎಚ್.ಎಂ. ಯೋಗೇಂದ್ರ, ತುಳಸಿರಾಮನಾಯಕ, ರಾಜನಾಯಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.