ಮೈಸೂರು

ಗದ್ದಿಗೆಯಲ್ಲಿ ವೈಭವದ ರಥೋತ್ಸವ

Published On :

ಕ.ಪ್ರ.ವಾರ್ತೆ ್ಣ ಹುಣಸೂರು ್ಣ ಮಾ.21
ತಾಲೂಕಿನ ಗದ್ದಿಗೆಯಲ್ಲಿ ಗುರುವಾರ ಗುರು ಕೆಂಡಗಣ್ಣೇಶ್ವರ ಹಾಗೂ ಮಹದೇಶ್ವರ ಸ್ವಾಮಿಯ ರಥೋತ್ಸವ ವೈಭವದಿಂದ ನಡೆಯಿತು.
ಗುರುವಾರ ಬೆಳಗ್ಗೆ ದೇವರಿಗೆ ಅಭಿಷೇಕ ಹಾಗೂ ವಿವಿಧ ಮಠಾಧೀಶರ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದ ಬಳಿಕ ದೊಡ್ಡರಥದಲ್ಲಿ ಕೆಂಡಗಣ್ಣೇಶ್ವರ ಸ್ವಾಮಿ, ಚಿಕ್ಕರಥದಲ್ಲಿ ಮಹದೇಶ್ವರಸ್ವಾಮಿಯ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ನೆರೆದಿದ್ದ ಮಹಿಳೆಯರೂ ಸೇರಿದಂತೆ ಸಾವಿರಾರು ಭಕ್ತರು ಜಯಘೋಷಗಳ ನಡುವೆ ರಥಗಳನ್ನೆಳೆದು ಪುನೀತಭಾವ ತಾಳಿದರು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸುತ್ತಮುತ್ತಲ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಮತ್ತು ನವ ವಧು- ವರರು ತೇರಿಗೆ ಹಣ್ಣು ಎಸೆಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ರಥ ಎಳೆಯುವ ವೇಳೆ ನಾದಸ್ವರ ಹಾಗೂ ತಮಟೆ ಸದ್ದಿಗೆ ಭಕ್ತರು ಕುಣಿದು ಕುಪ್ಪಳಿಸಿದರು.
ಕುಟ್ಟವಾಡಿ ಗೇಟ್‌ವರೆಗೆ ರಥ ಕೊಂಡೊಯ್ದು ಮತ್ತೆ ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು. ದೇವಸ್ಥಾನ ಸಮಿತಿ ವತಿಯಿಂದ ಜಾತ್ರೆಗೆ ಬಂದಿದ್ದ 10 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಎಸ್‌ಐ ಅರುಣ್, ರಾಘವೇಂದ್ರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದ್ದರು.
ದೇವಸ್ಥಾನದ ಆವರಣದಲ್ಲಿ ಬುಧವಾರ ಸಂಜೆ ಕೊಂಡೋತ್ಸವ ನಡೆಯಿತು. ಹರಕೆ ಹೊತ್ತಿದ್ದ ನೂರಾರು ಮಂದಿ ಭಕ್ತರು ಹರಳು, ಕಾಳು, ಉಪ್ಪು, ಗಂಧದಕಡ್ಡಿ, ಕರ್ಪೂರಗಳನ್ನು ಕೊಂಡಕ್ಕೆ ಸಮರ್ಪಿಸಿ ಜಾನುವಾರುಗಳಿಗೆ ಕಾಯಿಲೆ ಬಾರದಂತೆ ಪ್ರಾರ್ಥಿಸಿ ಜಾನುವಾರುಗಳನ್ನು ಪ್ರದಕ್ಷಿಣೆ ಹಾಕಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.