ಮೈಸೂರು

ಬ್ಯಾಂಕ್ ತೆರೆಯಲು ಗ್ರಾಮಸ್ಥರ ಮನವಿ

Published On :

ಎಚ್.ಡಿ.ಕೋಟೆ: ತಾಲೂಕಿನ ಎನ್. ಬೆಳತೂರಿನಲ್ಲಿ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಆರಂಭಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.  ಅಂತರಸಂತೆಯಿಂದ ಬಾವಲಿಯವರೆಗೆ 40 ಕಿಮೀ ಇದ್ದು, ಹೋಬಳಿಯ ಬಾವಲಿ, ಭೈರನಕುಪ್ಪೆ, ಮೆಚ್ಚೂರು, ವಡಕನಮಾಳ, ಬೆಳತೂರು ಗ್ರಾಮಗಳಿಂದ ನೂರಾರು ಜನ ಅಂತರಸಂತೆಯಲ್ಲಿರುವ ಕಾವೇರಿ ಗ್ರಾಮೀಣ ಬ್ಯಾಂಕ್‌ಗೆ ಹೋಗಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ಅನೇಕ ಸ್ತ್ರೀಶಕ್ತಿ ಸಂಘಗಳು, ಸ್ವಯಂ ಸಂಸ್ಥೆಗಳು ಹಾಗೂ ರೈತರಿಗೆ ತೊಂದರೆ ಉಂಟಾಗಿದೆ ಎಂದಿದ್ದಾರೆ.  2003 ರ ಹಿಂದೆ ಎನ್, ಬೆಳತೂರು ಗ್ರಾಮದಲ್ಲಿ ಕಾವೇರಿ ಗ್ರಾಮೀಣ ಬ್ಯಾಂಕ್ ಕಾರ್ಯ ನಿರ್ವಹಿಸುತಿತ್ತು. ಅದರೆ, ಸರಿಯಾಗಿ ವ್ಯವಹಾರ ನಡೆಯದ ಕಾರಣ ಅಂತರಸಂತೆಗೆ ಸ್ಥಳಾಂತರ ಮಾಡಲಾಯಿತು.ಅಂತರಸಂತೆ ಗ್ರಾಮದಲ್ಲಿ ಒಂದೇ ಬ್ಯಾಂಕ್ ಇರುವುದರಿಂದ ಇತರೆ ರಾಷ್ಟ್ರೀಕೃತ ಬ್ಯಾಂಕ್ ತೆರೆದರೆ ತುಂಬ ಅನುಕೂಲವಾಗಲಿದೆ ಎಂದು ಅವರು ಮನವಿ ಮಾಡಿದ್ದಾರೆ.
ಕಾಳಿಕಾಂಬ ಜಾತ್ರೆ
ಸುತ್ತೂರು: ನಂಜನಗೂಡು ತಾಲೂಕಿನ ಸುತ್ತೂರು ಸಮೀಪದ ಎಸ್. ಹೊಸಕೋಟೆ ಗ್ರಾಮದಲ್ಲಿ ಮಾ. 22ರಂದು ಕಾಳಿಕಾಂಬ ಕೊಂಡೋತ್ಸವ ಹಾಗೂ ಮಾ. 23ರಂದು ಕಪಿಲೇಶ್ವರ ರಥೋತ್ಸವ ನಡೆಯಲಿದೆ. ಜಾತ್ರೆಯ ಅಂಗವಾಗಿ ಬೀದಿನಾಟಕ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಭಕ್ತಾದಿಗಳಿಗಾಗಿ ಪಾನಕ ಮತ್ತು ಮಜ್ಜಿಗೆ ವಿತರಣೆ ವ್ಯವಸ್ಥೆಯನ್ನು ಗ್ರಾಮದ ಯುವಕರು ಹಮ್ಮಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.