ಮೈಸೂರು

ರಾಜಕೀಯ ಬೆಳೆವಣಿಗೆಗೆ ಸಹಕಾರ ಕ್ಷೇತ್ರ ವೇದಿಕೆ

Published On :

ಕ.ಪ್ರ ವಾರ್ತೆ ್ಣ ಮೈಸೂರು ್ಣ ಮಾ.21
ಸಹಕಾರ ಕ್ಷೇತ್ರ ರಾಜಕೀಯವಾಗಿ ಬೆಳೆಯುವವರ ವೇದಿಕೆಯಾಗಿ ಮಾರ್ಪಟ್ಟಿದೆ ಎಂದು ಪತ್ರಿಕೋದ್ಯಮಿ ರಾಜಶೇಖರ ಕೋಟಿ ಹೇಳಿದರು.
ನಗರದ ಜಗನ್ಮೋಹನ ಅರಮನೆಯಲ್ಲಿ ನಡೆದ ಶ್ರಮಿಕರ ಪತ್ತಿನ ಸಹಕಾರ ಸಂಘದ ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಸಹಕಾರ ಕ್ಷೇತ್ರ ರಾಜಕೀಯವಾಗಿ ಬೆಳೆಯುವವರ ಜಿಗಿತಕ್ಕೆ ವೇದಿಕೆಯಾಗಿದೆ ಎಂದರು. ರಾಜಕಾರಣ ಪ್ರವೇಶದಿಂದ ಈ ಕ್ಷೇತ್ರ ಕಲುಷಿತಗೊಂಡಿದೆ. ರಾಜಕೀಯ ಹೊರತಾಗಿದ್ದರೆ ಸಹಕಾರ ಪದ್ಧತಿಯಡಿ ಅನೇಕರು ಅಭಿವೃದ್ಧಿ ಹೊಂದುತ್ತಿದ್ದರು. ಅಂದಮಾತ್ರಕ್ಕೆ ಸಹಕಾರಿ ಕ್ಷೇತ್ರದಿಂದ ರಾಜಕಾರಣಿಗಳನ್ನು ದೂರ ಮಾಡಬೇಕು ಎಂದಲ್ಲ. ಬದಲಿಗೆ ರಾಜಕಾರಣಿಗಳು ಸಹಕಾರ ಸಂಘಗಳಲ್ಲಿ ರಾಜಕೀಯ ಮರೆತು ನಿಷ್ಪಕ್ಷಪಾತವಾಗಿ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಸಹಕಾರ ಪದ್ಧತಿ ಯಶಸ್ವಿಯಾಗುತ್ತದೆ ಎಂದು ಅವರು ಹೇಳಿದರು. ಇಸ್ರೇಲ್‌ನಂತ ಸಣ್ಣ ರಾಷ್ಟ್ರ ಸಹಕಾರ ಪದ್ಧತಿಯಿಂದ ಉತ್ತಮ ಪ್ರಗತಿ ಸಾಧಿಸಿದೆ. ಆದರೆ, ಭಾರತದಲ್ಲಿ ಅದು ಸಾಧ್ಯವಾಗಿಲ್ಲ. ಶ್ರಮಿಕರ ಪತ್ತಿನ ಸಹಕಾರ ಸಂಘ ದುಡಿಯುವ ವರ್ಗದ ಪರವಾದ ಸಂಘವಾದ್ದರಿಂದ ಯಶಸ್ವಿಯಾಗಿದೆ ಎಂದು ಅವರು ಹೇಳಿದರು.
ನಗರಪಾಲಿಕೆ ಸದಸ್ಯ ಕೆ.ಟಿ. ಚಲುವೇಗೌಡ ಮಾತನಾಡಿ, ಸಂಘಕ್ಕೆ ಅಗತ್ಯವಿರುವ ನಿವೇಶನವನ್ನು ಎಂಡಿಎ ವತಿಯಿಂದ ಕೊಡಿಸಲು ತಾವು ಶ್ರಮಿಸುವುದಾಗಿ ಭರವಸೆ ನೀಡಿದರು. ಸಮಾರಂಭ ಉದ್ಘಾಟಿಸಿದ ಶಾಸಕ ಎಚ್.ಎಸ್. ಶಂಕರಲಿಂಗೇಗೌಡ ಕಾರ್ಯಕ್ರಮಕ್ಕೆ ಶುಭ ಕೋರಿದರು. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ಸದಸ್ಯರ ಹಿತದೃಷ್ಟಿಯಿಂದ ಮರಣ ನಿಧಿ ಸ್ಥಾಪಿಸಲಾಗಿದೆ. ಸಂಘದ ಅಧ್ಯಕ್ಷ ಜಿ. ಜಯರಾಮ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಂಘದ ನಿರ್ದೇಶಕರಾದ ಕಲ್ಯಾಣಮ್ಮ, ಎನ್. ಅಯ್ಯಪ್ಪ, ಕಪನಿಗೌಡ, ಸಿ. ಬಸವರಾಜು, ಸುರೇಶ್, ಸೋಮಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.