ಮೈಸೂರು

ಹಣದ ಬ್ಯಾಗ್ ಕದ್ದ ಆರೋಪಿ ಬಂಧನ

Published On :

ಹುಣಸೂರು: ಕಾರಿನಲ್ಲಿಟ್ಟಿದ್ದ ಹಣದ ಬ್ಯಾಗ್‌ಅನ್ನು ಎಗರಿಸಿದ್ದ ಆರೋಪಿಯನ್ನು ಪಟ್ಟಣ ಪೊಲೀಸರು ಬಂಧಿಸಿ ಆತನಿಂದ 4.85 ಲಕ್ಷ ವಶಪಡಿಸಿಕೊಂಡಿದ್ದಾರೆ.
ಪಟ್ಟಣದ ಯಶೋದಾ ವರ್ಕ್ಸ್‌ನ ಮೆಕ್ಯಾನಿಕ್, ಪಟ್ಟಣದ ವಿ.ಪಿ. ಬೋರೆ ನಿವಾಸಿ ಸುಬ್ರಮಣಿ (ಸುಬ್ಬು) ಬಂಧಿತ ಆರೋಪಿ.
ಬುಧವಾರ ಸಂಜೆ ನರಸಿಂಹಸ್ವಾಮಿ ತಿಟ್ಟಿನ ಮಹದೇವಶೆಟ್ಟಿ ಎಂಬವರು ತಮ್ಮ ಕಾರಿನ ಡ್ರೈವರ್ ಸೀಟಿನ ಹಿಂಭಾಗದ ಸೀಟಿನಲ್ಲಿ 5 ಲಕ್ಷ ಹಣವಿದ್ದ ಬ್ಯಾಗ್ ಇಟ್ಟು ಹಳೆ ಬಸ್ ನಿಲ್ದಾಣದ ಮುಂದಿನ ಮಲ್ಲಿಕಾರ್ಜುನ ಬಾರ್ ಬಳಿ ಕಾರು ನಿಲ್ಲಿಸಿ ಊಟಕ್ಕೆ ತೆರಳಿದ್ದರು. ಈ ನಡುವೆ ಕಾರ್ ದುರಸ್ತಿಗೆ ಸಂಬಂಧಿಸಿದಂತೆ ಮೆಕ್ಯಾನಿಕ್ ಸುಬ್ರಮಣಿಗೆ ಬ್ಯಾಗಿನಿಂದ 15 ಸಾವಿರ ನೀಡಿ ಉಳಿದ 4.85 ಲಕ್ಷ ಆತನ ಎದುರಲ್ಲೇ ಕಾರಿನಲ್ಲಿಟ್ಟಿದ್ದರು.
ಊಟ ಮುಗಿಸಿ ಹಿಂದಿರುಗುವಷ್ಟರಲ್ಲಿ ಹಣ ಚೀಲ ನಾಪತ್ತೆಯಾಗಿತ್ತು. ಕೂಡಲೇ ಮಹದೇವ ಶೆಟ್ಟಿ ಪಟ್ಟಣ ಪೊಲೀಸರಿಗೆ ದೂರು ನೀಡಿದರು. ಡಿವೈಎಸ್ಪಿ ಮುದ್ದುಮಹದೇವಯ್ಯ ಹಾಗೂ ವೃತ್ತ ನಿರೀಕ್ಷಕ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಅಪರಾಧ ವಿಭಾಗದ ಎಸ್‌ಐ ಥಾಮಸ್ ಅವರನ್ನೊಳಗೊಂಡ ತಂಡ ಮಾಹಿತಿ ಪಡೆದು ಆರೋಪಿಯನ್ನು ಬಂಧಿಸಿತು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.