ಸರೋಜಿನಿ ನಾಯ್ಡು ಪ್ರಶಸ್ತಿಗೆ ಅರ್ಜಿ ಆಹ್ವಾನ
ಕ.ಪ್ರ.ವಾರ್ತೆ ಮೈಸೂರು ಮಾ.22
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಹಿಳೆ ಎಂಬ ಶೀರ್ಷಿಕೆಯಡಿ ಪ್ರಕಟವಾಗುವ ಅತ್ಯುತ್ತಮ ಲೇಖನಕ್ಕೆ ಪತ್ರಕರ್ತರಿಗೆ ಸರೋಜಿನಿ ನಾಯ್ಡು ಪ್ರಶಸ್ತಿ ನೀಡಲಾಗುವುದು.
ನವದೆಹಲಿಯ ಹಂಗರ್ ಯೋಜನೆಯಡಿ ಪ್ರತಿವರ್ಷ ನೀಡಲಾಗುತ್ತಿರುವ ಈ ಪ್ರಶಸ್ತಿಯು ಕಳೆದ ನಾಲ್ಕು ವರ್ಷಗಳಿಂದ ಕರ್ನಾಟಕದ ಪತ್ರಕರ್ತರು ಪಡೆಯುತ್ತಿರುವುದು ಹಮ್ಮೆಯ ಸಂಗತಿ ಎಂದು ಒಡಿಪಿ ಸಂಯೋಜನಾ ಅಧಿಕಾರಿ ಯಮುನಾ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಗ್ರಾಮ ಪಂಚಾಯತಿ ಮಹಿಳಾ ಸದಸ್ಯೆಯರ ಯಶೋಗಾಥೆ ಕುರಿತಾದ ಲೇಖನಗಳನ್ನು ಆಹ್ವಾನಿಸಿದ್ದು, 16 ಜೂ. 2012 ರಿಂದ 15 ಜೂ.2013 ಒಳಗೆ ಪ್ರಕಟವಾಗಿರುವ ಲೇಖನಗಳನ್ನು ಪ್ರಶಸ್ತಿಗೆ ಕಳುಹಿಸಬಹುದಾಗಿದೆ. ಕಾರ್ಯನಿರತ ಪತ್ರಕರ್ತರು ಇದರಲ್ಲಿ ಭಾಗವಹಿಸಬಹುದಾಗಿದ್ದು, ಒಬ್ಬರು ಎಷ್ಟು ಲೇಖನಗಳನ್ನಾದರೂ ಕಳುಹಿಸಬಹುದು ಎಂದರು.
ನವದೆಹಲಿಯಲ್ಲಿ ಅ.2 ರಂದು ನಡೆಯುವ ಕಾರ್ಯಕ್ರಮದಲ್ಲಿ ಅತ್ಯುತ್ತಮ ಲೇಖನದ ಪುರಸ್ಕೃತರಿಗೆ 2 ಲಕ್ಷ ನಗದು ಹಾಗೂ ಪಾರಿತೋಷಕ ನೀಡಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕೆ.ಆರ್.ನಗರದ ಮಾಯಗೌಡನಹಳ್ಳಿಯ ಗ್ರಾಪಂ ಉಪಾಧ್ಯಕ್ಷೆ ರುಕ್ಮಿಣಿ, ಸೋಮವಾರ ಪೇಟೆ ಹಾನಗಲ್ ಗ್ರಾಪಂ ಸದಸ್ಯೆ ಚಂದ್ರಿಕಾ ತಮ್ಮ ಅನುಭವ ಹಂಚಿಕೊಂಡರು.
ಲೇಖನದ ಸ್ವರೂಪ ಹಾಗೂ ಮತ್ತಿತರ ವಿವರಗಳ ಮಾಹಿತಿಗೆ ಮೊ. 8553307264 ಸಂಪರ್ಕಿಸಬಹುದು. ಈ ಸಂದರ್ಭದಲ್ಲಿ ಕಳೆದ ವರ್ಷಗಳಲ್ಲಿ ಪ್ರಶಸ್ತಿಗಾಗಿ ಬಂದಿದ್ದ ವಿವಿಧ ಲೇಖನಗಳನ್ನು ಪ್ರದರ್ಶಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

