ಪತಿ ಬಂಧನ: ಮನನೊಂದ ಪತ್ನಿ ಆತ್ಮಹತ್ಯೆ

Updated on: 

ಕ.ಪ್ರ.ವಾರ್ತೆ ್ಣ ಭೇರ್ಯ ್ಣ ಮಾ.30
ಮಧ್ಯರಾತ್ರಿ ವೇಳೆ ತನ್ನ ಪತಿಯನ್ನು ಪೊಲೀಸರು ಬಂಧಿಸಿದರು ಎಂದು ಮನನೊಂದ ಪತ್ನಿ ತಂಬಾಕು ಬ್ಯಾರನ್‌ಗೆ ಬೆಂಕಿ ಹಚ್ಚಿ ತಾನು ಸಜೀವ ದಹನವಾದ ಘಟನೆ ಸಮೀಪದ ಕಾವಲ್‌ಹೊಸೂರು ಗ್ರಾಮದಲ್ಲಿ ಜರುಗಿದೆ.
ಶಿಕ್ಷಕ ರಾಮಕೃಷ್ಣೇಗೌಡರ ಪತ್ನಿ ಸುಕನ್ಯಾ (32) ಮೃತಪಟ್ಟವರು. ಇವರಿಗೆ ಇಬ್ಬರು ಪುತ್ರರಿದ್ದು, ಪತಿ ರಾಮಕೃಷ್ಣ ಚಿಕ್ಕಭೇರ್ಯ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಚೆಕ್‌ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮಕೃಷ್ಣೇಗೌಡರನ್ನು ಪೊಲೀಸರು ರಾತ್ರಿ ವೇಳೆಯಲ್ಲಿ ಬಂಧಿಸಿದರು. ಪತ್ನಿ ಸುಕನ್ಯಾ ಪತಿಯನ್ನು ಬಂಧಿಸದಂತೆ ಪೊಲೀಸರಿಗೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಕೂಡಲೇ ಪಕ್ಕದಲ್ಲಿದ್ದ ತಂಬಾಕು ಬ್ಯಾರನ್‌ಗೆ ಹೋಗಿ ಬೆಂಕಿ ಹಚ್ಚಿಕೊಂಡರು. ಅಕ್ಕಪಕ್ಕ ಮನೆಯವರು ಬೆಂಕಿ ಕಂಡು ಹೊರ ಬಂದು ನೋಡಿದಾಗ ಸುಕನ್ಯಾಳ ಕಿರಾಚಾಟ ಕೇಳಿದರು. ಎಷ್ಟೆ ಪ್ರಯತ್ನಪಟ್ಟರು ಬೆಂಕಿಯ ಕೆನಾಲಿಗೆ ಸಿಕ್ಕಿ ಸಂಪೂರ್ಣ ದಹನವಾದರು. ಕೂಡಲೇ ಕೆ.ಆರ್. ನಗರದ ಆಗ್ನಿಶಾಮಕ ದಳವರು ಬಂದು ಬೆಂಕಿ ನಂದಿಸಿದರು ಕೂಡ ಆಕೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದರು.
ಘಟನೆ ನಡೆದು ಮೂರು ಗಂಟೆ ಕಳೆದರೂ ಸ್ಥಳಕ್ಕೆ ಪೊಲೀಸರು ಬರಲಿಲ್ಲ. ಜೊತೆಗೆ ಸ್ಥಳಕ್ಕೆ ಎಸ್ಪಿ ಅವರು ಬರುವಂತೆ ಸಂಬಂಧಿಕರು ಪಟ್ಟು ಹಿಡಿದಿದ್ದು, ಕಾವಲ್‌ಹೊಸೂರು ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಸ್ಥಳಕ್ಕೆ ಸರ್ಕಲ್ ಇನ್ಸ್‌ಪೆಕ್ಟರ್ ಪ್ರಸನ್ನಕುಮಾರ್ ತಮ್ಮ ಸಿಬ್ಬಂದಿಯೊಂದಿಗೆ ಆಗಮಿಸಿ, ಪರಿಶೀಲಿಸಿದ ನಂತರ ಮೃತ ಮಹಿಳೆ ಸುಕನ್ಯಾಳ ಸಂಬಂಧಿಕರ ಜೊತೆ ಮಾತುಕತೆ ನಡೆಸಿ ಪ್ರಕರಣ ದಾಖಲಿಸಿ ಕೊಂಡರು.
ಚೆಕ್‌ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ ಶಿಕ್ಷಕ ರಾಮಕೃಷ್ಣನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಧೀಶರು ಜಾಮೀನಿನ ಮೇಲೆ ಬಿಡುಗಡೆ ಮಾಡಿದರು. ನಂತರ ಪತ್ನಿಯ ಶವಸಂಸ್ಕಾರ ನಡೆಯಿತು. ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮಿಗೌಡ ಭೇಟಿ ನೀಡಿ ಮೃತರ ಕುಟುಂಬದವರಿಗೆ ಸಾಂತ್ವನ ಹೇಳಿದರು. ಜಿಪಂ ಮಾಜಿ ಸದಸ್ಯ ಎಂ.ಟಿ. ಕುಮಾರ್, ಗ್ರಾಪಂ ಮಾಜಿ ಅಧ್ಯಕ್ಷ ಬಿ.ಎಚ್. ಮಹದೇವು, ವಕೀಲ ಸತೀಶ್, ಶಿಕ್ಷಕ ಚಂದ್ರು, ತಾ. ಕ್ಷೇತ್ರ ಶಿಕ್ಷಣಾಧಿಕಾರಿ ಜವರೇಗೌಡ ಸಂತಾಪ ಸೂಚಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com