ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮಾ.30
ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದಿರುವವರು ಹಾಗೂ ಜ. 1ಕ್ಕೆ 18 ವರ್ಷ ಪೂರ್ಣಗೊಂಡವರು ಏ. 7ರ ಒಳಗಾಗಿ ಅರ್ಜಿ ನಮೂನೆ-6ರಲ್ಲಿ ವಿವರಗಳನ್ನು ಭರ್ತಿ ಭಾವಚಿತ್ರ, ವಯಸ್ಸಿನ ಮತ್ತು ವಾಸಸ್ಥಳದ ದಾಖಲೆಗಳೊಂದಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಸಿ. ಶಿಖಾ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ಸಾರ್ವಜನಿಕರು ಹಾಗೂ ಮತದಾರರು ತಮ್ಮ ಹೆಸರುಗಳನ್ನು ಬಗ್ಗೆ ಸಂಬಂಧಪಟ್ಟ ತಾಲೂಕು ತಹಸೀಲ್ದಾರರ ಕಚೇರಿಗಳಲ್ಲಿ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಚುನಾವಣಾ ಶಾಖೆಯಲ್ಲಿ ಪರಿಶೀಲಿಸಿ ಪಟ್ಟಿಯಲ್ಲಿ ತಮ್ಮ ಹೆಸರಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
ಈ ಪಟ್ಟಿಯಲ್ಲಿ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲು ಆನ್ಲೈನ್ ಮೂಲಕವೂ ಅವಕಾಶವಿದೆ. ಹೆಚ್ಚಿನ ವಿವರಗಳಿಗಾಗಿ ಡಿಡಿಠ್ಛಜ್ಟ್ಞಛ್ಠಟಿಛಡಿಛ್ಞಛ.್ಞಛ್ಠ.ಟ್ಝ್ಛಿ.್ಝಟಿ ವೆಬ್ಸೈಟ್ನಿಂದ ಪಡೆಯಬಹುದು. ಮತದಾರರ ಪಟ್ಟಿ ಪರಿಶೀಲಿಸಿ ತಿದ್ದುಪಡಿಗಳೇನಾದರೂ ಇದ್ದಲ್ಲಿ ನಮೂನೆ 8, ವರ್ಗಾವಣೆಗಾಗಿ 8ಎ ಹಾಗೂ ಹಾಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದು ಹಾಕಲು ನಮೂನೆ 7ರಲ್ಲಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.