ಎನ್‌ಕಾಸಿಂಗ್‌ಗೆ ಬೆಸ್ಟ್ ಕೆಡೆಟ್ ಪ್ರಶಸ್ತಿ

Updated on: 

ಕ.ಪ್ರ.ವಾರ್ತೆ ಸುತ್ತೂರು ಮಾ.30
ಇಲ್ಲಿನ ಜೆಎಸ್‌ಎಸ್ ವಸತಿ ಪ್ರೌಢಶಾಲೆಯ ಎನ್‌ಸಿಸಿ ವಾಯುದಳದ ಕೆಡೆಟ್ ಎನ್‌ಕಾಸಿಂಗ್‌ಗೆ ಈ ಬಾರಿಯ ಗ್ರೂಪ್ ಹಂತದ ಬೆಸ್ಟ್ ಕೆಡೆಟ್ ಪ್ರಶಸ್ತಿ ಹಾಗೂ ನಗದು ಪುರಸ್ಕಾರ ಲಭಿಸಿದೆ.
ಮೈಸೂರಿನ 4ನೇ ಕರ್ನಾಟಕ ಏರ್‌ಸ್ಕ್ವಾರ್ಡನ್ ಘಟಕದ ವಿಂಗ್ ಕಮಾಂಡರ್ ಜೆ. ಜೋಸೆಫ್ ಪ್ರಶಸ್ತಿ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಪ್ರೌಢಶಾಲೆ ಹಾಗೂ ಕಾಲೇಜು ಹಂತಗಳಲ್ಲಿ ಎನ್‌ಸಿಸಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ತಮ್ಮ ವ್ಯಕ್ತಿತ್ವವನ್ನು ಸದೃಢವಾಗಿ ರೂಪಿಸಿಕೊಳ್ಳಬಹುದು. ಈ ದಿಶೆಯಲ್ಲಿ ಸುತ್ತೂರು ವಾಯುದಳದ ಕೆಡೆಟ್ ಎನ್‌ಕಾಸಿಂಗ್ ಉತ್ತಮ ತರಬೇತಿ ಪಡೆದಿದ್ದಾರೆ ಎಂದು ಹೇಳಿದರು. ಮೂಲತಃ ಮಣಿಪುರ ರಾಜ್ಯದವನಾದ ಎನ್‌ಕಾಸಿಂಗ್, ಸುತ್ತೂರು ಜೆಎಸ್‌ಎಸ್ ವಸತಿ ಶಾಲೆಯಲ್ಲಿ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದು, ಎನ್‌ಸಿಸಿ ವಾಯುದಳದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾನೆ. ಮಹಾರಾಷ್ಟ್ರದಲ್ಲಿ ಜರುಗಿದ ಶಿವಾಜಿ ಟ್ರಯಲ್ ಟ್ರೆಕಿಂಗ್, ಪಶ್ಚಿಮ ಬಂಗಾಳದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಸುಬ್ರುತೋ ಪುಟ್‌ಬಾಲ್ ಪಂದ್ಯ ಹಾಗೂ ವಿವಿಧ ಸ್ಥಳೀಯ ಎನ್‌ಸಿಸಿ ಶಿಬಿರಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಗಳಿಸಿದ್ದಾನೆ.
ಪ್ರಶಸ್ತಿ ವಿಜೇತ ಕೆಡೆಟ್ ಎನ್‌ಕಾಸಿಂಗ್‌ನನ್ನು ಸುತ್ತೂರು ಜೆಎಸ್‌ಎಸ್ ಸಂಸ್ಥೆಯ ಆಡಳಿತಾಧಿಕಾರಿ ಶೇಖರ್ ಪಾಟೀಲ್, ಗೌರವ ಸಹಾಯಕ ಆಡಳಿತಾಧಿಕಾರಿ ಎಸ್.ಪಿ. ಉದಯಶಂಕರ್, ಮುಖ್ಯೋಪಾಧ್ಯಾಯ ಜಿ. ಶಿವಮಲ್ಲು ಹಾಗೂ ಎನ್‌ಸಿಸಿ ಅಧಿಕಾರಿ ಮ.ಗು. ಬಸವಣ್ಣ ಅಭಿನಂದಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com