ಕ.ಪ್ರ.ವಾರ್ತೆ ಎಚ್.ಡಿ. ಕೋಟೆ ಮಾ.30
ಇಲ್ಲಿನ ಮೈಸೂರು ಬ್ಯಾಂಕ್ ಪಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಜೆಡಿಎಸ್ ಕಚೇರಿಯನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಶನಿವಾರ ಉದ್ಘಾಟಿಸಿದರು.
ನಂತರ ನಡೆದ ಸಮಾವೇಶದಲ್ಲಿ ಮಾತನಾಡಿ, ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು, ಈ ತಾಲೂಕಿನಿಂದ ಜೆಡಿಎಸ್ ವತಿಯಿಂದ ಜಿಲ್ಲಾಧ್ಯಕ್ಷ ಎಸ್. ಚಿಕ್ಕಮಾದು ಕಣಕ್ಕೆ ಇಳಿದಿದ್ದು, ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ರಾಜ್ಯದಲ್ಲಿ ಈ ಬಾರಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಕಾವೇರಿ ವಿಚಾರದಲ್ಲಿ ಜನತೆಗೆ ಅನ್ಯಾಯವಾಗಿದ್ದು, ಪೂರ್ಣ ಪ್ರಮಾಣದ ಅಧಿಕಾರವು ಲಭ್ಯವಾದರೆ, ಹೋರಾಟ ನಡೆಸಬಹುದು. ಕಾವೇರಿ ಹೋರಾಟವು ಪೂರ್ಣವಾಗುವವರೆಗೂ ನನ್ನ ಉಸಿರು ನಿಲ್ಲುವುದಿಲ್ಲ. ಕಾವೇರಿ ವಿಚಾರದಲ್ಲಿ ರಾಜ್ಯದ ಜನತೆಗೆ ಸಂಪೂರ್ಣ ಅನ್ಯಾಯವಾಗಿದೆ ಎಂದು ಅವರು ಕಿಡಿಕಾರಿದರು.
ದೇಶದಲ್ಲಿ ತಾಯಿ ತನ್ನ ಎಲ್ಲಾ ಮಕ್ಕಳನ್ನು ಒಂದೇ ರೀತಿಯಲ್ಲಿ ಕಾಣುವುದಿಲ್ಲವೊ, ಅಲ್ಲಿಯವರೆಗೆ ನೆಮ್ಮದಿಯನ್ನು ದೇಶದಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಹೇಳಿದರು.
ಒಂದು ಹಂತದಲ್ಲಿ ಜೆಡಿಎಸ್ ಪಕ್ಷವನ್ನು ಮುಗಿಸಲು ಹುನ್ನಾರ ನಡೆದಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಕುಮಾರಸ್ವಾಮಿಗೆ ರೈತರ ಬಗ್ಗೆ ಅಪಾರವಾದ ಕಾಳಜಿ ಇದೆ ಎಂದು ತಿಳಿಸಿದರು.
ಎಂ. ಶಿವಣ್ಣ, ಎಂ. ಮಹದೇವ್, ಜಿ.ಟಿ. ದೇವೇಗೌಡ ಮಾತನಾಡಿದರು. ಇತ್ತೀಚೆಗೆ ನಡೆದ ಪಪಂ ಚುನಾವಣೆಯಲ್ಲಿ ಪಕ್ಷದ ವತಿಯಿಂದ ವಿಜೇತರನ್ನು ಸನ್ಮಾನಿಸಲಾಯಿತು. ತಾಲೂಕು ಅಧ್ಯಕ್ಷ ಸಿ.ವಿ. ನಾಗರಾಜು, ಸರಗೂರು ಬ್ಲಾಕ್ ಅಧ್ಯಕ್ಷ ರವಿ, ಜಿಲ್ಲಾಧ್ಯಕ್ಷ ಎಸ್. ಚಿಕ್ಕಮಾದು, ಜಿಪಂ ಮಾಜಿ ಸದಸ್ಯ ವೆಂಕಟಸ್ವಾಮಿ, ಜಿಪಂ ಉಪಾಧ್ಯಕ್ಷೆ ಎಂ.ರೆ. ಸುಚಿತ್ರಾ, ಶೈಲಾ ಸುಧಾಮಣಿ, ಮಾಜಿ ಪ್ರಧಾನ ಎಂ.ಸಿ. ದೊಡ್ಡನಾಯಕ, ಮಳಲಿ ಶಾಂತಕುಮಾರ, ಮಾರುತಿ, ಶಂಭುಗೌಡ, ನರಸಿಂಹೇಗೌಡ, ಬೋರೇಗೌಡ, ನಾಗರಾಜು, ಆನಂದ್, ಕೇಶವಮೂರ್ತಿ, ಬಸವರಾಜು, ಬಸವರಾಜು, ಬೆಟ್ಟಸ್ವಾಮಿ, ಶಿವಯ್ಯ, ಈರೇಗೌಡ ಮೊದಲಾದವರು ಇದ್ದರು.