ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮಾ.30
ಯುವಕರಲ್ಲಿ ರಾಜಕೀಯ ಪ್ರಜ್ಞೆ ಮೂಡಿಸುವ ಸಲುವಾಗಿ ಯುವಕರ ಶಾಂತಿ ಪಥಸಂಚಲನ ಎಂಬ ವಿಶೇಷ ಕಾರ್ಯಕ್ರಮ ಶನಿವಾರ ನಡೆಯಿತು.
ನಗರ ಪಾಲಿಕೆ ಮಾಜಿ ಸದಸ್ಯ ಎಂ. ಪ್ರದೀಪ್‌ಕುಮಾರ್ ಅವರ ನೇತೃತ್ವದಲ್ಲಿ ಅಗ್ರಹಾರದ ನೂರೊಂದು ಗಣಪತಿ ದೇವಸ್ಥಾನದಿಂದ ಆರಂಭಗೊಂಡ ಈ ಪಥಸಂಚಲನವು, ನಂಜುಮಳಿಗೆ, ಬಲ್ಲಾಳ್ ವೃತ್ತ, ಅಶೋಕಪುರಂ, ರೇಷ್ಮೆ ಕಾರ್ಖಾನೆ ವೃತ್ತ, ವಿದ್ಯಾರಣ್ಯಪುರಂ ಅಂದಾನಿ ವೃತ್ತದ ಮೂಲಕ ಸಾಗಿ ಚಾಮುಂಡಿಪುರಂನಲ್ಲಿ ಅಂತ್ಯಗೊಂಡಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರದೀಪ್‌ಕುಮಾರ್, ಯುವಜನತೆ ಕುರಿತು ರಾಷ್ಟ್ರೀಯ ಪಕ್ಷಗಳು ಕೇವಲ ವೇದಿಕೆಯಲ್ಲಿ ಭಾಷಣ ಮಾಡಲಿವೆ ಹೊರತು ಅವರ ರಾಜಕೀಯ ಭವಿಷ್ಯಕ್ಕೆ ಅಗತ್ಯ ಉತ್ತೇಜನ ನೀಡುತ್ತಿಲ್ಲ. ಮುಖ್ಯಮಂತ್ರಿ ಹಾಗೂ ಮಂತ್ರಿಗಳ ಮಕ್ಕಳಿಗೆ ಮಾತ್ರ ಅವಕಾಶ ನೀಡುತ್ತಾ ಬಂದಿದೆ. ಈ ಬಗ್ಗೆ ರಾಜಕೀಯ ಪ್ರಜ್ಞೆಯನ್ನು ಯುವಜನರಲ್ಲಿ ಬೆಳೆಸುವ ಸಲುವಾಗಿ ಹಾಗೂ ಯಾವುದೇ ಪಕ್ಷ ಟಿಕೆಟ್ ನೀಡದಿದ್ದರೂ ಪಕ್ಷೇತರ ಅಭ್ಯರ್ಥಿಯಾಗಿ ರಾಜಕೀಯ ಪ್ರವೇಶಿಸಿ ಈ ಕ್ಷೇತ್ರದಲ್ಲಿಯೂ ಯುವಶಕ್ತಿ ಬೆಳೆಯಬೇಕು ಎಂಬ ಸಂದೇಶವನ್ನು ಈ ಮೂಲಕ ಪ್ರಚಾರ ಮಾಡಲಾಗುತ್ತಿದೆ ಎಂದರು.
ಕಳೆದ ಬಾರಿ ನಗರ ಪಾಲಿಕೆ ಸದಸ್ಯನಾಗಿದ್ದ ನಾನು ಬೆಸ್ಟ್ ಕಾರ್ಪೋರೇಟರ್ ಎಂಬ ಪ್ರಶಸ್ತಿ ಪಡೆದಿದ್ದೇನೆ. ಕೆ.ಆರ್ ಕ್ಷೇತ್ರದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಸಂಬಂಧ ಕಳೆದ ಒಂದು ತಿಂಗಳಿಂದ ಪ್ರಚಾರ ನಡೆಸುತ್ತಿದ್ದೇನೆ. ಪಕ್ಷ ಟಿಕೆಟ್ ನೀಡದಿದ್ದರೂ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ತಿಳಿಸಿದರು.
ಸುಮಾರು ಸಾವಿರಕ್ಕೂ ಹೆಚ್ಚಿನ ಯುವಕರು ಪಥಸಂಚಲನದಲ್ಲಿ ಭಾಗವಹಿಸಿದ್ದರು.