ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮಾ.30
ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಸಾರ್ವತ್ರಿಕ ಚುನಾವಣೆಯು ಮೇ 5ರ ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಜರುಗಲಿದ್ದು, ಪ್ರಜಾಪ್ರಭುತ್ವದ ಬಲವರ್ಧನೆಗೆ ಜಿಲ್ಲೆಯ ಎಲ್ಲ ಮತದಾರರು ಸಂವಿಧಾನಾತ್ಮಕವಾಗಿರುವ ಮತದಾನದ ಹಕ್ಕನ್ನು ಕಡ್ಡಾಯವಾಗಿ ಮತ್ತು ತಪ್ಪದೆ ಚಲಾಯಿಸುವಂತೆ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿ ಸಿ. ಶಿಖಾ ಮನವಿ ಮಾಡಿದ್ದಾರೆ.
ಮೈಕ್ರೋ ವೀಕ್ಷಕರ ನೇಮಕಾತಿ ಮಾಹಿತಿ ನೀಡಲು ಸೂಚನೆ: ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ದಿನದಂದು ಸಂದಿಗ್ಧ (ಕ್ರಿಟಿಕಲ್) ಪೂರಕ ಮತಗಟ್ಟೆಗಳಲ್ಲಿ ಕರ್ತವ್ಯ ನಿರ್ವಹಿಸಲು ಮೈಕ್ರೋ ವೀಕ್ಷಕರ ನೇಮಿಸಲು ಕೇಂದ್ರ ಸರ್ಕಾರಿ ಕಚೇರಿ ಅಧಿಕಾರಿ,
ಸಿಬ್ಬಂದಿ, ಬ್ಯಾಂಕ್, ಎಲ್ಐಸಿ, ಕೇಂದ್ರ ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿ ಸೇವೆಯು ಹೆಚ್ಚಿನ ಪ್ರಮಾಣದಲ್ಲಿ ಅವಶ್ಯಕತೆ ಇದೆ. ಈ ಕುರಿತು ಮೈಸೂರು ಜಿಲ್ಲಾಡಳಿತ ಸದರಿ ಮಾಹಿತಿ ಪಡೆಯಲು ಕ್ರಮವಹಿಸಿದೆ.