ವ್ಯವಸ್ಥಿತವಾಗಿ ಪ್ರಚಾರ ಮಾಡಿದರೆ ಗೆಲವು
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಮೇ 10
ಸಂಘಟನೆಯ ಮೂಲಕ ವ್ಯವಸ್ಥಿತವಾಗಿ ಕೆಲಸ ಮಾಡಿದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಧ್ಯ ಎಂದು ಮಾಜಿ ಸಚಿವ ಸಿ.ಟಿ. ರವಿ ಹೇಳಿದರು.
ಇಲ್ಲಿನ ವಿಶ್ವಮಾನವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಬಿಜೆಪಿ ಪಕ್ಷದ ತಾಲೂಕು ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಒಂದು ರಾಷ್ಟೀಯ ಪಕ್ಷವಾಗಿದ್ದು, ರಾಷ್ಟ್ರೀಯ ವಿಚಾರಗಳ ಬಗ್ಗೆ ಹಿಂದಿನಿಂದಲೂ ಹಿತಾಸಕ್ತಿ ಕಾಯ್ದುಕೊಂಡು ಬಂದಿದೆ. ಪ್ರಸ್ತುತ ಜಾತಿ ಅನಿವಾರ್ಯವಾಗಿರುವುದು ಸತ್ಯ. ಆದರೆ ಬಿಜೆಪಿ ಎಂದಿಗೂ ಜಾತಿ ಭೇದಭಾವದಲ್ಲಿ ನಂಬಿಕೆ ಇಟ್ಟಿಲ್ಲ. ಕಾರ್ಯಕರ್ತರು ವಿಶ್ವಾಸ ಮತ್ತು ಭರವಸೆಗಳೊಂದಿಗೆ ಜನಸಾಮಾನ್ಯರ ಬಳಿ ಮತಯಾಚಿಸಬೇಕು. ಆಗ ಮಾತ್ರ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಧ್ಯ.
ಪಿರಿಯಾಪಟ್ಟಣ ವಿಧಾನಸಭಾ ಚುನಾವಣೆಗೆ ವಿಧಾನ ಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಪಕ್ಷದ ಉಸ್ತುವಾರಿಯಾಗಿ ಕೆಲಸ ನಿರ್ವಹಿಸಲಿದ್ದು, ತಾವು ಸಹಕಾರಿಯಾಗಿರುವುದಾಗಿ ತಿಳಿಸಿದರು.
ಜಾತಿಯಲ್ಲಿ ನಂಬಿಕೆ ಇಲ್ಲ: ವಿಧಾನಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಮಾತನಾಡಿ, ಬಿಜೆಪಿಗೆ ಜಾತಿಯಲ್ಲಿ ನಂಬಿಕೆ ಇಲ್ಲ. ಕೇವಲ ನೀತಿಯಲ್ಲಿ ಮಾತ್ರ ಪಕ್ಷ ನಂಬಿಕೆ ಇಟ್ಟಿದೆ. ರಾಷ್ಟ್ರೀಯತೆ, ಏಕತೆ ಬಗೆಗಿನ ಬದ್ಧತೆ ಹೊಂದಿದ ಏಕೈಕ ಪಕ್ಷ ಬಿಜೆಪಿಯಾಗಿದೆ. ಈ ಹಿಂದೆ ಪಕ್ಷದಿಂದ ಟಿಕೆಟ್ ಪಡೆದು ಸ್ಪರ್ಧಿಸಿ ಪಕ್ಷದ ಲಾಭ ಪಡೆದು ಗೆಲುವು ಸಾಧಿಸಿದ ಎಚ್.ಸಿ. ಬಸವರಾಜು ಪಕ್ಷಕ್ಕೆ ದ್ರೋಹಮಾಡಿ ಹೋಗಿದ್ದಾರೆ. ಅವರು ಸೇರದ ಪಕ್ಷಗಳೇ ಇಲ್ಲ ಎಂದು ಹೇಳಿದರು.
ಅಂತೆಯೇ ಪಕ್ಷದಿಂದ ಕಳೆದ ಬಾರಿ ಸ್ಪರ್ಧಿಸಿದ್ದ ಎಚ್.ಡಿ. ಗಣೇಶ್ ಸಹಾ ಸ್ವಇಚ್ಛೆಯಿಂದ ಪಕ್ಷ ಬಿಟ್ಟು ಹೋಗಿದ್ದಾರೆ. ಪಕ್ಷ ಹಿಂದಿನಿಂದಲೂ ಯಾರಿಗೂ ದ್ರೋಹ ಮಾಡಿಲ್ಲ. ಆದರೆ ಪಕ್ಷವನ್ನು ಬಳಸಿಕೊಂಡ ಹಿಂದಿನ ಕೆಲವು ಮುಖಂಡರೆನಿಸಿಕೊಂಡವರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಇದರಿಂದಾಗಿಯೇ ಪಕ್ಷ ಈ ಬಾರಿ ಉತ್ತಮ ಕಾರ್ಯಕರ್ತರೊಬ್ಬರಿಗೆ ಟಿಕೆಟ್ ನೀಡುವ ತೀರ್ಮಾನ ತೆಗೆದುಕೊಂಡು ಸಣ್ಣಮೊಗೇಗೌಡರಿಗೆ ಟಿಕೆಟ್ ನೀಡಿತ್ತು. ಆದರೆ ಅವರ ಅಕಾಲಿಕ ನಿಧನದಿಂದಾಗಿ ಮತ್ತೊಬ್ಬ ನಿಷ್ಠಾವಂತ ಕಾರ್ಯಕರ್ತ ಆರ್.ಟಿ. ಸತೀಶ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಪಕ್ಷದ ಕಾರ್ಯಕರ್ತರು ಒಟ್ಟಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಮನವಿ ಮಾಡಿದರು. ಪಕ್ಷದ ತಾ. ಅಧ್ಯಕ್ಷ ವಿ.ಜಿ. ಅಪ್ಪಾಜಿಗೌಡ ಆಶ್ಚರ್ಯಕರ ರೀತಿಯಲ್ಲಿ ಮಾತನಾಡಿ, ತಮ್ಮನ್ನು ಪಕ್ಷದ ತಾಲೂಕು ಅಧ್ಯಕ್ಷ ಸ್ಥಾನದಿಂದ ಮುಕ್ತಿಗೊಳಿಸುವಂತೆ ವೇದಿಕೆಯಲ್ಲಿದ್ದ ಗಣ್ಯರ ಬಳಿ ಮನವಿ ಮಾಡಿದರು. ಪಕ್ಷದ ಅಭ್ಯರ್ಥಿ ಆರ್.ಟಿ. ಸತೀಶ್ ಮಾತನಾಡಿದರು.
ಸೇರ್ಪಡೆ: ಮೂಲ ಬಿಜೆಪಿ ಕಾರ್ಯಕರ್ತರಾಗಿ ಹಲವಾರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿದ್ದು, ಕೆಲವು ದಿನಗಳ ಹಿಂದೆ ಕೆಜೆಪಿ ಪಕ್ಷ ಸೇರಿದ್ದ ಸತ್ತೇಗಾಲ ಶಿವರಾಂ ಹಾಗೂ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಸೇರಿದ್ದ ಮನು ಮತ್ತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಜಿಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಡಾ.ಶಿವರಾಂ, ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ್ಬಾಬು, ಪಕ್ಷದ ಪ್ರಕೋಷ್ಟಗಳ ಜಿಲ್ಲಾಧ್ಯಕ್ಷ ಗೋಪಾಲ್ರಾವ್, ರಾಜ್ಯ ಯೂತ್ ಮೋರ್ಚಾ ಉಪಾಧ್ಯಕ್ಷ ಪ್ರತಾಪ್, ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯ ಪಿ.ವಿ. ಬಸವರಾಜಪ್ಪ, ಪದಾಧಿಕಾರಿಗಳಾದ ಕೆ.ಕೆ. ಶಶಿ, ಪಿ.ಟಿ. ವೇಣುಗೋಪಾಲ್, ಕೃಷ್ಣಪ್ರಸಾಧ್, ಬಿ.ಎಸ್. ರಾಮಚಂದ್ರು, ಎಂ.ಎಂ. ರಾಜೇಗೌಡ, ಲೋಕಪಾಲಯ್ಯ, ಅರುಣ್, ಅಣ್ಣೇಗೌಡ, ಕೃಷ್ಣೇಗೌಡ, ಪ್ರಸನ್ನಕೇಶವ, ವಿಕ್ರಂರಾಜ್, ರಮೇಶ್, ಸುದರ್ಶನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

