ಮೈಸೂರು

ಸೌತನಹಳ್ಳಿ ಬಳಿ ಚಿರತೆ ಪ್ರತ್ಯಕ್ಷ: ಜನ ಆತಂಕ

Published On :

ಕ.ಪ್ರ.ವಾರ್ತೆ  ಕೆ.ಆರ್. ನಗರ  ಮೇ 10
ತಾಲೂಕಿನ ಸೌತನಹಳ್ಳಿ ಗ್ರಾಮದ ರಾಗಿಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡು ಗುಡ್ಡದ ಸುತ್ತ ಸುಳಿದಾಡಿದ್ದರಿಂದ, ಗ್ರಾಮಸ್ಥರು ಹೆದರಿ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಚಿರತೆಯನ್ನು ಹಿಡಿಯಲು ತೀವ್ರ ಪ್ರಯತ್ನ ಪಡುತ್ತಿದ್ದು, ಕೆಆರ್ಎಸ್ ಅಣೆಕಟ್ಟೆಯ ಹಿನ್ನೀರಿನ ಪ್ರದೇಶಕ್ಕೆ ಗುರುವಾರ ಮಧ್ಯಾಹ್ನ ಚಿರತೆ ಬಂದಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಮೈಸೂರು ತಾಲೂಕು ರಟ್ಟನಹಳ್ಳಿ ಅರಣ್ಯ ಪ್ರದೇಶದಿಂದ ಬಂದಿರುವ ಚಿರತೆ ಎರಡು ದಿನಗಳಿಂದ ಈ ಭಾಗದಲ್ಲಿ ಸುಳಿದಾಡುತ್ತಿದ್ದು, ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜನರು ಚಿರತೆಯನ್ನು ನೋಡಿ ಗಾಬರಿಗೊಂಡು ಗ್ರಾಮಸ್ಥರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೆಲವು ಯುವಕರು ಗುಡ್ಡದ ಮೇಲೆ ಹತ್ತಿ ಚಿರತೆಯನ್ನು ಅಟ್ಟಾಡಿಸಿ ಗಾಬರಿಪಡಿಸಿದ್ದರಿಂದ ಭಯದಿಂದ ಕಲ್ಲಿನ ಪೊದೆಯಲ್ಲಿ ಅಡಗಿಕೊಂಡಿರುವ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯವರು ಗುರುವಾರ ರಾತ್ರಿಯೇ ಬೋನು ಇಟ್ಟು ನಾಯಿಯನ್ನು ಕಟ್ಟಿ ಹಾಕಿದ್ದು, ರಾತ್ರಿಯಿಡೀ ಕಾದರೂ ಚಿರತೆ ಹೊರಬಂದಿಲ್ಲ. ಶುಕ್ರವಾರ ರಾತ್ರಿಯೂ ಬೋನಿನೊಂದಿಗೆ ಸ್ಥಳದಲ್ಲಿ ಇಲಾಖೆ ಸಿಬ್ಬಂದಿ ಕಾಯಲಿದ್ದಾರೆ ಎಂದು ಕೆ.ಆರ್. ನಗರ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಎಚ್.ಕೆ. ರಾಜು ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.