ಮೈಸೂರು

ನಾಳೆ ವಿದ್ಯುತ್ ಪೂರೈಕೆ ವ್ಯತ್ಯಯ

Published On :

ಮೈಸೂರು:  ಹೂಟಗಳ್ಳಿ ಉಪವಿಭಾಗದ ಬೋಗಾದಿ ಘಟಕದ ವ್ಯಾಪ್ತಿಗೆ ಬರುವ 11 ಕೆ.ವಿ ಬೋಗಾದಿ ಎಂಯುಎಸ್ಎಸ್ನಿಂದ ಹೊರಡುವ ಐಶ್ವರ್ಯ ಮತ್ತು ಚೌಡೇಶ್ವರಿ ಫೀಡರ್ನಲ್ಲಿ ತುರ್ತು ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ಮೇ 27ರ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ನ ವಿ.ವಿ. ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ನಿಲುಗಡೆಯಾಗುವ ಪ್ರದೇಶಗಳು: ವಿಜಯನಗರ 3ನೇ ಹಂತ, ಹಿನಕಲ್, ವಿಜಯನಗರ 4ನೇ ಹಂತ ಮತ್ತು 1ನೇ ಫೇಸ್, ವಿಜಯಶ್ರೀಪುರ, ಸುಧಾ ಲೇಔಟ್ ಮತ್ತು ಗರುಡಚಾರ್ ಲೇಔಟ್.
ಸಂಶೋಧನಾ ಪ್ರಶಸ್ತಿ
ಮೈಸೂರು:  ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಐಎಫ್ಐಎಂ ಬಿಸ್ನೆಸ್ ಸ್ಕೂಲ್ನಲ್ಲಿ ನಡೆದ ಐದನೇ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಮೈಸೂರಿನ ಜೆಎಸ್ಎಸ್ ಸಿಎಂಎಸ್ ಸಹಾಯಕ ಪ್ರಾಧ್ಯಾಪಕಿ ಅರುಣ ಆದರ್ಶ್ ಹಾಗೂ ವಿದ್ಯಾರ್ಥಿನಿ ಎಂ. ಸವಿತಾ ಅವರು ಜಂಟಿಯಾಗಿ ನಡೆಸಿದ ಸಂಶೋಧನೆಗೆ ಪ್ರಶಸ್ತಿ ದೊರೆತಿದೆ.
ಶಾಲಾ ದಾಖಲಾತಿ ಹೆಚ್ಚಿಸಲು ಸಭೆ
ಮೈಸೂರು:  ಮಹಾರಾಣಿ ಮಾದರಿ ಕನ್ನಡ ಶಾಲೆಯಲ್ಲಿ (ಎನ್ಟಿಎಂಎಸ್) ಮಕ್ಕಳ ದಾಖಲಾತಿ ಹೆಚ್ಚಿಸಲು ಉತ್ತೇಜಕ ಕ್ರಮ ರೂಪಿಸುವ ಸಲುವಾಗಿ ಮೇ 27ರ ಸಂಜೆ 5.30ಕ್ಕೆ ರಾಮಕೃಷ್ಣನಗರದ ಇ ಮತ್ತು ಎಫ್ ಬ್ಲಾಕ್ನಲ್ಲಿರುವ ನೃಪತುಂಗ ಕನ್ನಡ ಶಾಲೆಯಲ್ಲಿ ಸಭೆ ಕರೆಯಲಾಗಿದೆ ಎಂದು ಕನ್ನಡ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಸ.ರ. ಸುದರ್ಶನ ಹೇಳಿದ್ದಾರೆ. ಸದರಿ ಶಾಲೆಯಲ್ಲಿ ಮೇ 29ರಿಂದ ಮಕ್ಕಳ ದಾಖಲಾತಿ ಮಾಡಿಕೊಳ್ಳಲಾಗುವುದು ಎಂಬ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜ್ ಅವರ ಪ್ರಕಟಣೆಯನ್ನು ಸಮಿತಿ ಸ್ವಾಗತಿಸಿದೆ.
ಸಿಎಂಗೆ ಅಭಿನಂದನೆ
ಮೈಸೂರು: ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಿದ್ದರಾಮಯ್ಯ ಅವರಿಗೆ ಮೈಸೂರು ಜಿಲ್ಲಾ ಅಂಗವಿಕಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮೆಲ್ಲಹಳ್ಳಿ ಸಿ. ಕುಮಾರ್, ಕಾರ್ಯದರ್ಶಿ ನಿಂಗರಾಜು ಕಿರಾಳು ಹಾಗೂ ಪದಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.